ಈ ರಾಶಿಯವರಿಂದು ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ಧನಾಗಮನವಾಗಲಿದೆ. ಪ್ರೀತಿ-ಪ್ರೇಮ ಹಾಗೂ ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಆತಂಕ ಉಂಟಾಗಬಹುದು. ಶುಭಸಂಖ್ಯೆ: 8

ವೃಷಭ: ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 9

ಮಿಥುನ: ಪ್ರೀತಿ ಪ್ರೇಮದ ವಿಷಯದಲ್ಲಿ ಆತಂಕ. ಅಧಿಕ ಖರ್ಚು. ಕೆಲಸದಲ್ಲಿ ಅತಿಯಾದ ಒತ್ತಡ. ಭಾವನೆಗಳು ತೀವ್ರವಾಗಿ ಕಾಡುವುದು. ಶುಭಸಂಖ್ಯೆ: 1

ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟವಾದೀತು. ಗುಪ್ತ ವಿಷಯಗಳಿಂದ ಸಮಸ್ಯೆಯಾಗುವುದು. ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ. ಶುಭಸಂಖ್ಯೆ: 4

ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಹುಷಾರು. ಶುಭಸಂಖ್ಯೆ: 6

ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು. ದೂರ ಪ್ರದೇಶದಲ್ಲಿ ಉದ್ಯೋಗ ದೊರೆಯವುದು. ಸ್ವಂತ ಉದ್ಯೋಗದವರಿಗೆ ಅನುಕೂಲ. ಶುಭಸಂಖ್ಯೆ: 9

ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿಯಾಗುವುದು. ಕಲ್ಪನೆಗಳಲ್ಲಿ ವಿಹರಿಸುವಿರಿ. ಸ್ವಂತ ಉದ್ಯಮದಲ್ಲಿ ಹೆಚ್ಚಿನ ಅನುಕೂಲವಿದೆ. ಶುಭಸಂಖ್ಯೆ: 2

ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ ಸಾಧ್ಯತೆ. ಪ್ರಯಾಣದಿಂದ ನಷ್ಟ. ಉದ್ಯೋಗ ಸ್ಥಳದಲ್ಲಿ ಅಪಮಾನವಾಗಬಹುದು. ಶುಭಸಂಖ್ಯೆ: 3

ಧನುಸ್ಸು: ಅನಾರೋಗ್ಯ ಸಮಸ್ಯೆ ಬಾಧಿಸಬಹುದು. ಸಾಲಬಾಧೆ ಮತ್ತು ಶತ್ರು ಕಾಟ. ಭವಿಷ್ಯದ ಚಿಂತೆ. ಬಂಧುಗಳಿಂದ ಲಾಭವಾಗಲಿದೆ. ಶುಭಸಂಖ್ಯೆ: 5

ಮಕರ: ಅನಿರೀಕ್ಷಿತವಾಗಿ ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು ಬರಲಿದೆ. ಅಧಿಕ ಖರ್ಚು. ಶುಭಸಂಖ್ಯೆ: 2

ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನಕ್ಕೆ ಬೇಡಿಕೆ. ಪ್ರಯಾಣದಲ್ಲಿ ಶತ್ರು ಕಾಟ. ತಂದೆಯಿಂದ ಅನುಕೂಲವಾಗಿ ಸಮಾಧಾನ. ಶುಭಸಂಖ್ಯೆ: 1

ಮೀನ: ಮಕ್ಕಳಿಂದ ಆಕಸ್ಮಿಕ ನೋವು ಉಂಟಾಗಬಹುದು. ಬಂಧು- ಬಾಂಧವರೊಂದಿಗೆ ಉತ್ತಮ ಸಂಬಂಧ ಬೆಳೆಯಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net