

ಮೇಷ: ಮೇಲಧಿಕಾರಿಗಳಿಂದ ಸಹಾಯ. ರಾಜಕೀಯ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ. ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಸಂತಸ. ಶುಭಸಂಖ್ಯೆ: 9
ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ. ಸಾಲದ ಸುಳಿಗೆ ಸಿಲುಕುವಿರಿ. ರೋಗಬಾಧೆ. ಆಕಸ್ಮಿಕ ದುರ್ಘಟನೆ. ನೆಮ್ಮದಿಗೆ ಭಂಗ. ಶುಭಸಂಖ್ಯೆ:1
ಮಿಥುನ: ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಪತ್ರ ವ್ಯವಹಾರಕ್ಕೆ ಖರ್ಚು. ಅಧಿಕ ಧನವ್ಯಯ ಮಾಡಬೇಕಾದ ಸ್ಥಿತಿ. ಶುಭಸಂಖ್ಯೆ: 5
ಕಟಕ: ಕೃಷಿಕರಿಗೆ ಅಧಿಕವಾದ ಲಾಭ. ಸಾಲಗಾರರಿಂದ ಮುಕ್ತಿ ದೊರೆಯುವ ಸಾಧ್ಯತೆ. ಅಹಂಭಾವದ ಮಾತು ಆಡುವುದು ಒಳ್ಳೆಯದಲ್ಲ. ಶುಭಸಂಖ್ಯೆ: 3
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕವಾದ ಖರ್ಚು. ಉದ್ಯೋಗ ನಿಮಿತ್ತ ದೂರ ಪ್ರಯಾಣ. ಶುಭಸಂಖ್ಯೆ: 3
ಕನ್ಯಾ: ಉದ್ಯಮದಲ್ಲಿ ಸಂಕಷ್ಟ ಎದುರಾಗುವುದು. ವ್ಯವಹಾರದಲ್ಲಿ ನಷ್ಟ. ಮನಸ್ಸಿನಲ್ಲಿ ಆತಂಕ. ನಾನಾ ಆಲೋಚನೆಗಳಿಂದ ನಿದ್ರಾಭಂಗ. ಶುಭಸಂಖ್ಯೆ: 7
ತುಲಾ: ಉದ್ಯೋಗ ಬದಲಾವಣೆಗೆ ಮನಸ್ಸು. ಸಾಲಗಾರರಿಂದ ಆತ್ಮ ಗೌರವಕ್ಕೆ ಧಕ್ಕೆ. ಆಕಸ್ಮಿಕ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 2
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗಲಿದೆ. ಮಿತ್ರರೊಂದಿಗೆ ಪ್ರಯಾಣ ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 1
ಧನುಸ್ಸು: ಆಡಳಿತಗಾರರೊಂದಿಗೆ ಮಾತುಕತೆ. ಶತ್ರುಗಳಿಂದ ತೊಂದರೆಯಾಗಲಿದೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಮಾಡುವ ಸಾಧ್ಯತೆ. ಶುಭಸಂಖ್ಯೆ: 7
ಮಕರ: ಪೊಲೀಸ್ ಠಾಣೆಗೆ ಅಲೆದಾಟ ಮಾಡಬೇಕಾಗ ಬಹುದು. ರಾಜಕೀಯ ವ್ಯಕ್ತಿಗಳ ಸಹಾಯ ಕೇಳುವಿರಿ. ಕಲ್ಪನಾ ಲೋಕದಲ್ಲಿ ವಿಹಾರ. ಶುಭಸಂಖ್ಯೆ: 9
ಕುಂಭ: ಸಾಲಗಾರರಿಂದ ಕಾಟ. ಸ್ಥಿರಾಸ್ತಿ ಮಾರಾಟಕ್ಕೆ ಮನಸ್ಸು. ಪ್ರಯಾಣದಲ್ಲಿ ವಸ್ತುಗಳ ಕಳವು. ಬಂಧುಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 3
ಮೀನ: ವೈದ್ಯರಿಗೆ ವಿಶೇಷ ದಿನ. ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು, ಕಾಳಜಿ ಇರಲಿ. ಯತ್ನ ಕಾರ್ಯದಲ್ಲಿ ಜಯವಿದೆ. ಶುಭಸಂಖ್ಯೆ: 4