ಈ ರಾಶಿಯವರಿಗಿಂದು ದಾಂಪತ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ. ಕೆಲಸಕಾರ್ಯಗಳಲ್ಲಿ ಮುನ್ನಡೆ. ಅಸಮಾಧಾನ. ಆಸ್ತಿ ವಿಷಯದಲ್ಲಿ ಆತಂಕ. ಶುಭಸಂಖ್ಯೆ: 9

ವೃಷಭ: ಹತ್ತಿರದ ಪ್ರಯಾಣ. ರಾಜಕೀಯ ವ್ಯಕ್ತಿಗಳ ಭೇಟಿ. ಅಂದುಕೊಂಡ ಕೆಲಸದಲ್ಲಿ ನಿರೀಕ್ಷಿತ ಮುನ್ನಡೆ. ಆಸ್ತಿಯಿಂದ ಲಾಭ ಬರಲಿದೆ. ಶುಭಸಂಖ್ಯೆ: 8

ಮಿಥುನ: ಧನ ಮತ್ತು ಉದ್ಯೋಗ ನಷ್ಟ. ಕುಟುಂಬದಲ್ಲಿ ವಾಗ್ವಾದಗಳು ಹೆಚ್ಚಬಹುದು. ಪತ್ರ ವ್ಯವಹಾರಗಳಿಗೆ ಅನುಕೂಲಕರವಾದ ದಿನ. ಶುಭಸಂಖ್ಯೆ: 2

ಕಟಕ: ಸ್ವಂತ ಉದ್ಯೋಗ, ಉದ್ಯಮದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ನಷ್ಟ. ಯತ್ನ ಕಾರ್ಯಜಯ. ಶುಭಸಂಖ್ಯೆ: 5

ಸಿಂಹ: ನಷ್ಟದ ಪ್ರಮಾಣ ಅಧಿಕ. ಬಡ್ತಿ ಮತ್ತು ಪ್ರಶಂಸೆ ದೊರೆಯಲಿದೆ. ತಂದೆಯಿಂದ ಅನುಕೂಲ. ಕುಲದೇವರನ್ನು ಮರೆಯಬೇಡಿ. ಶುಭಸಂಖ್ಯೆ: 2

ಕನ್ಯಾ: ಆಸ್ತಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ. ಅಧಿಕಾರಿಗಳಿಗೆ ಉತ್ತಮ ದಿನವಲ್ಲ. ದಾಂಪತ್ಯ ಸಮಸ್ಯೆ ಅಧಿಕ, ಸಮಾಧಾನ ಮುಖ್ಯ. ಶುಭಸಂಖ್ಯೆ: 9

ತುಲಾ: ಉದ್ಯೋಗ ಲಾಭ. ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಶತ್ರು ದಮನವಾಗಿ ನಿರಾಳ. ಋಣ ರೋಗ, ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 4

ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯ ವ್ಯಕ್ತಿಗಳ ಸಂಪರ್ಕದಲ್ಲಿ ಇರುವವರಿಗೆ ಅನುಕೂಲ. ಶುಭಸಂಖ್ಯೆ: 7

ಧನುಸ್ಸು: ಬಹುಮಾನದ ಹಣ ಬರುವುದು. ತಾಯಿ ಆರೋಗ್ಯದಲ್ಲಿ ಸುಧಾರಣೆ. ಮನೆಯ ವಾತಾವರಣ ಕಲುಷಿತ. ಆೂರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 3

ಮಕರ: ಶುಭಕಾರ್ಯ ರದ್ದಾಗುವ ಸಂಭವ. ಸ್ನೇಹಿತರು ದೂರವಾದಾರು. ಉನ್ನತ ಅಧಿಕಾರಿಗಳಿಂದ ಪರಿಶೀಲನೆ ಎದುರಿಸಬೇಕಾದೀತು. ಶುಭಸಂಖ್ಯೆ: 9

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡುವಿರಿ. ದಾಂಪತ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಾತಿನಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 4

ಮೀನ: ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕಾದ ದಿನ. ಮನೋರೋಗ ನಿವಾರಣೆ. ಉದ್ಯೋಗ ಸ್ಥಳದಲ್ಲಿ ಅಭಿವೃದ್ಧಿಯಾಗುವುದು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net