

ಮೇಷ: ಕೋಪಿಸಿಕೊಳ್ಳುವುದರಿಂದ ಅಶಾಂತಿಯೇ ಮನಸ್ಸನ್ನು ಆವರಿಸಲಿದೆ. ಸಿಟ್ಟನ್ನು ನಿಯಂತ್ರಿಸಿ. ವ್ಯಕ್ತಿತ್ವಕ್ಕೆ ಮೆರುಗು ಸಿಗಲಿದೆ. ಶುಭಸಂಖ್ಯೆ: 9
ವೃಷಭ: ಮದುವೆಯ ನಿರೀಕ್ಷೆಯಲ್ಲಿರುವ ಯುವಜನರಿಗೆ ಕನಸು ನನಸಾಗಲಿದೆ. ದುಷ್ಟ ಜನರ ಬಳಿ ಮೃದುವಾಗಿ ವರ್ತಿಸದಿರಿ. ಶುಭಸಂಖ್ಯೆ: 8
ಮಿಥುನ: ದಿನವಿಡೀ ವ್ಯಾಕುಲತೆ ಕಾಡಬಹುದು. ನಿಮ್ಮ ಒತ್ತಡವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉತ್ತಮ ಸಲಹೆಗಳು ಲಭ್ಯ. ಶುಭಸಂಖ್ಯೆ: 7
ಕಟಕ: ಮಕ್ಕಳಿಂದ ಸಮಸ್ಯೆ ಉಂಟಾಗಬಹುದು. ಶ್ರೀರಾಮನನ್ನು ಸ್ಮರಿಸಿ. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಶುಭಸಂಖ್ಯೆ: 6
ಸಿಂಹ: ನಿವೃತ್ತರಾಗಿದ್ದರೂ ವಿಷಾದದ ಆಲೋಚನೆ ಬೇಡ. ಅದೃಷ್ಟದ ಬೆಂಬಲದಿಂದ ನಿಮಗಾಗಿ ಹೊಸ ಕೆಲಸ ಸಿಗಲಿದೆ. ಶುಭಸಂಖ್ಯೆ: 5
ಕನ್ಯಾ: ಸಹಕೆಲಸಗಾರರಿಂದ ಮೆಚ್ಚುಗೆ. ಹಿಂದಿನ ಘಟನೆಗಳನ್ನು ಮರೆತು ಹೊಸ ವಿಚಾರ ನಡೆಸಿ. ಲಾಭದ ಅವಕಾಶವಿದೆ. ಶುಭಸಂಖ್ಯೆ: 4
ತುಲಾ: ವಿವಿಧ ಕಷ್ಟಗಳಿಂದ ಬಿಡುಗಡೆ ಹೊಂದುವಿರಿ. ಮನೆಯ ಸದಸ್ಯರ ಮನಸ್ಸನ್ನು ಅರಿತರೆ ಯಶಸ್ವಿಯಾಗಲಿದ್ದೀರಿ. ಶುಭಸಂಖ್ಯೆ: 3
ವೃಶ್ಚಿಕ: ಪರಮಾತ್ಮನ ಕೃಪೆಯಿಂದ ಬದಲಾವಣೆಯ ಅವಕಾಶವಿದೆ. ಆದರೆ ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಉತ್ತಮ. ಶುಭಸಂಖ್ಯೆ: 2
ಧನಸ್ಸು: ಬಾಳಿನ ಹೊಸ ದಾರಿಯಲ್ಲಿ ಸಾಗುವಿರಿ. ಆದರೆ ಆಲಸಿಗಳಾಗಬೇಡಿ. ಕೈಗೆ ಬಂದ ತುತ್ತು ಕೆಳಗೆ ಬಿದ್ದೀತು. ಎಚ್ಚರ. ಶುಭಸಂಖ್ಯೆ: 1
ಮಕರ: ಹತ್ತಿರದವರೇ ಹಣಕ್ಕೆ ಸಂಚಕಾರ ತಂದಾರು. ಹೀಗಾಗಿ ಅವಸರಕ್ಕೆ ಅವಕಾಶ ನೀಡಬೇಡಿ. ಕುಬೇರನ ಸ್ತುತಿ ಮಾಡಿ. ಶುಭಸಂಖ್ಯೆ: 9
ಕುಂಭ: ಹೆಚ್ಚಿನ ಖರ್ಚು ಎದುರಾಗಬಹುದು. ನಿಮಗೆ ದುಡಿಯುವ ಶಕ್ತಿ ಇದ್ದರೂ ಉಳಿತಾಯದ ಪಥ ಹುಡುಕಿ. ಶುಭಸಂಖ್ಯೆ: 8
ಮೀನ: ನೂತನ ಯೋಜನೆಗಳಿಂದ ಧನಲಾಭಕ್ಕೆ ದಾರಿ ಇದೆ. ನಿಮಗಾಗಿ ಕಾದಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಿ. ಶುಭಸಂಖ್ಯೆ: 7