More

    ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ…

    ನವದೆಹಲಿ: ಮಹಾಮಾರಿ ಕರೊನಾ ವೈರಸ್​, ಸಾವಿನ ದವಡೆಯಿಂದ​ ರೋಗಿಗಳನ್ನು ಪಾರು ಮಾಡುವ ವೈದ್ಯರನ್ನೂ ಬಿಟ್ಟಿಲ್ಲ. ಅನೇಕ ವೈದ್ಯರಿಗೆ ಕರೊನಾ ಪಾಸಿಟಿವ್​ ಬಂದಿರುವ ಸಾಕಷ್ಟು ಪ್ರಕರಣಗಳನ್ನು ನೋಡಿದ್ದೇವೆ. ಈ ಹೆಮ್ಮಾರಿಗೆ ವೈದ್ಯರು ಕೂಡ ಕೆಲವೆಡೆ ಬಲಿಯಾಗಿರುವುದನ್ನು ಕೇಳಿದ್ದೇವೆ.

    ಇವೆಲ್ಲದರ ನಡುವೆ ಮಹಿಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಪುಣೆಯ ವೈದ್ಯೆ ಮೇಘಾ ವ್ಯಾಸ್​ ಅವರು ಕರೊನಾ ರೋಗಿಗೆ ಚಿಕಿತ್ಸೆ ನೀಡುವಾಗ ಸೋಂಕು ತಗುಲಿ ಸಾವಿಗೀಡಾಗಿದ್ದಾರೆ ಎಂದು ಬರೆದು ಫೋಟೋವನ್ನು ಹರಿಬಿಟ್ಟಿದ್ದಾರೆ.

    ಆದರೆ, ಇದು ಎಷ್ಟು ಸತ್ಯ ಎಂದು ಪರೀಕ್ಷಿಸಲು ಮುಂದಾದಾಗ, ವೈರಲ್​ ಫೋಟೋದಲ್ಲಿರುವ ಮಹಿಳೆ ವೈದ್ಯೆಯಲ್ಲ. ಅವರು ಕರೊನಾದಿಂದಲ್ಲೂ ಸಾವಿಗೀಡಾಗಿಲ್ಲ, ಬದಲಾಗಿ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆಂದು ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್ ವಾರ್​ ರೂಮ್​ಗೆ ತಿಳಿದುಬಂದಿದೆ.​

    ಮತ್ತೊಬ್ಬ ಕೋವಿಡ್​ ವಾರಿಯರ್ ಪುಣೆಯ​ ಡಾ. ಮೇಘಾ ವ್ಯಾಸ್​ ಅವರು ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರಿಗೆ ದೇವರು ಸದ್ಗತಿ ಕರುಣಿಸಲಿ ಎಂದು ಬರೆದು ತಪ್ಪಾಗಿ ಪೋಸ್ಟ್​ ಮಾಡಿರುವುದನ್ನು ನೀವಿಲ್ಲಿ ಕಾಣಬಹುದಾಗಿದೆ.

    ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ...

    ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದ ಕಮೆಂಟ್ ಪ್ರಕರಣ ಬಗ್ಗೆ ಅನುಮಾನ ಮೂಡುವಂತೆ ಮಾಡಿತು. ನೆಟ್ಟಿಗರೊಬ್ಬರು ಈ ಮಹಿಳೆ ಹೆಸರು ಮೇಘಾ ಶರ್ಮಾ, ಇತ್ತೀಚೆಗೆ ಪುಣೆಯ ಜೆಹಾಂಗಿರ್​ ಆಸ್ಪತ್ರೆಯಲ್ಲಿ ತೀರಿಕೊಂಡರು ಎಂದು ಕಮೆಂಟ್​ ಮಾಡಿದ್ದರು. ಇದನ್ನು ಖಚಿತಪಡಿಸಿಕೊಳ್ಳಲು, ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್ ರೂಮ್​ ಆಸ್ಪತ್ರೆಗೆ ಭೇಟಿ ನೀಡಿತು.

    ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಪ್ರತಿನಿಧಿ ಡಾ. ಲೆಫ್ಟಿನೆಂಟ್ ಎಸ್.ಎಸ್. ಗಿಲ್ ಸ್ಪಷ್ಟನೆ ನೀಡಿ, ಮೇಘಾ ಶರ್ಮಾ ವೈದ್ಯೆಯಲ್ಲ. ಆಕೆ ನ್ಯುಮೋನಿಯಾ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಏಪ್ರಿಲ್​ 20, 2020ರಂದು ಸಾವಿಗೀಡಾದರು. ಅವರಿಗೆ ಕರೊನಾ ನೆಗೆಟಿವ್​ ಕೂಡ ವರದಿಯಾಗಿತ್ತು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಆಸ್ಪತ್ರೆಯಿಂದ ಮೇಘಾ ಕುಟುಂಬಕ್ಕೆ ನೀಡಲಾದ ಕರೊನಾ ಪರೀಕ್ಷಾ ವರದಿಯನ್ನು ಪರೀಕ್ಷಿಸಿದಾಗ ಆಕೆ ಸಾವಿಗೀಡಾಗಿರುವುದು ನ್ಯುಮೋನಿಯಾದಿಂದ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳ, ನನ್ನ ಪತ್ನಿ ವೈದ್ಯೆಯಲ್ಲಿ. ಅವಳು ಗೃಹಣಿಯಾಗಿದ್ದಳು. ಕರೊನಾ ನೆಗಿಟಿವ್​ ಕೂಡ ಬಂದಿತ್ತು ಎಂದು ಮೇಘಾ ಪತಿ ಶ್ರೀಕಾಂತ್​ ಶರ್ಮಾ ತಿಳಿಸಿದ್ದಾರೆ. ಅಲ್ಲದೆ, ಪತ್ನಿಯ ಸಾವಿನ ವಿಚಾರದಲ್ಲಿ ತಪ್ಪು ಸಂದೇಶ ಹರಡುವವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ...

    ಹೀಗಾಗಿ ಮೇಘ ವ್ಯಾಸ್ ಚಿಕಿತ್ಸೆ ನೀಡುವಾಗ ಸೋಂಕಿನಿಂದ ಸಾವಿಗೀಡಾದರು ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳಾಗಿದ್ದು, ಫೋಟೋಗೂ ಸುದ್ದಿಗೂ ಸಂಬಂಧವಿಲ್ಲ. ಅಂದಹಾಗೆ ಪುಣೆಯಲ್ಲಿ ಏಪ್ರಿಲ್ 25ರವರೆಗೆ 1,000 ಕರೊನಾ ಪಾಸಿಟಿವ್​ ಪ್ರಕರಣಗಳು ಕಾಣಿಸಿಕೊಂಡಿದ್ದು, 60 ಮಂದಿ ಈವರೆಗೆ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts