ಈ ರಾಶಿಯವರಿಗಿಂದು ಭೂಮಿಯಿಂದ ಲಾಭ ಬರುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಗಳ ವಿವಾಹ ವಿಳಂಬ. ಆತ್ಮೀಯ ಸ್ನೇಹಿತೆಯ ಜೊತೆ ಔತಣ ಕೂಟ. ಕುಟುಂಬದಲ್ಲಿಗೌರವ ಪ್ರಾಪ್ತಿ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:1

ವೃಷಭ: ಮನೆ ಬದಲಾವಣೆ. ಭೂ ಸಂಬಂಧಿ ಕೆಲಸಗಳಲ್ಲಿ ಯಶಸ್ಸು. ಮಿತ್ರರಿಂದ ಸಕಾಲಿಕ ಮಾರ್ಗದರ್ಶನ. ವಾಹನ ಖರೀದಿ. ಅಪವಾದ. ಶುಭಸಂಖ್ಯೆ:9

ಮಿಥುನ: ಆಟೋಮೊಬೈಲ್ಸ್ ವ್ಯವಹಾರದಿಂದ ಸಂಪಾದನೆ. ವಿದೇಶ ಪ್ರವಾಸದ ಕನಸು ಸಾಕಾರ. ಉದ್ಯೋಗದಲ್ಲಿ ಪ್ರಗತಿ. ಅಧಿಕ ಖರ್ಚು. ಶುಭಸಂಖ್ಯೆ:8

ಕಟಕ: ಭೂಮಿಯಿಂದ ಲಾಭ ಬರುವುದು. ಕಚೇರಿಯಲ್ಲಿ ಸಲ್ಲದ ಅಪವಾದ. ಶ್ರಮಕ್ಕೆ ತಕ್ಕ ಫಲ ಸಿಗುವುದು. ಆರೋಗ್ಯ ಸಮಸ್ಯೆ. ಶುಭಸಂಖ್ಯೆ:2

ಸಿಂಹ: ಕುಟುಂಬದಲ್ಲಿ ಶುಭಕಾರ್ಯ. ನೆಮ್ಮದಿ. ಅನವಶ್ಯಕ ಖರ್ಚು. ಕಾರ್ಯ ಸಾಧನೆಗೆ ಪರದಾಟ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ:5

ಕನ್ಯಾ: ಹಿತಶತ್ರುಗಳಿಂದ ಆರೋಪ. ಪಾಲುದಾರಿಕೆಯಲ್ಲಿ ಪ್ರಗತಿ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ. ಸ್ನಾಯು ಸಂಬಂಧಿ ತೊಂದರೆ. ಶುಭಸಂಖ್ಯೆ: 7

ತುಲಾ: ನೂತನ ಮನೆ ನಿರ್ಮಾಣ ಪ್ರಾರಂಭ. ಕೃಷಿಯಲ್ಲಿ ನಷ್ಟ. ಕೋರ್ಟ್ ಕೇಸ್​ಗಳಲ್ಲಿ ಗೊಂದಲ ಸಂಗಾತಿಯಿಂದ ಕಿರುಕುಳ ಸಾಧ್ಯತೆ. ಶುಭಸಂಖ್ಯೆ:4

ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ. ಅಧಿಕವಾದ ತಲೆನೋವು. ಬಟ್ಟೆ ವ್ಯಾಪಾರಿಗಳಿಗೆ ಲಾಭ. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಶತ್ರುಗಳ ಕಾಟ. ಶುಭಸಂಖ್ಯೆ: 3

ಧನುಸ್ಸು: ಕುಟುಂಬ ಸಮೇತ ಮಂಗಳ ಕಾರ್ಯದಲ್ಲಿ ಭಾಗಿ. ಆರ್ಥಿಕ ಪರಿಸ್ಥಿತಿ ನಿರಾಶದಾಯಕ. ವೃಥಾ ತಿರುಗಾಟ. ನಾನಾ ಚಿಂತೆ. ಶುಭಸಂಖ್ಯೆ:6

ಮಕರ: ಪೀಠೋಪಕರಣಗಳ ವ್ಯವಹಾರಗಳ ಪ್ರಾರಂಭಿಸುವಿರಿ. ಅಮೂಲ್ಯ ವಸ್ತು ಕಳವು. ವಿಪರೀತ ಹಣವ್ಯಯ. ಅತಿಯಾದ ಆಲಸ್ಯ. ಶುಭಸಂಖ್ಯೆ: 4

ಕುಂಭ: ಅವಿವಾಹಿತ ಮಗಳಿಗೆ ವಿವಾಹ ಯೋಗ. ಶತ್ರುಗಳ ಭಯ. ಚಲನಚಿತ್ರ ಕ್ಷೇತ್ರದವರಿಗೆ ಉತ್ತಮ ಲಾಭ. ಋಣ ವಿಮೋಚನೆ. ಶುಭಸಂಖ್ಯೆ:3

ಮೀನ: ಧರ್ಮ ಕಾರ್ಯದಲ್ಲಿ ಅನಾಸಕ್ತಿ. ಮನೆ ಖರೀದಿಗೆ ನಿರ್ಧಾರ. ಅಕಾಲ ಭೋಜನ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ವೈಮನಸ್ಸು. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net