

ಮೇಷ: ಸಂಬಂಧಿಗಳಿಂದ ಪಿತೂರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮಾನಸಿಕ ವೇದನೆ. ಮಾತಿನ ಮೇಲೆ ನಿಗಾ ಇರಲಿ. ಶುಭಸಂಖ್ಯೆ: 9
ವೃಷಭ: ಮಾನಹಾನಿ. ಆರೋಗ್ಯದಲ್ಲಿ ಏರುಪೇರು. ತಾಯಿಯೊಂದಿಗೆ ಕಲಹ ಒಳ್ಳೆಯದಲ್ಲ. ಹಿರಿಯರ ಉಪದೇಶದಿಂದ ಮನಃಶಾಂತಿ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ಅನರ್ಥವಾಗುವ ಸಾಧ್ಯತೆ ಇದೆ, ಎಚ್ಚರ. ಶತ್ರು ಬಾಧೆ. ವಾಹನ ಚಾಲಕರು ಜಾಗ್ರತೆ ವಹಿಸುವುದು ತೀರ ಅಗತ್ಯ. ಶುಭಸಂಖ್ಯೆ: 5
ಕಟಕ: ತೀರ್ಥಕ್ಷೇತ್ರಗಳಿಗೆ ಯಾತ್ರೆ ಸಾಧ್ಯತೆ. ಶೀತ ಸಂಬಂಧ ರೋಗಗಳು ಕಾಡಬಹುದು. ಚಂಚಲ ಮನಸ್ಸು. ಪರಸ್ಥಳ ವಾಸ. ಶುಭಸಂಖ್ಯೆ: 2
ಸಿಂಹ: ಆಲಸ್ಯ ಮನೋಭಾವ. ಸಹೋದ್ಯೋಗಿಗಳೊಂದಿಗೆ ಕಲಹವಾಗಬಹುದು. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು ಆದೀತು. ಶುಭಸಂಖ್ಯೆ: 1
ಕನ್ಯಾ: ನೀಚರಿಂದ ತೊಂದರೆ ಅನುಭವಿಸುವಿರಿ. ಕೃಷಿಯಲ್ಲಿ ಲಾಭ ಬರಲಿದೆ. ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿಯಾಗಿ ಮಾನಸಿಕ ಸಮಾಧಾನ. ಶುಭಸಂಖ್ಯೆ: 9
ತುಲಾ: ಮಾನಸಿಕ ವೇದನೆ. ಹಿತಶತ್ರುಗಳಿಂದ ತೊಂದರೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮಕ್ಕಳಿಂದ ಬೋಧನೆ ಕೇಳಬೇಕಾದೀತು. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ವೈದ್ಯರ ಸಲಹೆ ಅಗತ್ಯ. ಯತ್ನ ಕೆಲಸದಲ್ಲಿ ವಿಘ್ನ. ಶತ್ರುಗಳ ಜಾಲಕ್ಕೆ ಬೀಳುವಿರಿ. ಅನಾರೋಗ್ಯ. ಶುಭಸಂಖ್ಯೆ: 4
ಧನುಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ. ವಾದ-ವಿವಾದಗಳಲ್ಲಿ ಭಾಗಿಯಾಗುವಿರಿ. ದೂರ ಪ್ರಯಾಣ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8
ಮಕರ: ತಾಳ್ಮೆ ತೀರ ಅಗತ್ಯವಿದೆ. ಅನ್ಯ ಜನರಲ್ಲಿ ದ್ವೇಷ. ರೋಗಬಾಧೆ. ಸಕಾಲಕ್ಕೆ ಭೋಜನವಿಲ್ಲ. ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುವವು. ಶುಭಸಂಖ್ಯೆ: 3
ಕುಂಭ: ಅಧಿಕ ಖರ್ಚು, ಅಲ್ಪ ಆದಾಯ. ಎಲ್ಲಿ ಹೋದರೂ ಅಶಾಂತಿ. ಕಾರ್ಯಗಳಲ್ಲಿ ಕಲಹ. ಏಕಾಗ್ರತೆಯಿಂದ ಇಷ್ಟದೇವರನ್ನು ಸ್ಮರಿಸಿ. ಶುಭಸಂಖ್ಯೆ: 6
ಮೀನ: ಭೂಲಾಭ. ಮಾತಾಪಿತರಲ್ಲಿ ವಾತ್ಸಲ್ಯ. ಆಕಸ್ಮಿಕ ಧನಲಾಭದಿಂದ ಸಂತಸ. ಪರರಿಂದ ಸಹಾಯ ದೊರೆಯುವುದು. ಮನಃಶಾಂತಿ. ಶುಭಸಂಖ್ಯೆ: 6