ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!

Tamarind
Published on

ವಿಜಯಪುರ: ಹುಣಸೆಹಣ್ಣಿಗೆ ಆಸೆಪಟ್ಟ ಮಹಿಳೆಯೊಬ್ಬಳು ಇನ್ನೇನು ಹುಳಿ ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ವಿಜಯಪುರ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಗೆದ್ದಲಮರಿ ಗ್ರಾಮದ ಪರಮವ್ವ ಮಲ್ಲಪ್ಪ ಕುರಿ (24) ಸಾವಿಗೀಡಾದ ಮಹಿಳೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿಯಲ್ಲಿ ಈ ಘಟನೆ ನಡೆದಿದೆ.

ಈಕೆ ಢವಳಗಿ ಭಾಗದ ಹೊಲಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದವರ ಪೈಕಿ ಒಬ್ಬಳಾಗಿದ್ದಳು. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಉರುವಲು ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿದ್ದರಿಂದ ಹುಣಸೆ ಮರವೊಂದರಲ್ಲಿನ ಹಣ್ಣು ಕೈಗೆ ಸಿಗುವಂತಿತ್ತು. ಹೀಗಾಗಿ ಈಕೆ ಅಲ್ಲಿ ಕೂತೇ ಹಣ್ಣು ಕೀಳಲು ಹೋಗಿದ್ದಾಳೆ.

ಕೈಗೆಟುಕುತ್ತಿದ್ದ ಟೊಂಗೆಯನ್ನು ಹಿಡಿದೆಳೆದು ಇನ್ನೇನು ಹುಣಸೆಹಣ್ಣನ್ನು ಕೀಳಬೇಕು ಎನ್ನುವಷ್ಟರಲ್ಲಿ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಿದೆ. ಆಗ ಆಯತಪ್ಪಿದ್ದಿಂದ ಈಕೆ ಕೆಳಕ್ಕೆ ಬಿದ್ದಿದ್ದಳು. ನಂತರ ಟ್ರ್ಯಾಲಿಯ ಚಕ್ರದ ಕೆಳಕ್ಕೆ ಸಿಕ್ಕಿದ್ದರಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net