

ಮೇಷ: ಶತ್ರುಗಳ ಬಾಧೆ ಇದ್ದರೂ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಇದೆ. ಕೋರ್ಟ್ ಕೇಸ್ಗಳಲ್ಲಿ ವಿಘ್ನ ಎದುರಾಗಬಹುದು. ಶುಭಸಂಖ್ಯೆ: 5
ವೃಷಭ: ಅನ್ಯರು ಅಪಾರ್ಥ ಮಾಡಿಕೊಳ್ಳುವಂತಹ ಕೆಲಸವನ್ನು ಮಾಡದಿರಿ. ಹಾಗೆಯೇ ಅನ್ಯರ ಟೀಕೆಗಳನ್ನು ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 1
ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ. ಅನಿರೀಕ್ಷಿತವಾಗಿ ಕೀರ್ತಿ ವೃದ್ಧಿ. ಯಾರನ್ನು ಕೂಡ ಅತಿಯಾಗಿ ನಂಬಲು ಹೋಗದಿರಿ. ಶುಭಸಂಖ್ಯೆ: 8
ಕಟಕ: ವಿಶೇಷ ಪ್ರಯತ್ನದ ಫಲವಾಗಿ ಧನಲಾಭದ ದಾರಿ ಸಿದ್ಧಿಸಲಿದೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಶುಭಸಂಖ್ಯೆ: 6
ಸಿಂಹ: ಆತ್ಮೀಯರ ಭೇಟಿಯಾಗುವಿರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕಾರ್ಯದಲ್ಲಿ ವಿಳಂಬ ಉಂಟಾಗಲಿದೆ. ಶುಭಸಂಖ್ಯೆ: 2
ಕನ್ಯಾ: ನಿಮ್ಮ ಸಾಮಾಜಿಕ ವರ್ಚಸ್ಸು ಇನ್ನೂ ಹೆಚ್ಚುವ ಘಟನೆ ಜರುಗಲಿದೆ. ವ್ಯಾಪಾರಾದಿ ವ್ಯವಹಾರಗಳಲ್ಲಿ ಲಾಭವಿದೆ. ಶುಭಸಂಖ್ಯೆ: 9
ತುಲಾ: ಆದಾಯಕ್ಕಿಂತ ಹೆಚ್ಚೇ ಖರ್ಚುಗಳು ಸಂಭವಿಸಬಹುದು. ಸ್ವಜನರಿಂದ ವಿರೋಧ. ಸಲ್ಲದ ಅಪವಾದ ಬಂದೀತು. ಶುಭಸಂಖ್ಯೆ: 3
ವೃಶ್ಚಿಕ: ಅಲೌಕಿಕ ವಿಚಾರಗಳ ಆಸಕ್ತಿ ನಿಮಗೆ ವಿಶಿಷ್ಟ ಶಕ್ತಿ ನೀಡಲಿದೆ. ನಿಮ್ಮ ಮನೋಭೀಷ್ಟೆಗಳೂ ಪೂರ್ಣಗೊಳ್ಳಲಿವೆ. ಶುಭಸಂಖ್ಯೆ: 7
ಧನುಸ್ಸು: ಕೈ ಹಾಕಿದ ಕೆಲಸದಲ್ಲಿ ಪ್ರಗತಿಯಿದ್ದರೂ ನಾನಾ ರೀತಿಯ ಚಿಂತೆಗಳು ಕಾಡಲಿವೆ. ದೂರಪ್ರಯಾಣ ಮಾಡಬೇಡಿ. ಶುಭಸಂಖ್ಯೆ: 4
ಮಕರ: ಹಿರಿಯರ ಸಲಹೆಗಳನ್ನು ಸ್ವೀಕರಿಸಿದರೆ ಅನೇಕ ರೀತಿಯ ಕಿರಿಕಿರಿಗಳು ಕೊನೆಗೊಳ್ಳಲಿವೆ. ಮಾರುತಿಯ ಸೋತ್ರ ಪಠಿಸಿ. ಶುಭಸಂಖ್ಯೆ: 1
ಕುಂಭ: ವಿವಾಹಯೋಗ್ಯರಿಗೆ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಆದರೆ ಅವಸರದಿಂದಾಗಿ ಬಿಕ್ಕಟ್ಟು ಎದುರಾಗಬಹುದು. ಶುಭಸಂಖ್ಯೆ: 8
ಮೀನ: ಸ್ಥಿರಾಸ್ತಿ ವಿಚಾರವಾಗಿ ಸಮಸ್ಯೆ ಎದುರಾದರೂ ಧನಲಾಭವಿದೆ. ಅಕಾಲ ಭೋಜನದಿಂದ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 5