ಈ ರಾಶಿಯವರಿಗಿಂದು ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ ಬಂದೀತು

Nithya Bhavishya
Published on

ಮೇಷ: ಸ್ಥಿರಾಸ್ತಿ ಖರೀದಿ. ಉದ್ಯೋಗದಲ್ಲಿ ಕಿರಿಕಿರಿ. ಕುಟುಂಬದಲ್ಲಿ ಕಲಹ. ಮಿತ್ರರಿಂದ ಸಮಸ್ಯೆ. ಲಾಭ ಪ್ರಮಾಣದಲ್ಲಿ ಕುಂಠಿತವಾಗುವುದು. ಶುಭಸಂಖ್ಯೆ: 4

ವೃಷಭ: ಅವಮಾನಕ್ಕೆ ಗುರಿಯಾಗುವಿರಿ. ಮಾಡಿದ ತಪ್ಪುಗಳಿಂದ ನೋವು. ಪ್ರಯಾಣದಲ್ಲಿ ಅಪಘಾತ. ಅಭಿವೃದ್ಧಿಯಲ್ಲಿ ನಿಧಾನ. ಶುಭಸಂಖ್ಯೆ: 9

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಸಾಲ ಮಾಡುವ ಪರಿಸ್ಥಿತಿ ಬಂದೀತು. ವಾದ-ವಿವಾದ ಜಾಸ್ತಿ ಬೇಡ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:1

ಕಟಕ: ಸ್ವಯಂಕೃತ್ಯಗಳಿಂದ ಧನ ನಷ್ಟ. ವಿಕೃತ ಮನೋಭಿಲಾಷೆ ನಿಯಂತ್ರಿಸಿ. ಮಕ್ಕಳ ವಿಚಾರವಾಗಿ ನೋವು. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 8

ಸಿಂಹ: ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ. ರೋಗ ಬಾಧೆ. ಆರೋಗ್ಯದಲ್ಲಿ ವ್ಯತ್ಯಾಸ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 6

ಕನ್ಯಾ: ಉದ್ಯೋಗದಲ್ಲಿ ಬಡ್ತಿ. ದಾಂಪತ್ಯದಲ್ಲಿ ನೆಮ್ಮದಿ. ಕೋರ್ಟ್ ಕೇಸ್​ಗಳಲ್ಲಿ ನಿಮ್ಮ ಕಡೆಗೆ ಜಯ. ಆತ್ಮೀಯರು ಶತ್ರುವಾಗುವರು. ಶುಭಸಂಖ್ಯೆ: 2

ತುಲಾ: ಮಿತ್ರರೊಂದಿಗೆ ವಾಗ್ವಾದ. ಹಳೇ ವಸ್ತುಗಳಿಂದ ಲಾಭವಾಗಲಿದೆ. ವಾಹನದಿಂದ ಧನಾಗಮನ. ವೃತ್ತಿಪರರಿಗೆ ಅನುಕೂಲ. ಶುಭಸಂಖ್ಯೆ: 5

ವೃಶ್ಚಿಕ: ಕಚೇರಿಯ ಕೆಲಸಗಳಲ್ಲಿ ನಿರಾಸಕ್ತಿ. ನರ ದೌರ್ಬಲ್ಯ. ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಹಿಂಸೆ. ಪಿತ್ರಾರ್ಜಿತ ಆಸ್ತಿ ತಗಾದೆ. ಶುಭಸಂಖ್ಯೆ: 9

ಧನುಸ್ಸು: ನಂಬಿಕಸ್ಥರಿಂದ ಮೋಸವಾದೀತು, ಎಚ್ಚರದಿಂದಿರಿ. ಕೆಲಸಗಾರರಿಂದ ನಷ್ಟ. ಉಸಿರಾಟ ಸಮಸ್ಯೆ ಸಾಧ್ಯತೆ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 6

ಮಕರ: ಸ್ನೇಹಿತರಿಂದ ಉದ್ಯೋಗದ ಭರವಸೆ. ಹಣಕಾಸು ಸಹಾಯ. ಗೌರವ ಸನ್ಮಾನ ಪ್ರಾಪ್ತಿ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 6

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ. ಹೃದಯಸಂಬಂಧಿ ರೋಗ ಕಾಣಿಸೀತು. ಸಾಲಗಾರರಿಂದ ಕಿರಿಕಿರಿ. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 4

ಮೀನ: ದೂರ ಪ್ರಯಾಣ. ತಂದೆಯಿಂದ ಅದೃಷ್ಟ. ದೇವರ ಕಾರ್ಯದಲ್ಲಿ ಭಾಗಿ. ಬರಹಗಾರರು ಮತ್ತು ಹೋರಾಟಗಾರರಿಗೆ ಮನ್ನಣೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net