ಈ ರಾಶಿಯವರಿಗಿಂದು ಶತ್ರುಗಳನ್ನು ಎದುರಿಸುವ ಸಾಮರ್ಥ್ಯವಿರುತ್ತದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಹಾರ ವಸ್ತುಗಳ ಉತ್ಪಾದಕರಿಗೆ ಶುಭ. ವಿದ್ಯಾರ್ಥಿಗಳಿಗೆ ಅನುಕೂಲ. ಇಷ್ಟದೇವರನ್ನು ಪ್ರಾರ್ಥಿಸಿ. ವಿವಾಹದಲ್ಲಿ ಅಡೆತಡೆ ಶುಭಸಂಖ್ಯೆ: 9

ವೃಷಭ: ಸಹೋದರರಿಂದ ಅಸಹಕಾರ. ಉದರ ಬಾಧೆ ಕಾಡೀತು, ವೈದ್ಯರ ಸಲಹೆ ಪಡೆಯುವುದು ಕ್ಷೇಮ. ಹಳೆಯ ಸಾಲ ಮರುಪಾವತಿ. ಶುಭಸಂಖ್ಯೆ:6

ಮಿಥುನ: ಶತ್ರುಗಳ ಸಂಹಾರ. ಸರ್ಕಾರಿ ಕೆಲಸದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ತಂದೆ-ತಾಯಿಯರ ಆರೋಗ್ಯದಲ್ಲಿ ಎಚ್ಚರವಹಿಸಿ. ಶುಭಸಂಖ್ಯೆ: 3

ಕಟಕ: ಸಮಸ್ಯೆಗಳು ಬಗೆಹರಿಯುವವು. ನಿರಾಳಭಾವ. ಮನೆಯಲ್ಲಿ ಸಂಭ್ರಮದ ವಾತಾವರಣ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ:2

ಸಿಂಹ: ನಿರೀಕ್ಷಿತ ಸಾಲಸೌಲಭ್ಯಗಳು ದೊರೆಯುತ್ತವೆ. ದೂರಪ್ರಯಾಣ ಮಾಡಬೇಕಾಗಬಹುದು. ಹಿತಶತ್ರುಗಳ ಬಗ್ಗೆ ಸದಾ ಎಚ್ಚರವಿರಲಿ. ಶುಭಸಂಖ್ಯೆ:9

ಕನ್ಯಾ: ಮಕ್ಕಳ ಪ್ರಗತಿಗಾಗಿ ಶ್ರಮಿಸಿ. ಅತಿಯಾದ ಆತ್ಮವಿಶ್ವಾಸ ಮುಳುವಾಗಬಹುದು, ಹುಷಾರಾಗಿರಿ. ಅತಿಯಾದ ನಂಬಿಕೆಯೂ ಬೇಡ. ಶುಭಸಂಖ್ಯೆ:5

ತುಲಾ: ಆರ್ಥಿಕ ಸ್ಥಿತಿ ಸಾಮಾನ್ಯ. ಬರಹಗಾರರಿಗೆ ಶುಭದಾಯಕವಾದ ದಿನ. ಮಕ್ಕಳೊಂದಿಗೆ ಕಲಹ. ಸಮಾಧಾನ ಬಹುಮುಖ್ಯ. ಶುಭಸಂಖ್ಯೆ: 3

ವೃಶ್ಚಿಕ: ವಾಹನ ಅಪಘಾತದ ಸಂಭವ. ಶತ್ರುಗಳನ್ನು ಎದುರಿಸುವ ಸಾಮರ್ಥ್ಯವಿರುತ್ತದೆ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳ ಬಲವಿದೆ. ಶುಭಸಂಖ್ಯೆ:1

ಧನುಸ್ಸು: ಕೋರ್ಟು ವಿಚಾರದಲ್ಲಿ ಯಶಸ್ಸು ದೊರೆತು ಬಹುದಿನದ ಚಿಂತೆಗೆ ಮುಕ್ತಿ. ತೆರಿಗೆ ತಜ್ಞರಿಗೆ ಕೆಲಸದೊತ್ತಡ, ವಿವಾಹ ಯೋಗ. ಶುಭಸಂಖ್ಯೆ: 9

ಮಕರ: ಮನೋವ್ಯಥೆ ಅಧಿಕ. ಪತ್ನಿಯೊಂದಿಗೆ ವಿರಸ. ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ರಕ್ತ ಸಂಬಂಧಿ ಕಾಯಿಲೆ ಸಾಧ್ಯತೆ. ಶುಭಸಂಖ್ಯೆ:6

ಕುಂಭ: ಹಿರಿಯರೊಂದಿಗೆ ಕಲಹ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಒಡಹುಟ್ಟಿದವರಿಂದ ಸಹಾಯ. ಶುಭಸಂಖ್ಯೆ: 7

ಮೀನ: ದಾಂಪತ್ಯದಲ್ಲಿ ಸಾಮರಸ್ಯ. ಉದ್ಯೋಗದಲ್ಲಿ ಒತ್ತಡ. ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net