ಭವಿಷ್ಯ: ಈ ರಾಶಿಯವರಿಗಿಂದು ಮಿತ್ರರಿಂದ ಸಹಾಯ ಒದಗಿಬರಲಿದೆ, ಕಾರ್ಯ ಸಾಧನೆಯಾಗಿ ಸಮಾಧಾನ

Nithya Bhavishya
Published on

ಮೇಷ: ನೆಮ್ಮದಿ ಇರುವುದಿಲ್ಲ. ಧ್ಯಾನ, ಪ್ರಾಣಾಯಾಮದ ಮೊರೆಹೋಗಿ. ವೈದ್ಯ ವೃತ್ತಿಯವರಿಗೆ ಲಾಭ. ವ್ಯಾಸಂಗದಲ್ಲಿ ಹಿನ್ನಡೆ. ಶುಭಸಂಖ್ಯೆ: 5

ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ. ನಿಮ್ಮ ನಿರ್ಧಾರ ದಂತೆ ಮುನ್ನಡೆಯಿರಿ. ಗೆಳೆಯರಿಂದ ಸಹಾಯ ಹರಿದು ಬರಲಿದೆ. ಸಾಲಬಾಧೆ. ಶುಭಸಂಖ್ಯೆ: 9

ಮಿಥುನ: ವೈಯಕ್ತಿಕ ಕೆಲಸದಲ್ಲಿ ಹೆಚ್ಚಿನ ನಿಗಾವಹಿಸಿ. ವಿವಾಹ ವಿಚಾರದಲ್ಲಿ ಯಶಸ್ಸು ಸಿಗಲಿದೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ:1

ಕಟಕ: ಯತ್ನ ಕಾರ್ಯಗಳಲ್ಲಿ ಜಯ ದೊರೆಯಲಿದೆ. ಆಕಸ್ಮಿಕ ಖರ್ಚು ಮಾಡಬೇಕಾದೀತು. ದಾಯಾದಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 8

ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ದೊರೆತು ಮಾನಸಿಕ ಶಾಂತಿ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ದೇವಿಯನ್ನು ಭಜಿಸಿ. ಶುಭಸಂಖ್ಯೆ: 8

ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು. ವ್ಯಾಪಾರದಲ್ಲಿ ಉತ್ತಮ ವಹಿವಾಟು. ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 6

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ. ಸ್ತ್ರೀಯರು ತಾಳ್ಮೆಯಿಂದಿರುವುದು ಉತ್ತಮ. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿ ಸಾಧ್ಯತೆ ಜಾಸ್ತಿ ಇದೆ. ಚಂಚಲ ಮನಸ್ಸನ್ನು ಹತೋಟಿಯಲ್ಲಿಡಿ. ಹಿತ ಶತ್ರುಗಳಿಗೆ ಉದಾಸೀನವೇ ಮದ್ದು. ಶುಭಸಂಖ್ಯೆ: 4

ಧನುಸ್ಸು: ಮಿತ್ರರಿಂದ ಸಹಾಯ ಒದಗಿಬರಲಿದೆ. ಕಾರ್ಯ ಸಾಧನೆಯಾಗಿ ಸಮಾಧಾನ. ಅಧಿಕಾರ-ಪ್ರಾಪ್ತಿಯಾಗಿ ಸಂತಸ ಅನುಭವಿಸುವಿರಿ. ಶುಭಸಂಖ್ಯೆ: 8

ಮಕರ: ಅಲ್ಪ ಆದಾಯ, ಖರ್ಚು ಜಾಸ್ತಿ. ಕುಲದೇವರ ಸ್ಮರಣೆಯಿಂದ ಸಮತೋಲನ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಮನಃಶಾಂತಿ. ಶುಭಸಂಖ್ಯೆ: 6

ಕುಂಭ: ಆತ್ಮೀಯರಿಂದ ಸಕಾಲಕ್ಕೆ ಸಹಾಯ ದೊರೆತು ಕಷ್ಟದಿಂದ ಪಾರಾಗುವಿರಿ. ಸ್ಥಿರಾಸ್ತಿ ಖರೀದಿ ಯೋಚನೆ. ಪ್ರಿಯ ಜನರ ಭೇಟಿ. ಶುಭಸಂಖ್ಯೆ:3

ಮೀನ: ಮಾನಸಿಕ ಒತ್ತಡವಿದ್ದರೂ ಸಮಾಧಾನದಿಂದಿರುವ ನೀವು ಎಲ್ಲರ ವಿಶ್ವಾಸಗಳಿಸುವಿರಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net