ಇಂದು ಈ ರಾಶಿಯ ಸ್ತ್ರೀಯರಿಗೆ ಆಭರಣ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೃಷಿಯಲ್ಲಿ ಲಾಭ. ರಾಜಕೀಯ ರಂಗದಲ್ಲಿರುವವರು ಎಚ್ಚರ ವಹಿಸುವುದು ಅಪೇಕ್ಷಣೀಯ. ಅವಿವಾಹಿತರಿಗೆ ಮದುವೆಗೆ ಸಕಾಲ. ಶುಭಸಂಖ್ಯೆ: 2

ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಶುಭಸಂಖ್ಯೆ: 6

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ ಕಾಣಿಸಲಿದೆ. ವಿವಾಹ ಕಾರ್ಯ ಜರುಗುವುದು. ಪಾಲುದಾರಿಕೆಯಲ್ಲಿ ನಿರೀಕ್ಷಿತ ಗಳಿಕೆ ಲಭ್ಯ. ಶುಭಸಂಖ್ಯೆ: 7

ಕಟಕ: ವಿವಾಹಕ್ಕೆ ಅಡ್ಡಿ ಬಂದೀತು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ ಲಭಿಸಲಿದೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 9

ಸಿಂಹ: ಉದ್ಯೋಗ ಬದಲಿಸಲು ಸೂಕ್ತ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸೀತು. ಶುಭಸಂಖ್ಯೆ: 2

ಕನ್ಯಾ: ಭೂಸಂಬಂಧಿತ ತೀರ್ವನಗಳಲ್ಲಿ ಎಚ್ಚರ ವಹಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ವಣಕ್ಕೆ ಅನುಕೂಲ. ಶುಭಸಂಖ್ಯೆ: 4

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ ದೊರೆಯುವುದು. ವಿಜ್ಞಾನಿಗಳಿಗೆ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಶುಭಸಂಖ್ಯೆ: 4

ವೃಶ್ಚಿಕ: ಔಷಧಿ ಮಾರಾಟದವರಿಗೆ ಬೇಡಿಕೆ. ಅಧಿಕಾರಿ ಗಳೊಂದಿಗೆ ವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ, ಸಮಸ್ಯೆ ಪರಿಹಾರ. ಶುಭಸಂಖ್ಯೆ: 3

ಧನುಸ್ಸು: ಶ್ರಮಕ್ಕೆ ತಕ್ಕಂತೆ ಯಶಸ್ಸು ನಿಮ್ಮದಾಗಲಿದೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 9

ಮಕರ: ಕಾರ್ಯದೊತ್ತಡ ಅನುಭವಿಸುವಿರಿ. ವೈದ್ಯರಿಗೆ ವಿಪರೀತ ಕೆಲಸದಿಂದ ಆಯಾಸ. ಗುತ್ತಿಗೆ ಕೆಲಸಗಾರ ರಿಗೆ ಹೆಚ್ಚಿನ ಆದಾಯವಿದೆ. ಶುಭಸಂಖ್ಯೆ: 5

ಕುಂಭ: ಸ್ತ್ರೀಯರಿಗೆ ಆಭರಣ ಲಾಭ. ಯಂತ್ರೋಪಕರಣ ಬಳಕೆಯಲ್ಲಿ ಎಚ್ಚರ. ವಿದ್ಯಾರ್ಥಿಗಳಿಗೆ ಯಶಸ್ಸು. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 7

ಮೀನ: ಸರ್ಕಾರಿ ಕೆಲಸದಲ್ಲಿರುವ ಮಹಿಳೆಯರಿಗೆ ಉನ್ನತ ಸ್ಥಾನ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಅಧಿಕಾರಿಗಳೊಂದಿಗೆ ವಾದ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net