

ಮೇಷ: ಆರೋಗ್ಯ ಹದಗೆಡಬಹುದು. ಅದರಿಂದಾಗಿ ಸಂಕಲ್ಪಿಸಿದ ಕೆಲಸಕಾರ್ಯಗಳಲ್ಲಿ ವಿಘ್ನ, ಅಡ್ಡಿ ಆತಂಕ ಬರುವುದು ಸಹಜ. ಅದೃಷ್ಟಸಂಖ್ಯೆ: 2
ವೃಷಭ: ಮನಃಪೂರ್ವಕ ಊಟ ಮಾಡುವಿರಿ. ವಿಶೇಷವಾದ ನೆಮ್ಮದಿಯ ಭಾವ ಮನಸ್ಸನ್ನು ಆವರಿಸಿದರೆ ಆಶ್ಚರ್ಯವಿಲ್ಲ. ಅದೃಷ್ಟಸಂಖ್ಯೆ: 7
ಮಿಥುನ: ಕಷ್ಟಪಟ್ಟು ದುಡಿದ ದುಡ್ಡಿಗಷ್ಟೇ ಬೆಲೆ. ಅನಾಯಾಸವಾಗಿ ಬಂದ ದುಡ್ಡು ಅಷ್ಟೇ ಬೇಗ ಹೊರಟುಹೋಗುತ್ತದೆ. ಅದೃಷ್ಟಸಂಖ್ಯೆ: 9
ಕಟಕ: ಆಕಸ್ಮಿಕ ಧನಪ್ರಾಪ್ತಿ. ಹಾಗೆಂದು ಅದನ್ನೇ ನಂಬಿ ಕೂರದಿರಿ. ಆದರೆ ಕಷ್ಟಪಟ್ಟು ಮಾಡಿದ ಕೆಲಸ ವ್ಯರ್ಥವಾಗದು. ಅದೃಷ್ಟಸಂಖ್ಯೆ: 6
ಸಿಂಹ: ಸಹೋದರರೊಡನೆ ಭಿನ್ನಾಭಿಪ್ರಾಯ ಬರಬಹುದು. ಅದನ್ನೇ ಬೆಳೆಸಬೇಕಿಲ್ಲ. ಉದ್ಯೋಗದಲ್ಲಿ ಕಿರಿಕಿರಿ. ಅದೃಷ್ಟಸಂಖ್ಯೆ: 4
ಕನ್ಯಾ: ಅನಿವಾರ್ಯ ಖರ್ಚು ಎದುರಾಗಲಿದೆ. ಅದರಿಂದ ತಪ್ಪಿಸಿಕೊಳ್ಳಲಾಗದು. ಆದಾಯಕ್ಕಿಂತ ಖರ್ಚೇ ಹೆಚ್ಚಾಗಲಿದೆ. ಅದೃಷ್ಟಸಂಖ್ಯೆ: 5
ತುಲಾ: ಕಚೇರಿಯಲ್ಲಿ ಪರೀಕ್ಷೆ ಎದುರಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸಬೇಕಾಗುತ್ತದೆ. ಅದೃಷ್ಟಸಂಖ್ಯೆ: 1
ವೃಶ್ಚಿಕ: ಕೈಯಲ್ಲಿ ಹಣ ಓಡಾಡುತ್ತದೆ. ಆದರೆ ಯಾರಿಗಾದರೂ ಸಾಲ ಕೊಡುವ ಮುನ್ನ ಪರಾಮರ್ಶಿಸಿದರೆ ಉತ್ತಮ. ಅದೃಷ್ಟಸಂಖ್ಯೆ: 7
ಧನಸ್ಸು: ಉದ್ಯೋಗಿಗಳಿಗೆ ಉತ್ತಮ ದಿನವಿದು. ಆದರೆ ವ್ಯಾಪಾರಿಗಳಿಗೆ ಕೊಂಚ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 3
ಮಕರ: ಮನಸ್ಸು ಪ್ರಫುಲ್ಲವಾಗಿರದು. ಹಲವು ಅವಕಾಶಗಳು ಕೈತಪ್ಪಬಹುದು. ತಾಳ್ಮೆ ಬೇಕು. ಖಂಡಿತ ಶುಭವಾಗುತ್ತದೆ. ಅದೃಷ್ಟಸಂಖ್ಯೆ: 1
ಕುಂಭ: ಏನು ಮಾಡುತ್ತಿದ್ದೇನೆಂಬ ಅರಿವಿರಲಿ. ಕಾಗದಪತ್ರ ವ್ಯವಹಾರಗಳಲ್ಲಿ ಜಾಗ್ರತೆ. ಯಾವುದಕ್ಕೂ ಸಹಿ ಬೇಡ. ಅದೃಷ್ಟಸಂಖ್ಯೆ: 4
ಮೀನ: ದೂರಪ್ರಯಾಣದಿಂದ ಲಾಭವೇನಿಲ್ಲ. ಆದ್ದರಿಂದ ಪ್ರಯಾಣ ಅವಶ್ಯವೇ ಎಂದು ಯೋಚಿಸಿ ನಿರ್ಧರಿಸಿ. ಅದೃಷ್ಟಸಂಖ್ಯೆ: 6