ಈ ರಾಶಿಯ ಮಹಿಳೆಯರಿಗೆ ಇಂದು ವಿಶೇಷ ಅಧಿಕಾರ ದೊರೆಯಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಾರ್ಯಕ್ಷೇತ್ರದಲ್ಲಿ ಒತ್ತಡ. ಭಯ ಭೀತಿ ನಿವಾರಣೆಯಾಗಿ ಮಾನಸಿಕ ನೆಮ್ಮದಿ. ಗುರು ಹಿರಿಯರಲ್ಲಿ ಭಕ್ತಿ ತೋರಿಸುವಿರಿ. ಶುಭಸಂಖ್ಯೆ: 2

ವೃಷಭ: ದೂರ ಪ್ರಯಾಣದ ಸಾಧ್ಯತೆ ದಟ್ಟವಾಗಿದೆ. ದುಃಖದಾಯಕ ಪ್ರಸಂಗಗಳು ಎದುರಾಗುವ ಸಾಧ್ಯತೆ ಇದೆ. ದ್ರವ್ಯನಾಶವಾದೀತು. ಶುಭಸಂಖ್ಯೆ: 8

ಮಿಥುನ: ಗಾಯಕರು ಮತ್ತು ನಟರಿಗೆ ವಿಶೇಷ ದಿನ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಅನಾರೋಗ್ಯ. ವಿವಾಹ ಯೋಗ. ಶುಭಸಂಖ್ಯೆ:3

ಕಟಕ: ದಾಯಾದಿ ಕಲಹ ಅತಿಯಾಗಲು ಬಿಡಬೇಡಿ. ಸಮಾಧಾನ ಮುಖ್ಯ. ಇಲ್ಲಸಲ್ಲದ ತಕರಾರು. ಸ್ತ್ರೀಯರಿಗೆ ತೊಂದರೆ ಇದೆ. ಶುಭಸಂಖ್ಯೆ: 6

ಸಿಂಹ: ಸಣ್ಣ ಮಾತಿನಿಂದ ಕಲಹ ಉಂಟಾಗುವ ಸಾಧ್ಯತೆ ಇದೆ. ಆಲಸ್ಯ ಮನೋಭಾವದಿಂದ ಹೊರಬರಲು ಯತ್ನಿಸಿ. ಶತ್ರು ಬಾಧೆ. ಶುಭಸಂಖ್ಯೆ: 2

ಕನ್ಯಾ: ಭೂ ಸಂಬಂಧದ ವ್ಯವಹಾರದಲ್ಲಿ ನಷ್ಟವಾಗುವುದು. ಋಣವಿಮೋಚನೆ. ಕೃಷಿಯಲ್ಲಿ ಲಾಭವಾಗುವುದು. ಮನೋ ಸುಖ ಇರದು. ಶುಭಸಂಖ್ಯೆ:5

ತುಲಾ: ಸಂಬಂಧಗಳಲ್ಲಿ ಉದ್ವಿಗ್ನತೆ. ಹಣಕಾಸಿನ ಮೂಲಗಳು ಚೆನ್ನಾಗಿರುತ್ತವೆ. ವಿದ್ಯಾರ್ಥಿಗಳು ಕಾಲಹರಣ ಮಾಡುವುದು ಒಳ್ಳೆಯದಲ್ಲ. ಶುಭಸಂಖ್ಯೆ: 7

ವೃಶ್ಚಿಕ: ಆಹಾರದಿಂದ ಆರೋಗ್ಯ ಸಮಸ್ಯೆ ಆಗಲಿದೆ. ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ. ಆರ್ಥಿಕ ಸಹಾಯ ಲಭಿಸುವುದು. ಶುಭಸಂಖ್ಯೆ: 9

ಧನುಸ್ಸು: ಆತ್ಮೀಯ ಸ್ನೇಹಿತನ ಭೇಟಿಯಾಗುವಿರಿ. ಹೆಚ್ಚು ಒತ್ತಡ ಅನುಭವಿಸುವಿರಿ. ಆಕಸ್ಮಿಕ ಧನಾಗಮ. ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 6

ಮಕರ: ಅಜಾಗರೂಕತೆಯಿಂದ ದೂರವಿರಿ. ಅನವಶ್ಯಕ ಚರ್ಚೆಗಳನ್ನು ತಪ್ಪಿಸುವುದು ಕ್ಷೇಮ. ಗಾಯಗೊಳ್ಳುವ ಸಾಧ್ಯತೆ. ಶುಭಸಂಖ್ಯೆ: 4

ಕುಂಭ: ಮನಸ್ಸಿಗೆ ಚಿಂತೆ ಕಾಡುವುದು. ಶುಭಕಾರ್ಯಗಳ ಸಾಧ್ಯತೆ. ಉತ್ತಮ ಬುದ್ಧಿಶಕ್ತಿ. ಸಗಟು ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ: 2

ಮೀನ: ಮಹಿಳೆಯರಿಗೆ ವಿಶೇಷ ಅಧಿಕಾರ ದೊರೆಯಲಿದೆ. ತೀರ್ಥಕ್ಷೇತ್ರ ದರ್ಶನ. ಕಾರ್ಯಸಾಧನೆ. ಸಜ್ಜನ ವಿರೋಧ ಉಂಟಾಗಬಹುದು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net