ಈ ರಾಶಿಯವರಿಂದು ಎಲ್ಲರ ಪ್ರೀತಿ-ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನೆಮ್ಮದಿ ಇರುವುದಿಲ್ಲ. ಪ್ರಾಣಾಯಾಮ, ಧ್ಯಾನ ಮಾಡಿ. ವೈದ್ಯ ವೃತ್ತಿಯವರಿಗೆ ಲಾಭ. ವ್ಯಾಸಂಗದಲ್ಲಿ ಹಿನ್ನಡೆಯಾಗಬಹುದು. ಶುಭಸಂಖ್ಯೆ: 5

ವೃಷಭ: ಪರರ ಮಾತಿಗೆ ಕಿವಿ ಕೊಡದಿರುವುದು ನಿಮಗೆ ಒಳ್ಳೆಯದು. ಗೆಳೆಯರಿಂದ ಸಹಾಯ ದೊರೆಯಲಿದೆ. ಸಾಲಬಾಧೆ. ಶುಭಸಂಖ್ಯೆ: 9

ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಮನೆಯಲ್ಲಿ ಸಂತಸದ ವಾತಾವರಣ ಕಳೆಗಟ್ಟಲಿದೆ. ಶುಭಸಂಖ್ಯೆ:1

ಕಟಕ: ಯತ್ನ ಕಾರ್ಯಗಳಲ್ಲಿ ಜಯ ನಿಮ್ಮ ಪಾಲಿಗೆ ದೊರೆತು ಖುಷಿ. ಆಕಸ್ಮಿಕ ಖರ್ಚು ಉಂಟಾಗಬಹುದು. ದಾಯಾದಿ ಕಲಹ. ಶುಭಸಂಖ್ಯೆ: 8

ಸಿಂಹ: ಸ್ಥಗಿತ ಕಾರ್ಯಗಳಿಗೆ ಚಾಲನೆ ಸಿಕ್ಕು ಮುನ್ನಡೆ. ಮನಃಶಾಂತಿ. ಹಣ ಧಾರಾಳವಾಗಿ ಬರುವುದಾದರೂ ಉಳಿಯುವುದಿಲ್ಲ. ಶುಭಸಂಖ್ಯೆ: 8

ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು. ವ್ಯಾಪಾರದಲ್ಲಿ ಉತ್ತಮ ವಹಿವಾಟು. ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 6

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ. ಸ್ತ್ರೀಯರು ತಾಳ್ಮೆಯಿಂದಿರುವುದು ಒಳ್ಳೆಯದು. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ ಎದುರಿಸಬೇಕಾಗುವುದು. ಚಂಚಲ ಮನಸ್ಸನ್ನು ಸ್ವಯಂ ನಿಯಂತ್ರಿಸಿಕೊಳ್ಳಿ. ಹಿತಶತ್ರು ಕಾಟ. ಶುಭಸಂಖ್ಯೆ: 4

ಧನುಸ್ಸು: ಮಿತ್ರರಿಂದ ಸಹಾಯ ದೊರೆತು ಮಾನಸಿಕ ಸಮಾಧಾನ. ಕಾರ್ಯಸಾಧನೆಯಾಗಿ ಸಂತಸ. ಅಧಿಕಾರ-ಪ್ರಾಪ್ತಿ. ಗೌರವ, ಸನ್ಮಾನ. ಶುಭಸಂಖ್ಯೆ: 8

ಮಕರ: ಅಲ್ಪ ಆದಾಯ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ಕಷ್ಟಗಳು ಕಳೆದು ಮಾನಸಿಕ ನೆಮ್ಮದಿ ದೊರೆಯುವುದು. ಶುಭಸಂಖ್ಯೆ: 6

ಕುಂಭ: ಆತ್ಮೀಯರಿಂದ ಸಹಾಯ ದೊರೆತು ಸಂಕಷ್ಟ ಬಗೆಹರಿಯಲಿದೆ. ಸ್ಥಿರಾಸ್ತಿ ಖರೀದಿಗೆ ಚಿಂತನೆ ನಡೆಸುವಿರಿ. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 3

ಮೀನ: ಮಾನಸಿಕ ಒತ್ತಡ ಅನುಭವಿಸುವಿರಿ. ಆದರೆ ಎಲ್ಲರ ಪ್ರೀತಿ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗುವಿರಿ. ಮಂಗಳಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net