ನಿತ್ಯ ಭವಿಷ್ಯ: ಆಸ್ತಿಯ ವಿಚಾರದಲ್ಲಿ ಈ ರಾಶಿಯವರಿಗಿಂದು ತೊಂದರೆ ಎದುರಾಗಲಿದೆ

Nitya-Bhavishya-vvani-1-2-1
Published on

ಮೇಷ: ಬಂಧುಬಾಂಧವರ ಜತೆಗೆ ಸ್ನೇಹವೇ ಉತ್ತಮ. ಎದುರಾಗುವವರನ್ನು ಬದಲಾಯಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ. ಶುಭಸಂಖ್ಯೆ: 9

ವೃಷಭ: ಕುಟುಂಬದಲ್ಲಿ ಒಡಕು ಮೂಡಿಸುವಂಥ ಜನ ಸುತ್ತುವರಿದರೂ ನಿಮ್ಮ ವಿವೇಕವನ್ನು ಕಳೆದುಕೊಳ್ಳದೆ ಶಾಂತವಾಗಿರಿ. ಶುಭಸಂಖ್ಯೆ: 8

ಕಟಕ: ಆಪ್ತ ಮಿತ್ರರ ಅನಿರೀಕ್ಷಿತ ಆಗಮನದಿಂದ ಸಂತಸಪಡುವಿರಿ. ಆದರೆ ಯಾರ ಬಳಿಗೂ ಸಾಲವನ್ನು ಕೇಳಲು ಹೋಗದಿರಿ. ಶುಭಸಂಖ್ಯೆ: 1

ಮಿಥುನ: ವಾಯುಬಾಧೆಯಿಂದ ತುಸು ತೊಂದರೆ ಅನುಭವಿಸುವಿರಿ. ಧನಪ್ರಾಪ್ತಿ ಇದ್ದರೂ ವಿಶೇಷ ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 2

ಸಿಂಹ: ವಾಹನವನ್ನು ಖರೀದಿಸಲು ಬಯಸಿದ್ದರೆ ಖರೀದಿಸಬಹುದು. ಆದರೆ ಗಾಢ ಬಣ್ಣಗಳನ್ನು ದೂರವಿಟ್ಟರೆ ಒಳಿತಾಗಲಿದೆ. ಶುಭಸಂಖ್ಯೆ: 4

ಕನ್ಯಾ: ಮುಖ್ಯ ಕಾಗದಪತ್ರವೊಂದರ ವಿಚಾರವಾಗಿ ಆಪ್ತರಾದ ಸ್ನೇಹಿತರೊಡನೆ ಭಿನ್ನಾಭಿಪ್ರಾಯ ಬರಬಹುದು. ಆತುರಪಡಬೇಡಿ. ಶುಭಸಂಖ್ಯೆ: 3

ತುಲಾ: ಸಹೋದ್ಯೋಗಿಗಳು ನಿಮ್ಮನ್ನು ಕೋಪದಿಂದ ಕುದಿಯುವ ಹಾಗೆಯೇ ಮಾಡಬಹುದು. ಅವರ ಬಗ್ಗೆ ಎಚ್ಚರ ಇರಲಿ. ಶುಭಸಂಖ್ಯೆ: 7

ವೃಶ್ಚಿಕ: ಮಕ್ಕಳಿಂದ ಶುಭವಾರ್ತೆಯನ್ನು ಕೇಳಲಿದ್ದೀರಿ. ಆಸ್ತಿಯ ವಿಚಾರದಲ್ಲಿ ಸ್ವಲ್ಪ ಮಟ್ಟಿನ ತೊಂದರೆ ಬರಬಹುದು. ಅವಸರ ಬೇಡ. ಶುಭಸಂಖ್ಯೆ: 5

ಧನುಸ್ಸು: ಸಣ್ಣದಾದ ಪ್ರವಾಸದ ಸಂದರ್ಭವೊಂದು ಸೃಷ್ಟಿಯಾಗಬಹುದು. ಪ್ರವಾಸದ ಕಾಲವನ್ನು ನಿಶ್ಚಿಂತೆಯಿಂದಲೇ ಆನಂದಿಸಿ. ಶುಭಸಂಖ್ಯೆ: 6

ಕುಂಭ: ಹೊಸ ಸ್ನೇಹಕ್ಕಾಗಿ ಆತುರಪಡಬೇಡಿ. ಯಾರು ಹೇಗಿರುತ್ತಾರೆ ಎಂದು ತಿಳಿಯದು. ಎಚ್ಚರದ ಹೆಜ್ಜೆಗಳನ್ನೇ ಇಡಿ. ಶುಭಸಂಖ್ಯೆ: 9

ಮಕರ: ಗುರುದತ್ತನ ಸ್ತುತಿಯಿಂದ ನಿರೀಕ್ಷಿಸಿದ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಹಿಂಜರಿಕೆ ಬಿಟ್ಟು ಮುನ್ನುಗ್ಗಿ. ಶುಭಸಂಖ್ಯೆ: 8

ಮೀನ: ವಿವಾಹಾಪೇಕ್ಷಿಗಳಿಗೆ ಶುಭ ಸಮಾಚಾರ ಸಿಗಲಿದೆ. ಹಿರಿಯ ಮಹಿಳೆಯೊಬ್ಬರು ಈ ನಿಟ್ಟಿನಲ್ಲಿ ನೆರವಾಗಲಿದ್ದಾರೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net