ಈ ರಾಶಿಯವರಿಗಿಂದು ಮನಸ್ಸಿಗೆ ನೆಮ್ಮದಿ, ಕಾರ್ಯಸಾಧನೆ ಆಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬ ಸೌಖ್ಯವಿದೆ. ಆಕಸ್ಮಿಕ ಧನಲಾಭ. ವಿದೇಶ ಪ್ರಯಾಣ ಯೋಗವಿದೆ. ಯತ್ನ ಕಾರ್ಯಗಳಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 7

ವೃಷಭ: ದಾಯಾದಿ ಕಲಹ ಉಂಟಾಗುವುದು. ವಿದ್ಯಾಭ್ಯಾಸ ದಲ್ಲಿ ಹಿನ್ನಡೆ ಅನುಭವಿಸುವಿರಿ. ದ್ರವ್ಯಲಾಭ ಮತ್ತು ಭೂಲಾಭವಾಗಲಿದೆ. ಶುಭಸಂಖ್ಯೆ: 5

ಮಿಥುನ: ಹಣದ ತೊಂದರೆ. ಚಂಚಲ ಮನಸ್ಸು ನಿಯಂತ್ರಿಸಿ. ಸ್ನೇಹಿತರಿಂದ ಸಹಾಯ. ದೈವಿಕ ಚಿಂತನೆ. ನೀಚ ಜನರಿಂದ ದೂರವಿರಿ. ಶುಭಸಂಖ್ಯೆ: 4

ಕಟಕ: ಋಣಬಾಧೆ. ನಾನಾ ವಿಚಾರಗಳಲ್ಲಿ ಆಸಕ್ತಿ. ಭಯಭೀತಿ ನಿವಾರಣೆ. ಪರರಿಗೆ ವಂಚಿಸಬೇಡಿ. ಎಲ್ಲಿ ಹೋದರೂ ಅಶಾಂತಿ. ಶುಭಸಂಖ್ಯೆ: 6

ಸಿಂಹ: ಪರಸ್ಥಳ ವಾಸ ಮಾಡಬೇಕಾಗುವುದು. ವ್ಯಾಸಂಗದಲ್ಲಿ ಮುನ್ನಡೆ. ಸ್ಥಿರಾಸ್ತಿ ಸಂಪಾದನೆ. ಶತ್ರುಗಳನ್ನು ಸದೆಬಡಿದ ಖುಷಿ. ಶುಭಸಂಖ್ಯೆ: 4

ಕನ್ಯಾ: ಧರ್ಮದಲ್ಲಿ ಆಸಕ್ತಿ ತೋರಿಸುವಿರಿ. ಕೈಹಾಕಿದ ಕೆಲಸ ಗಳಲ್ಲಿ ಜಯ, ಮನಃಶಾಂತಿ. ವಾಹನ ದುರಸ್ತಿಗಾಗಿ ಧನವ್ಯಯ ಅನಿವಾರ್ಯ. ಶುಭಸಂಖ್ಯೆ: 3

ತುಲಾ: ಮನಸ್ಸಿಗೆ ನೆಮ್ಮದಿ. ಕಾರ್ಯ ಸಾಧನೆಯಾಗಲಿದೆ. ಅಧಿಕ ತಿರುಗಾಟ, ಶತ್ರು ಬಾಧೆ. ಕೃಷಿಯಲ್ಲಿ ಲಾಭ, ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 8

ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ. ಶುಭಕಾರ್ಯ. ವಿನಾಕಾರಣ ಅಪವಾದ. ದೂರ ಪ್ರಯಾಣ. ವಿವಾಹ ಯೋಗ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2

ಧನುಸ್ಸು: ಕ್ರಯ ವಿಕ್ರಯಗಳಿಂದ ಲಾಭ. ಕೃಷಿಕರಿಗೆ ಆದಾಯ. ಆಪ್ತರ ಭೇಟಿಯಾಗಲಿದೆ. ಹಿರಿಯರಲ್ಲಿ ಭಕ್ತಿ. ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 8

ಮಕರ: ಮಹಿಳೆಯರಿಗೆ ವಿಶೇಷ ಲಾಭ. ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ. ಅನಗತ್ಯ ಮಾತಿನಿಂದ ದೂರವಿರುವುದು ಒಳ್ಳೆಯದು. ಶುಭಸಂಖ್ಯೆ:5

ಕುಂಭ: ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ. ಹಿತಶತ್ರುಗಳಿಂದ ತೊಂದರೆಯಾದೀತು. ಆರ್ಥಿಕ ಪರಿಸ್ಥಿತಿ ಏರು-ಪೇರು. ಸಲ್ಲದ ಅಪವಾದ. ಶುಭಸಂಖ್ಯೆ: 1

ಮೀನ: ವಸ್ತ್ರ ಖರೀದಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ವ್ಯಾಪಾರದಲ್ಲಿ ಅಭಿವೃದ್ಧಿ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಭಾಗ್ಯ ವೃದ್ಧಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net