

ಮೇಷ: ಕೆಲಸಕಾರ್ಯಗಳಲ್ಲಿ ಅರಂಭಿಕ ಹಂತದ ಅಡೆತಡೆಗಳು ಇರುತ್ತವೆ. ಆದರೂ ರಾತ್ರಿಯ ವೇಳೆಗೆ ಕಾರ್ಯಸಿದ್ಧಿ ಇದೆ. ಶುಭಸಂಖ್ಯೆ: 9
ವೃಷಭ: ದೂರಪ್ರವಾಸಗಳನ್ನು ಮುಂದೂಡಿದರೆ ಕ್ಷೇಮವಿದೆ. ಇರುವ ತಾಣವನ್ನೇ ಹೊಸ ದೃಷ್ಟಿಕೋನದಿಂದ ಗಮನಿಸಿ. ಶುಭಸಂಖ್ಯೆ: 6
ಮಿಥುನ: ಗಾಬರಿಯಿಂದಾಗಿ ನಾನಾ ತೊಳಲಾಟಗಳು ಎದುರಾಗಬಹುದು. ನಂತರ ನಿಶ್ಚಿತ ದಾರಿಯ ಜತೆಗೆ ನೆಮ್ಮದಿ ಲಭಿಸಲಿದೆ. ಶುಭಸಂಖ್ಯೆ: 1
ಕಟಕ: ಅಗ್ನಿಪರೀಕ್ಷೆಯನ್ನು ದಾಟಬೇಕಾಗಬಹುದು. ಆದರೂ ಚಿಂತಿಸುವ ಅಗತ್ಯವಿಲ್ಲ. ಸತ್ಯವೇ ನಿಮ್ಮನ್ನು ಗೆಲ್ಲಿಸುತ್ತದೆ. ಶುಭಸಂಖ್ಯೆ: 3
ಸಿಂಹ: ನ್ಯಾಯ ಹಾಗೂ ಅನ್ಯಾಯದ ಎರಡೂ ದಾರಿಗಳು ತೆರೆದುಕೊಳ್ಳಲಿವೆ. ನ್ಯಾಯದ ದಾರಿಗೇ ಗೆಲುವು ಸಿದ್ಧಿಸಲಿದೆ. ಶುಭಸಂಖ್ಯೆ: 8
ಕನ್ಯಾ: ಹಗಲುಗನಸುಗಳನ್ನು ಕಾಣುತ್ತಿದ್ದೀರಿ. ಜಾಣ್ಮೆಯನ್ನು ಬಳಸಿ ಪರಿಶ್ರಮಪಟ್ಟರೆ ಸಹಜವಾಗಿ ಜಯ ಗಳಿಸುವಿರಿ. ಶುಭಸಂಖ್ಯೆ: 4
ತುಲಾ: ತಾಂತ್ರಿಕ ಯತ್ನಗಳ ಬಗ್ಗೆ ಯೋಚಿಸುವುದು ತಪ್ಪಲ್ಲ. ಆದರೆ ಬೇರೆ ಬೇರೆ ದಿಕ್ಕಿನಿಂದಲೂ ಪ್ರಯತ್ನಿಸಿ. ಲಾಭವಾಗಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಅಪರಿಚಿತರನ್ನು ನೀವು ಒಮ್ಮೆಲೇ ನಂಬುವ ಸಾಧ್ಯತೆಯಿದೆ. ತರ್ಕಕ್ಕೆ ಅವಕಾಶ ನೀಡದಿದ್ದರೆ ಮೋಸಹೋದೀರಿ. ಜಾಗ್ರತೆ. ಶುಭಸಂಖ್ಯೆ: 5
ಧನುಸ್ಸು: ಮನೆಯಲ್ಲಿ ಸಂಗಾತಿ ಮುನಿಸಿಕೊಳ್ಳಬಹುದು. ಮೌನವೇ ಪ್ರತ್ಯುತ್ತರವಾಗಿರಲಿ. ನಿಷ್ಠೆಯಿಂದ ಇದ್ದರೆ ಒಳಿತೇ ಉಂಟಾಗಲಿದೆ. ಶುಭಸಂಖ್ಯೆ: 2
ಮಕರ: ಮಹಾಲಕ್ಷ್ಮಿಯನ್ನು ಸ್ತುತಿಸಿ ಕಾರ್ಯಾರಂಭ ಮಾಡಿದರೆ ಧನಲಾಭವನ್ನು ಹೊಂದಲಿದ್ದೀರಿ. ಪ್ರಾಮಾಣಿಕತೆಯೂ ಇರಲಿ. ಶುಭಸಂಖ್ಯೆ: 9
ಕುಂಭ: ಪರಿಶ್ರಮ, ಕ್ರಿಯಾಶೀಲತೆಯ ಕಾರಣಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಲಭ್ಯ. ವೇತನದಲ್ಲೂ ವೃದ್ಧಿಯಾದೀತು. ಶುಭಸಂಖ್ಯೆ: 6
ಮೀನ: ಮಕ್ಕಳ ಸ್ವಾತಂತ್ರವನ್ನು ಮೊಟಕುಗೊಳಿಸುವ ಪ್ರಯತ್ನ ಕೈಬಿಡಿ. ಸ್ವೇಚ್ಛಾಚಾರಕ್ಕೆ ಆಸ್ಪದ ಕೊಡದಿರಿ. ಶುಭವಾಗಲಿದೆ. ಶುಭಸಂಖ್ಯೆ: 1