

ಮೇಷ: ಕೆಲವು ವಿಷಯಗಳಿಂದ ಮನಸ್ಸಿಗೆ ಅಸಮಾಧಾನ. ತೀರ ತಲೆಕೆಡಿಸಿಕೊಳ್ಳದೆ ಶಾಂತಚಿತ್ತರಾಗಿರಿ.ಖರ್ಚು ಹೆಚ್ಚಾದೀತು. ಶುಭಸಂಖ್ಯೆ: 6
ವೃಷಭ: ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ. ಮಕ್ಕಳ ಆರೋಗ್ಯದತ್ತ ಗಮನ ಕೊಡಿ. ವಾಹನ ಯೋಗ. ಗುರುಹಿರಿಯರ ದರ್ಶನ. ಶುಭಸಂಖ್ಯೆ: 3
ಮಿಥುನ: ಕಟ್ಟಡ ನಿರ್ಮಾಣ, ಭೂ ಸಂಬಂಧ ಕೆಲಸಗಳಲ್ಲಿ ಮುನ್ನಡೆ. ವಿವಾದಾತ್ಮಕ ವಿಷಯಗಳಲ್ಲಿ ತಲೆ ಹಾಕದಿರುವುದು ಒಳ್ಳೆಯದು. ಶುಭಸಂಖ್ಯೆ: 1
ಕಟಕ: ವ್ಯಾಪಾರದಲ್ಲಿ ಏರುಪೇರು. ಋಣಬಾಧೆ. ಮನಸ್ತಾಪ ಉಂಟಾಗುವ ಸಾಧ್ಯತೆ. ಇಲ್ಲಸಲ್ಲದ ತಕರಾರಿನಿಂದ ಬೇಸರ. ಭೂಲಾಭ. ಶುಭಸಂಖ್ಯೆ: 5
ಸಿಂಹ: ಷೇರು ಹೂಡಿಕೆಗಳಲ್ಲಿ ಎಚ್ಚರ. ತಾಳ್ಮೆ ಸಮಾಧಾನ ತೀರ ಅಗತ್ಯ. ಆಲಸ್ಯ ಮನೋಭಾವ ಸಲ್ಲದು. ಅನಾರೋಗ್ಯ ಕಾಣಿಸಬಹುದು. ಶುಭಸಂಖ್ಯೆ: 8
ಕನ್ಯಾ: ಮಾತಾ ಪಿತರಲ್ಲಿ ವಾತ್ಸಲ್ಯ. ಹಣ ಬಂದರೂ ಉಳಿಯದು. ಪರಸ್ಥಳ ವಾಸ ಮಾಡಬೇಕಾದೀತು. ವ್ಯರ್ಥ ಧನಹಾನಿಯಾಗಿ ಬೇಸರ. ಶುಭಸಂಖ್ಯೆ: 9
ತುಲಾ: ವ್ಯಾಸಂಗಕ್ಕೆ ತೊಂದರೆ. ಮಾನಸಿಕ ವೇದನೆ ಕಾಡುವುದು. ದೂರಾಲೋಚನೆ ಮಾಡುವುದು ಅಪೇಕ್ಷಣೀಯ. ಹಣದ ತೊಂದರೆ. ಶುಭಸಂಖ್ಯೆ: 7
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಳಂಬ. ಎಲ್ಲಿ ಹೋದರೂ ಅಶಾಂತಿ, ಶತ್ರುಭಯ. ಸ್ಥಳ ಬದಲಾವಣೆ ಆಗಬಹುದು. ಕಾರ್ಯ ವಿಘ್ನ. ಶುಭಸಂಖ್ಯೆ: 6
ಧನುಸ್ಸು: ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಅಧಿಕಾರ-ಪ್ರಾಪ್ತಿಯಾಗಿ ಸಮಾಧಾನ. ಕೃಷಿಕರಿಗೆ ಒಳ್ಳೆಯ ಆದಾಯ ಬಂದು ಸಂತಸ. ಶುಭಸಂಖ್ಯೆ: 6
ಮಕರ: ಅಧಿಕಾರಿಗಳಲ್ಲಿ ಕಲಹ. ದಾನ ಧರ್ಮಗಳಲ್ಲಿ ಆಸಕ್ತಿ ತಾಳುವಿರಿ. ಶರೀರದಲ್ಲಿ ಸ್ವಲ್ಪ ಆತಂಕ. ಮಹಿಳಾ ಉದ್ಯಮಿಗಳಿಗೆ ವಿಶೇಷ ದಿನ. ಶುಭಸಂಖ್ಯೆ: 8
ಕುಂಭ: ಚಂಚಲ ಮನಸ್ಸು. ಮನಸ್ತಾಪ ಆದೀತು. ಅಧಿಕ ತಿರುಗಾಟ. ಸ್ತ್ರೀಯರಿಗೆ ವಸ್ತ್ರ ಲಾಭ. ನೀಚ ಜನರ ಸಹವಾಸದಿಂದ ದೂರವಿರಿ. ಶುಭಸಂಖ್ಯೆ: 6
ಮೀನ: ಇಷ್ಟಾರ್ಥ ಸಿದ್ಧಿ. ವಾಹನ ಕೊಳ್ಳುವಿರಿ. ಭೂಮಿಯಿಂದ ಲಾಭ ಬರಲಿದೆ. ತೀರ್ಥಯಾತ್ರೆ. ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಶುಭಸಂಖ್ಯೆ: 5