

ಮೇಷ: ಅಧಿಕ ಧನಾಗಮನ. ಪ್ರೀತಿ-ಪ್ರೇಮದಲ್ಲಿ ವಿಶ್ವಾಸಕ್ಕೆ ದ್ರೋಹವಾದೀತು. ಮಕ್ಕಳ ನಡತೆಯಿಂದ ಆತಂಕ ಉಂಟಾಗಬಹುದು. ಶುಭಸಂಖ್ಯೆ: 9
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1
ಮಿಥುನ: ಪ್ರೀತಿ ಪ್ರೇಮದ ವಿಷಯದಲ್ಲಿ ಆತಂಕವಿದೆ. ಅಧಿಕ ಖರ್ಚು. ಅತಿಯಾದ ವಿಷಯಾಸಕ್ತಿ ಬೇಡ. ಭಾವನೆಗಳು ಕಾಡುವವು. ಶುಭಸಂಖ್ಯೆ: 6
ಕಟಕ: ಮಹಿಳೆಯರಿಂದ ಆರ್ಥಿಕ ನಷ್ಟ. ರಹಸ್ಯ ವಿಷಯಗಳಿಂದ ಸಮಸ್ಯೆಯಾದೀತು. ಸ್ಥಿರಾಸ್ತಿ ಅಥವಾ ವಾಹನದಲ್ಲಿ ಲಾಭ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಬಂಧು ಬಾಂಧವರಿಂದ ಸಮಸ್ಯೆಯಾದರೂ ನಗಣ್ಯ. ವಿಲಾಸಿ ಜೀವನಕ್ಕೆ ಮಾರುಹೋಗುವಿರಿ. ಶುಭಸಂಖ್ಯೆ: 3
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ಸಿಗುವುದು. ದೂರ ಪ್ರದೇಶದಲ್ಲಿ ಉದ್ಯೋಗ ದೊರೆಯಲಿದೆ. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 2
ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಸಂತಸ. ಆಸೆ-ಆಕಾಂಕ್ಷೆಗಳು ಗರಿಗೆದರುವವು. ಸ್ವಂತ ಉದ್ಯಮ ಕ್ಷೇತ್ರದಲ್ಲಿ ಅನುಕೂಲ. ಶುಭಸಂಖ್ಯೆ: 3
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ. ಪ್ರಯಾಣದಿಂದ ಸಂಕಷ್ಟ. ಉದ್ಯೋಗ ಸ್ಥಳದಲ್ಲಿ ಸಂಶಯಕ್ಕೆ ಒಳಗಾದೀರಿ. ಶುಭಸಂಖ್ಯೆ: 9
ಧನುಸ್ಸು: ಬಂಧುಗಳಿಂದ ಅನಿರೀಕ್ಷಿತ ಲಾಭ. ಅನಾರೋಗ್ಯ ಸಮಸ್ಯೆ ಕಾಡೀತು, ವೈದ್ಯರನ್ನು ಸಂರ್ಪಸಿ. ಭವಿಷ್ಯದ ಚಿಂತೆ ಕಾಡುವುದು. ಶುಭಸಂಖ್ಯೆ: 2
ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲಕರ ದಿನ. ಉತ್ತಮ ಹೆಸರು ಸಂಪಾದನೆ, ಅಧಿಕ ಖರ್ಚು. ಶುಭಸಂಖ್ಯೆ: 6
ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನದ ಬೇಡಿಕೆ. ಪ್ರಯಾಣದಲ್ಲಿ ಶತ್ರು ಕಾಟ. ತಂದೆಯಿಂದ ಅನುಕೂಲ. ಉನ್ನತ ವಿದ್ಯಾಯೋಗ. ಶುಭಸಂಖ್ಯೆ:1
ಮೀನ: ಮಕ್ಕಳಿಂದ ಅನಿರೀಕ್ಷಿತ ಸಂತಸ. ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ. ಸಜ್ಜನರ ನೆರವಿನಿಂದ ಕಾರ್ಯದಲ್ಲಿ ಗೆಲುವು. ಶುಭಸಂಖ್ಯೆ: 5