

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಲೇವಾದೇವಿಗಾರರು ಎಚ್ಚರದಿಂದಿರಿ. ಮಾತಿನಿಂದ ಕಲಹ ಉಂಟಾದೀತು, ಹಿಡಿತವಿರಲಿ. ಶುಭಸಂಖ್ಯೆ: 6
ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಕಲಾವಿದರಿಗೆ ಗೌರವ ಲಭಿಸಲಿದೆ. ಅನಿರೀಕ್ಷಿತ ಧನಾಗಮನ. ಸಂತಸದ ಕ್ಷಣಗಳು. ಶುಭಸಂಖ್ಯೆ: 9
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆಸ್ತಿ ವಿವಾದದಲ್ಲಿ ಜಯ ನಿಮ್ಮದು. ಶುಭಸಂಖ್ಯೆ: 4
ಕಟಕ: ಗೃಹನಿರ್ಮಾಣದಲ್ಲಿ ಯಶಸ್ಸು ಸಿಗಲಿದೆ. ಮಿತ್ರರಿಂದ ಸಕಾಲಕ್ಕೆ ಸಹಕಾರ ದೊರೆಯುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 6
ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರವಾಗುವುದು. ಭೂ ವ್ಯವಹಾರದಲ್ಲಿ ಆದಾಯ ಬರಲಿದೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶುಭಸಂಖ್ಯೆ: 2
ಕನ್ಯಾ: ವಿದ್ಯಾರ್ಥಿಗಳಿಗೆ ಯಶಸ್ಸು. ಮಹಿಳಾ ಪ್ರತಿಭೆಗಳಿಗೆ ಜಯ ದೊರೆತು ಸಂತಸ. ಕೈಗಾರಿಕೋದ್ಯಮಿಗಳಿಗೆ ಧನಸಹಾಯ. ಶುಭಸಂಖ್ಯೆ: 9
ತುಲಾ: ಉದ್ಯೋಗಾಕಾಂಕ್ಷಿಗಳಿಗೆ ಶುಭ ಸಮಾಚಾರ. ನಿರ್ಧಾರಗಳಲ್ಲಿ ಎಚ್ಚರ ವಹಿಸಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಒಳ್ಳೆಯದಿನವಲ್ಲ. ಶುಭಸಂಖ್ಯೆ: 3
ವೃಶ್ಚಿಕ: ಕೃಷಿಕರಿಗೆ ಲಾಭ ಬಂದು ಸಮಾಧಾನ. ಉದ್ಯೋಗ ಕ್ಷೇತ್ರದವರಿಗೆ ಶುಭ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆಯಾದೀತು. ಶುಭಸಂಖ್ಯೆ: 6
ಧನುಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಮಹಿಳೆಯರಿಗೆ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಸಿಗಲಿದೆ. ಶುಭಸಂಖ್ಯೆ: 6
ಮಕರ: ಮಂಗಳ ಕಾರ್ಯಗಳಿಂದ ಶುಭವಾಗಲಿದೆ. ವಕೀಲರಿಗೆ ಯಶಸ್ಸು ಸಿಗುವುದು. ಉದ್ಯೋಗಿಗಳಿಗೆ ಅಭಿವೃದ್ಧಿ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 1
ಕುಂಭ: ಮಧ್ಯವರ್ತಿಗಳಿಗೆ ಉತ್ತಮ ಆದಾಯ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿ ಉತ್ಪನ್ನದಲ್ಲಿ ಆದಾಯ, ಉದ್ಯೋಗ ನಷ್ಟ. ಶುಭಸಂಖ್ಯೆ: 3
ಮೀನ: ವೈಜ್ಞಾನಿಕ ಸಂಶೋಧನೆ ಕೈಗೊಂಡವರಿಗೆ ಯಶಸ್ಸು. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ವರ್ಗಾವಣೆಯನ್ನು ನಿರೀಕ್ಷಿಸಬಹುದು. ಶುಭಸಂಖ್ಯೆ: 6