ನಿತ್ಯಭವಿಷ್ಯ: ಈ ರಾಶಿಯವರಿಗೆ ಕೊಟ್ಟ ಹಣ ಬಂದರೂ ಉಳಿಯುವುದಿಲ್ಲ

Nitya-Bhavishya-vvani-1-2-1
Published on

ಮೇಷ: ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ತಮ್ಮ ಮೇಲಧಿಕಾರಿಗಳಿಂದ ಅನುಕೂಲ ಪಡೆಯುವರು. ಪ್ರವಾಸದಿಂದ ಲಾಭ. ಶುಭಸಂಖ್ಯೆ: 9

ವೃಷಭ: ಸಹೋದರನ ಸಹಾಯ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿ ಅತೀವ ಆಸಕ್ತಿ. ಅಧಿಕ ಲಾಭ. ಅಪೇಗಳಿಗೆ ಸಂತಾನ ಭಾಗ್ಯ. ಶುಭಸಂಖ್ಯೆ:1

ಮಿಥುನ: ಅಪರೂಪದ ಮೃದುಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯ,ಸಂತೋಷ ನೀಡುವುದು. ಕೊಟ್ಟ ಹಣ ಬಂದರೂ ಉಳಿಯದು. ಶುಭಸಂಖ್ಯೆ:3

ಕಟಕ: ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ಹೆಂಡತಿಯ ಆರೋಗ್ಯ ಸುಧಾರಿಸುತ್ತದೆ. ಶುಭಸಂಖ್ಯೆ: 6

ಸಿಂಹ: ಕ್ರೀಡಾಪಟುಗಳು ಅಪೇತ ಗೆಲುವು ಹೊಂದುವುದರಲ್ಲಿ ಯಶಸ್ವಿಯಾಗುವರು. ಸಂಸ್ಥೆಯ ಹೊಸ ಅರ್ಥಿಕ ನೀತಿಯಿಂದ ಲಾಭ. ಶುಭಸಂಖ್ಯೆ: 2

ಕನ್ಯಾ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ರೈತರು ಹಾಗೂ ವಿದ್ಯಾರ್ಥಿವರ್ಗಕ್ಕೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು. ಶುಭಸಂಖ್ಯೆ: 4

ತುಲಾ: ಆಹಾರ, ಉಕ್ಕು ಮುಂತಾದ ಗೃಹಬಳಕೆ ಸಾಮಾನುಗಳ ವರ್ತಕರಿಗೆ ದಿನದ ಪೂರ್ವದಲ್ಲಿ ಅಧಿಕ ಲಾಭ. ದೇವಿ ಸ್ತುತಿ ಮಾಡಿ. ಶುಭಸಂಖ್ಯೆ: 5

ವೃಶ್ಚಿಕ: ಹಣಕಾಸು ಸಂಸ್ಥೆಯವರಿಗೆ ದುಡುಕು ನಿರ್ಧಾರದಿಂದ ನಷ್ಟ. ಧನಾತ್ಮಕ ವರ್ತನೆ ಸುತ್ತಮುತ್ತಲಿನವರ ಕಣ್ಣು ಕೆಂಪಾಗಿಸುತ್ತದೆ. ಶುಭಸಂಖ್ಯೆ: 4

ಧನುಸ್ಸು: ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕ ವಾತಾವರಣ. ಕೋಪದ ಮೇಲೆ ನಿಯಂತ್ರಣವಿರಲಿ. ಗೃಹದಲ್ಲಿ ಶುಭ ಸಮಾರಂಭ. ಶುಭಸಂಖ್ಯೆ: 8

ಮಕರ: ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ. ವೈದ್ಯರಿಗೆ ಉನ್ನತ ಜವಾಬ್ದಾರಿ ಸ್ಥಾನಕ್ಕೆ ವರ್ಗವಣೆಯಾಗುವುದು. ಶುಭಸಂಖ್ಯೆ:6

ಕುಂಭ: ಮಿತ್ರರಿಂದ ಮನಸ್ಸಿಗೆ ನೋವಾಗುವ ಮಾತು ಕೇಳಬೇಕಾಗುವುದು. ಮನೆ, ಪಿತ್ರಾರ್ಜಿತ ಆಸ್ತಿಯ ಹಂಚಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ: 8

ಮೀನ: ಆಪ್ತರ ಕಷ್ಟಕ್ಕೆ ಗಮನ ಕೊಡಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಹಣದ ವ್ಯಾಮೋಹ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net