

ಲಖನೌ: ಅಯೋಧ್ಯೆಯಲ್ಲಿ ನಾಳೆ (ಆಗಸ್ಟ್ 5)ಯೇ ರಾಮಮಂದಿರ ಭೂಮಿ ಪೂಜೆ. ಅಲ್ಲೀಗ ಸಿದ್ಧತೆಗಳು ನಡೆಯುತ್ತಿದೆ. ಇಂದು ಕೂಡ ಕೆಲವು ಫೂಜೆಗಳು ನೆರವೇರಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ನಡೆಯುತ್ತಿರುವ ಎಲ್ಲ ಸಿದ್ಧತೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಸಿಎಂ ಯೋಗಿ ಅವರು ಲಖನೌದಲ್ಲಿರುವ ತಮ್ಮ ನಿವಾಸದಲ್ಲಿ ಪಟಾಕಿಯನ್ನು ಹಚ್ಚಿ, ದೀಪೋತ್ಸವ ಆಚರಿಸಿದ್ದಾರೆ. ನಾಳಿನ ಭೂಮಿಪೂಜೆ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಯಲ್ಲಿ ದೀಪೋತ್ಸವ ನಡೆದಿದ್ದು, ಅದರ ನಿಮಿತ್ತ ಯೋಗಿ ತಮ್ಮ ಕಚೇರಿಯಲ್ಲಿ ಪಟಾಕಿ ಹಚ್ಚಿ, ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: 24ಗಂಟೆಯಲ್ಲಿ ಪತ್ತೆಯಾದ ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು; 110 ಮಂದಿ ಸಾವು
ಕಾನ್ಪುರದಲ್ಲಿ ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ದೀಪ ಬೆಳಗಿದ್ದಾರೆ. ಹಾಗೇ ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ದೀಪತೋತ್ಸವ ಆಚರಣೆ ಇಂದು ನಡೆದಿದೆ.
ನಾಳೆ ನಡೆಯಲಿರುವ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ. (ಏಜೆನ್ಸೀಸ್)