ಸಹೋದರನ ಮಗನ ಸಾವಿನ ಕುರಿತು ರೇಣುಕಾಚಾರ್ಯ ಗಂಭೀರ ಆರೋಪ

Renukacharya
Published on

ದಾವಣಗೆರೆ: ಸಹೋದರನ ಮಗ ಚಂದ್ರಶೇಖರ್​ ಸಾವಿನ ದುಃಖದಲ್ಲಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಇಂದು ಚಂದ್ರು ಅಪಘಾತಕ್ಕೀಡಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದು, ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಗಂಭೀರವಾದ ಆರೋಪ ಮಾಡಿದ್ದಾರೆ.

ನ್ಯಾಮತಿ-ಹೊನ್ನಾಳಿ ಮಾರ್ಗ ಮಧ್ಯ ಇರುವ ತುಂಗಾ ಮೇಲ್ದಂಡೆ ನಾಲೆಗೆ ಚಂದ್ರು ಕಾರು ಬಿದ್ದಿತ್ತು. ಇಂದು ಆ ಸ್ಥಳಕ್ಕೆ ಪರಿಶೀಲನೆ ಸಲುವಾಗಿ ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದರು.

ಕಾರು ಹೋಗಿರುವ ಮಾರ್ಗದ ಬಗ್ಗೆ ಪರಿಶೀಲನೆ ಮಾಡಿದ ರೇಣುಕಾಚಾರ್ಯ, ಪೊಲೀಸ್ ತನಿಖೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾರು ಸಿಕ್ಕಿದ್ದ ಸ್ಥಳವೇ ಬೇರೆ, ಪೊಲೀಸರು ಹೇಳಿದ್ದ ಫೋನ್​ ಲೊಕೇಷನ್ನೇ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಗಾ ನಾಲೆ ಬಳಿ ಇರುವ ಪೈಪ್​ಗೆ ಯಾವುದೇ ಹಾನಿ ಆಗಿಲ್ಲ ಎಂದು ಹೇಳಿರುವ ರೇಣುಕಾಚಾರ್ಯ, ಚಂದ್ರುವಿನದ್ದು ಸಹಜ ಸಾವಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ರೇಣುಕಾಚಾರ್ಯ ಜತೆ ವಿಧಾನಪರಿಷತ್ ಸದಸ್ಯ ಅರುಣ್​ ಹಾಗೂ ಪಕ್ಷದ ಬೆಂಬಲಿಗರು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net