

ಮೇಷ: ಹಣಕಾಸಿನ ವಿಷಯದಲ್ಲಿ ಎಚ್ಚರ. ಜಮೀನು ವಿಷಯಗಳು ಇತ್ಯರ್ಥ. ಉನ್ನತ ವ್ಯಾಸಂಗಕ್ಕೆ ದೂರ ಪ್ರಯಾಣ ಮಾಡುವ ಸಾಧ್ಯತೆ. ಶುಭಸಂಖ್ಯೆ: 8
ವೃಷಭ: ಸಮಾರಂಭಗಳಿಗೆ ಖರ್ಚು. ನಾನಾ ಮೂಲಗಳಿಂದ ವರಮಾನ. ಆರೋಗ್ಯದಲ್ಲಿ ವ್ಯತ್ಯಾಸ, ವಿದೇಶ ವ್ಯವಹಾರಗಳಿಂದ ಲಾಭ. ಶುಭಸಂಖ್ಯೆ:9
ಮಿಥುನ: ಸ್ತ್ರೀಯರಿಗೆ ತೊಂದರೆ. ಉತ್ಪನ್ನ ವಹಿವಾಟುದಾರರಿಗೆ ಅಧಿಕ ಲಾಭ ಬರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ: 5
ಕಟಕ: ಅನಗತ್ಯ ತಿರುಗಾಟ ಅನಿವಾರ್ಯ. ಆರ್ಥಿಕ ಪರಿಸ್ಥಿತಿ ಏರುಪೇರು. ಸ್ನೇಹಿತರಿಂದ ಸಹಾಯ. ಪರರ ಧನ ಪ್ರಾಪ್ತಿ. ಹಿರಿಯರ ಭೇಟಿ. ಶುಭಸಂಖ್ಯೆ: 6
ಸಿಂಹ: ಇಷ್ಟ ಕಾರ್ಯ ಸಿದ್ಧಿ. ಮಿತ್ರರಿಂದ ವಿರೋಧ. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು. ಶುಭಸಂಖ್ಯೆ:2
ಕನ್ಯಾ: ಭೂ ಸಂಬಂಧಿ ಕೆಲಸದವರಿಗೆ ಲಾಭ. ದಾಂಪತ್ಯದಲ್ಲಿ ನೆಮ್ಮದಿ. ಅನವಶ್ಯಕ ಖರ್ಚು ಕಡಿಮೆ ಮಾಡಿ. ಮಕ್ಕಳಿಂದ ಸಂತಸ. ಶುಭಸಂಖ್ಯೆ:1
ತುಲಾ: ಹಿರಿಯರ ಹಿತನುಡಿ. ವ್ಯವಹಾರಗಳನ್ನು ತಾಳ್ಮೆಯಿಂದ ನಿಭಾಯಿಸಿ. ರಾಜಕೀಯ ವ್ಯಕ್ತಿಗಳಿಗೆ ಸುಸಮಯ ಕಾಯುತ್ತಿದೆ. ಶುಭಸಂಖ್ಯೆ: 6
ವೃಶ್ಚಿಕ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ವಾಸ ಗೃಹದಲ್ಲಿ ತೊಂದರೆ ಉಂಟಾದೀತು. ಅಶಾಂತಿ. ಸಂತಾನ ಪ್ರಾಪ್ತಿ. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 9
ಧನುಸ್ಸು: ವಿರೋಧಿಗಳಿಂದ ದೂರವಿರಿ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ ದೊರೆಯಲಿದೆ. ನಿಂತು ಹೋದ ಕೆಲಸಗಳಿಗೆ ಮರು ಚಾಲನೆ ಸಿಗುವುದು. ಶುಭಸಂಖ್ಯೆ:2
ಮಕರ: ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಅನಗತ್ಯ ಅಲೆದಾಟ ಸಾಧ್ಯತೆ. ಅಲ್ಪ ಕಾರ್ಯಸಿದ್ಧಿ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಶುಭಸಂಖ್ಯೆ: 8
ಕುಂಭ: ನಿಮ್ಮ ಪ್ರಯತ್ನಗಳಿಗೆಲ್ಲ ಉತ್ತಮ ಫಲ. ಖರ್ಚಿನ ಬಗ್ಗೆ ನಿಯಂತ್ರಣವಿರಲಿ. ಗುರಿ ಸಾಧನೆಯ ಸಮಾಧಾನ. ದೂರ ಪ್ರಯಾಣ. ಶುಭಸಂಖ್ಯೆ: 5
ಮೀನ: ಸ್ನೇಹಿತರಿಂದ ಬೆಂಬಲ ಸಿಗಲಿದೆ. ಪಾಲುದಾರರೊಡನೆ ಪ್ರಮುಖ ಚರ್ಚೆ ಮಾಡುವಿರಿ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ. ಶುಭಸಂಖ್ಯೆ: 4