ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಂದೆಯ ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಿ. ಸಾಲ ಬಾಧೆ ಕಾಡಬಹುದು. ಪ್ರೇಮಿಗಳಲ್ಲಿ ಜಗಳವಾಗುವ ಸಂಭವವಿದೆ. ಶುಭಸಂಖ್ಯೆ: 5

ವೃಷಭ: ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ. ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಮಾತಿನಿಂದ ತೊಂದರೆ ಉಂಟಾಗಬಹುದು. ಶುಭಸಂಖ್ಯೆ:9

ಮಿಥುನ: ಕುಟುಂಬದ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಕೆಲಸ ಕಾರ್ಯಗಳಲ್ಲಿ ತೊಂದರೆ. ಉದ್ಯಮದಲ್ಲಿ ಪ್ರಗತಿಯಾಗಿ ಸಮಾಧಾನ. ಶುಭಸಂಖ್ಯೆ:2

ಕಟಕ: ಗೃಹಿಣಿಯರಿಗೆ ಶುಭದಾಯಕ ದಿನ. ಪತ್ನಿಗೆ ಉದ್ಯೋಗದಲ್ಲಿ ಒಳ್ಳೆಯ ದಿನ. ಲೋಹ ಸಂಬಂಧೀ ಉದ್ಯೋಗದಲ್ಲಿ ಆದಾಯ. ಶುಭಸಂಖ್ಯೆ:7

ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ವ್ಯಾಪಾರ ವ್ಯವಹಾರದಲ್ಲಿ ಮೋಸ ಸಂಭವ. ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 2

ಕನ್ಯಾ: ಆಸ್ತಿ ಪ್ರಾಪ್ತಿಯಾಗಿ ಬಹುದಿನಗಳ ಕನಸು ಕೈಗೂಡುವುದು. ಕೃಷಿಕರಿಗೆ ಉತ್ತಮ ದಿವಸ. ಕುಟುಂಬದಲ್ಲಿ ಶುಭ ಕಾರ್ಯದ ಸಡಗರ. ಶುಭಸಂಖ್ಯೆ: 9

ತುಲಾ: ಯಂತ್ರ ತಯಾರಿಕರಿಗೆ ಶುಭ. ಅಧಿಕಾರಿಗಳಿಂದ ತೊಂದರೆ. ಪ್ರಯಾಣದಿಂದ ನಿರೀಕ್ಷಿತ ಮಟ್ಟದಲ್ಲಿ ಯಶ. ಆರೋಗ್ಯದಲ್ಲಿ ಎಚ್ಚರ. ಶುಭಸಂಖ್ಯೆ:3

ವೃಶ್ಚಿಕ: ಗೃಹ ಕೈಗಾರಿಕೆಗೆ ಸಂಬಂಧಿಸಿ ನಿರೀಕ್ಷಿತ ಲಾಭ ಬರುವುದು. ನೀರಿಗೆ ಸಂಬಂಧಿಸಿದ ವೃತ್ತಿಯಲ್ಲಿ ಯಶಸ್ಸು. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ: 7

ಧನುಸ್ಸು: ಶೀತ ಸಂಬಂಧೀ ರೋಗ ಬಾಧಿಸಲಿದೆ. ವೈದ್ಯರ ಸಲಹೆ ಅಗತ್ಯ. ಹೈನುಗಾರಿಕೆಯಲ್ಲಿ ಒಳ್ಳೆಯ ಆದಾಯ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 7

ಮಕರ: ರಕ್ತದೊತ್ತಡದ ಸಮಸ್ಯೆ ಕಾಡಬಹುದು. ಸರ್ಕಾರಿ ನೌಕರರಿಗೆ ನಿರೀಕ್ಷಿತ ಬೆಂಬಲ ದೊರೆಯುವುದು. ತಾಯಿಯಿಂದ ಸಹಕಾರ. ಶುಭಸಂಖ್ಯೆ: 6

ಕುಂಭ: ಹೋಟೆಲ್ ವ್ಯವಹಾರದಲ್ಲಿ ಆದಾಯ ಸಿಗಲಿದೆ. ಕೃಷಿಯಲ್ಲಿ ಲಾಭವಿದೆ. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಶುಭಸಂಖ್ಯೆ:4

ಮೀನ: ಛಾಯಾಗ್ರಾಹಕರಿಗೆ ಪ್ರಗತಿ. ವೃತ್ತಿಯಲ್ಲಿ ಬಡ್ತಿ ದೊರೆತು ಸಂತಸ. ಹಿತಶತ್ರುಗಳ ಕಾಟ, ತಾಳ್ಮೆಯಿಂದಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net