

ಮೇಷ: ಕೆಲವು ಆತ್ಮೀಯ ಸ್ನೇಹಿತರ ನೆರವಿನಿಂದ ಹೊಸ ಕಾರ್ಯಕ್ಷೇತ್ರವೊಂದರಲ್ಲಿ ಪ್ರಮುಖ ಸ್ಥಾನವನ್ನು ಹೊಂದಲಿದ್ದೀರಿ. ಶುಭಸಂಖ್ಯೆ: 1
ವೃಷಭ: ಅರ್ತಾಕ ಕಾರ್ಯವಿಧಾನಗಳ ಮೂಲಕ ಯಶಸ್ವಿಯಾಗಲು ಹಾತೊರೆಯದಿರಿ. ಅರಿವೇ ನಿಮ್ಮ ಗುರುವಾಗಲಿ. ಶುಭಸಂಖ್ಯೆ: 5
ಕಟಕ: ಹೊಸ ಆಲೋಚನೆಗಳ ಜನ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ತುಸು ಜಾಗರೂಕತೆಯಿಂದ ಸ್ವಾಗತಿಸಿ. ಶುಭಸಂಖ್ಯೆ: 9
ಮಿಥುನ: ಜೂಜು, ಬೆಟ್ಟಿಂಗ್ ಮುಂತಾದ ವ್ಯಸನಗಳ ಹಿಂದೆ ಬೀಳುವುದರಿಂದ ತಪ್ಪಿಸಿಕೊಳ್ಳಿ. ಇಲ್ಲವಾದರೆ ತೊಂದರೆ ಇದೆ. ಶುಭಸಂಖ್ಯೆ: 2
ಸಿಂಹ: ಥಟ್ಟನೆ ಬರುವಂತಹ ಮುಂಗೋಪವನ್ನು ನಿಯಂತ್ರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅನವಶ್ಯಕ ರಂಪಾಟ ಇರದು. ಶುಭಸಂಖ್ಯೆ: 6
ಕನ್ಯಾ: ಹೊಸ ಕೆಲಸ ಹುಡುಕಲು ಆರಂಭಿಸಿದರೆ ಉತ್ತಮ. ಆದರೆ ಈಗ ಇರುವ ಕೆಲಸವನ್ನು ಬಿಡುವ ಆತುರ ತೋರದಿರಿ. ಶುಭಸಂಖ್ಯೆ: 8
ತುಲಾ: ಯಾವುದೇ ಕೆಲಸದಲ್ಲಿಯೂ ಕೂಡ ಮಾತಿನ ಶಕ್ತಿಯೊಂದೇ ಪ್ರಯೋಜನ ನೀಡದು. ಚಾತುರ್ಯವೂ ಸೇರಿದರೆ ಉತ್ತಮ. ಶುಭಸಂಖ್ಯೆ: 3
ವೃಶ್ಚಿಕ: ದೂರದ ಬಂಧುಗಳು ಬಳಿಗೆ ಬಂದು ನಿಮ್ಮ ಕೆಲಸದಲ್ಲಿ ಮೂಗು ತೂರಬಹುದು. ಅವರನ್ನು ಜಾಣ್ಮೆಯಿಂದಲೇ ದೂರವಿಡಿ. ಶುಭಸಂಖ್ಯೆ: 7
ಧನುಸ್ಸು: ಆಸ್ತಿಯ ಕುರಿತ ಸುದೀರ್ಘ ವ್ಯಾಜ್ಯವೊಂದರಲ್ಲಿ ಗೆಲುವು ಸಾಧಿಸುವಿರಿ. ಸುಳ್ಳು ಆರೋಪಗಳಿಂದ ಕೂಡ ಮುಕ್ತಿ ದೊರೆಯಲಿದೆ. ಶುಭಸಂಖ್ಯೆ: 4
ಕುಂಭ: ವಿದ್ಯಾಭ್ಯಾಸದ ವಿಚಾರದಲ್ಲಿ ವಿಶೇಷ ಗಮನ ಹರಿಸುವ ಅನಿವಾರ್ಯ ಸಂದರ್ಭ ಎದುರಾಗಿದೆ. ಈ ಬಗೆಗೆ ನಿರ್ಲಕ್ಷ್ಯ ತೋರದಿರಿ. ಶುಭಸಂಖ್ಯೆ: 1
ಮಕರ: ನಿಮ್ಮ ನಡೆ-ನುಡಿಗಳು, ಸರಳವಾದ ಜೀವನಶೈಲಿ ಹಲವರನ್ನು ಆಕರ್ಷಿಸಲಿದೆ. ಎಲ್ಲ ಜನರ ಆದರ, ಮೆಚ್ಚುಗೆ ಪಡೆದುಕೊಳ್ಳಲಿದ್ದೀರಿ. ಶುಭಸಂಖ್ಯೆ: 9
ಮೀನ: ನೆರೆಹೊರೆಯವರ ಬಳಿ ಮಾತಾಡುವ ಸಂದರ್ಭ ಬಂದರೆ ಮೃದುವಾಗಿ ಮಾತಾಡಿ. ಆಗ ಯಾವುದೇ ವಿವಾದ ಕೂಡ ಸೃಷ್ಟಿಯಾಗದು. ಶುಭಸಂಖ್ಯೆ: 5