ಈ ರಾಶಿಯವರಿಗೆ ಇಂದು ಹಿತ ಶತ್ರುಗಳ ವಿರುದ್ಧ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೃಷಿ ಉಪಕರಣಗಳಲ್ಲಿ ಧನಲಾಭ. ಉದ್ಯೋಗ ಮಾಡುವ ಸ್ಥಳದಲ್ಲಿ ಸನ್ಮಾನ. ಉದರ ಸಂಬಂಧಿ ರೋಗಗಳ ಬಗ್ಗೆ ಗಮನಹರಿಸಿ. ಶುಭಸಂಖ್ಯೆ: 8

ವೃಷಭ: ಹೊಸ ವ್ಯಾಪಾರದಲ್ಲಿ ಅಭಿವೃದ್ಧಿ ಸಮಾಧಾನ. ಹಿತ ಶತ್ರುಗಳ ವಿರುದ್ಧ ಜಯ. ಕಲಾವಿದರಿಗೆ ವಿಶೇಷ ದಿನ. ಸಾಲಗಾರರಿಂದ ಒತ್ತಡ. ಶುಭಸಂಖ್ಯೆ: 9

ಮಿಥುನ: ಗುರುವಿನ ದರ್ಶನ. ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ಷೇರು ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 6

ಕಟಕ: ಹೋಟೆಲ್ ಉದ್ಯಮದವರಿಗೆ ನಷ್ಟ. ಅನಿರೀಕ್ಷಿತ ಅಭ್ಯಾಗತರ ಆಗಮನ. ಕೈಹಿಡಿದ ಕೆಲಸಗಳಲ್ಲಿ ವಿಫಲತೆಯಿಂದ ಚಿಂತೆ. ಶುಭಸಂಖ್ಯೆ: 1

ಸಿಂಹ: ಕಾರ್ಯನಿಮಿತ್ತ ದೂರ ಪ್ರಯಾಣ ಸಾಧ್ಯತೆ. ಮಗಳಿಂದ ವಿವಾಹಕ್ಕೆ ಒಪ್ಪಿಗೆ. ಅವ್ಯಕ್ತ ಭಯ ನಿಮ್ಮನ್ನು ಕಾಡಬಹುದು. ಶುಭಸಂಖ್ಯೆ: 3

ಕನ್ಯಾ: ಯಾವ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳಬೇಡಿ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ ಇರಲಿ. ಏಕಾಂಗಿತನ ಕಾಡಬಹುದು. ಶುಭಸಂಖ್ಯೆ: 2

ತುಲಾ: ಸರ್ಕಾರಿ ಕೆಲಸಗಳಲ್ಲಿ ಪದೇಪದೆ ವೈಫಲ್ಯದಿಂದ ಸಮಸ್ಯೆ. ಆಸ್ತಿ ವಿವಾದದ ರ್ತಾಕ ಅಂತ್ಯ. ವೈದ್ಯರಿಗೆ ಕಾರ್ಯಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 6

ವೃಶ್ಚಿಕ: ಕಷ್ಟಪಟ್ಟ ಪರಿಶ್ರಮಕ್ಕೆ ಫಲದಲ್ಲಿ ಮೋಸ. ಹಣಕಾಸು ವಿಚಾರದಲ್ಲಿ ವಂಚನೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡರೆ ಸಮಸ್ಯೆ. ಶುಭಸಂಖ್ಯೆ: 4

ಧನುಸ್ಸು: ಹೊಸ ಮನೆಯ ಗ್ರಹಪ್ರವೇಶಕ್ಕೆ ಚಾಲನೆ. ಐಟಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಸಾಹಿತಿಗಳು ಮತ್ತು ಪತ್ರಕರ್ತರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಮಕರ: ವಾಹನ ಚಾಲನೆಯಲ್ಲಿ ಅಪಘಾತ ಸಾಧ್ಯತೆ. ಅಪರಿಚಿತರಿಂದ ಮೋಸ. ಮಹಿಳೆಯರಿಗೆ ವಸ್ತ್ರಾಭರಣಗಳು ಲಾಭ. ಶುಭಸಂಖ್ಯೆ: 8

ಕುಂಭ: ಸಹೋದರಿಯರೊಂದಿಗೆ ವಾಗ್ವಾದ ಮಾಡುವುದು ಸಲ್ಲ. ಆಸ್ತಿ ವಿಚಾರದಲ್ಲಿ ಗೊಂದಲ. ಉದ್ಯೋಗ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 6

ಮೀನ: ಕೃಷಿಕರಿಗೆ ಉತ್ತಮ ಲಾಭ. ಕಬ್ಬಿಣ ಮತ್ತು ಲೋಹದ ಉದ್ದಿಮೆದಾರರಿಗೆ ಧನ ನಷ್ಟ. ನಟರಿಗೆ ಮತ್ತು ಗಾಯಕರಿಗೆ ಅವಕಾಶ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net