ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪಾಲುದಾರಿಕೆಯಿಂದ ಅನುಕೂಲ

Nitya Bhavisya Vijayavani
Published on

ಮೇಷ: ಚಿನ್ನದ ಅಂಗಡಿಯವರಿಗೆ ಆರ್ಥಿಕ ಅನುಕೂಲ. ಹೃದಯ, ಆರೋಗ್ಯ ಸಮಸ್ಯೆ ಬಾಧಿಸುವುದು. ಮಕ್ಕಳ ವಿಷಯದಲ್ಲಿ ನೋವು. ಶುಭಸಂಖ್ಯೆ: 6

ವೃಷಭ: ಖರೀದಿಗೆ ಅಧಿಕ ಖರ್ಚು. ಮಿತ್ರರೊಂದಿಗೆ ಮೋಜು. ನೆರೆಹೊರೆಯವರಿಂದ ಅನುಕೂಲ. ಪ್ರಕೃತಿ ವಿಕೋಪದಿಂದ ಅನಾಹುತ. ಶುಭಸಂಖ್ಯೆ: 6

ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆಯುವುದು. ತರಕಾರಿ ವ್ಯವಹಾರದಲ್ಲಿ ಪ್ರಗತಿ. ಮಿತ್ರರಿಂದ ಉದ್ಯೋಗ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ:2

ಕಟಕ: ಆನ್​ಲೈನ್ ಖರೀದಿಯಲ್ಲಿ ಮೋಸವಾಗುವುದು. ಉದ್ಯೋಗ ನಷ್ಟ ಸಾಧ್ಯತೆ. ದಿನಸಿ ಮತ್ತು ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

ಸಿಂಹ: ಆತ್ಮೀಯರ ವಿಯೋಗ. ಪ್ರಯಾಣದಲ್ಲಿ ವಸ್ತುಗಳ ಕಳವು. ಉದ್ಯೋಗದ ಸ್ಥಳದಲ್ಲಿ ಅಪಮಾನಗಳು ಮತ್ತು ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:4

ಕನ್ಯಾ: ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ಮಾನಸಿಕ ಹಿಂಸೆ. ಪಾಲುದಾರಿಕೆಯಿಂದ ಅನುಕೂಲ. ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 3

ತುಲಾ: ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಮಹಿಳೆಯರಿಂದ ನೋವು. ದಾಂಪತ್ಯದಲ್ಲಿ ವೈಮನಸ್ಸು. ಮಗಳ ಭವಿಷ್ಯದ ಚಿಂತೆ. ಶುಭಸಂಖ್ಯೆ:3

ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ ಅಧಿಕವಾಗುವುದು. ಸೌಂದರ್ಯವರ್ಧಕ ವಸ್ತುಗಳ ಖರೀದಿ. ಶುಭಸಂಖ್ಯೆ:2

ಧನಸ್ಸು: ಸ್ಥಿರಾಸ್ತಿ, ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ತಂದೆಯಿಂದ ಲಾಭ. ತೆರಿಗೆ ಅಧಿಕಾರಿಗಳಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ: 1

ಮಕರ: ಭದ್ರತಾ ವೃತ್ತಿಯವರಿಗೆ ನಷ್ಟ. ಕೂಡಿಟ್ಟ ಹಣದ ಅಪವ್ಯಯ. ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 2

ಕುಂಭ: ಪ್ರೇಮದ ವಿಷಯಗಳಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಅಹಂ ನಿಂದ ವಿರಸ. ನ್ಯಾಯಾಲಯದ ವ್ಯವಹಾರದಲ್ಲಿ ಸ್ನೇಹಿತರಿಂದ ನೆರವು. ಶುಭಸಂಖ್ಯೆ:9

ಮೀನ: ಪತ್ರಕರ್ತರು, ದೃಶ್ಯ ಮಾಧ್ಯಮವರಿಗೆ ವಿಶೇಷ ದಿನ. ಮಕ್ಕಳ ನಡವಳಿಕೆಯಲ್ಲಿ ಸಂಶಯ. ದರ್ಪದ ಮಾತಿನಿಂದ ಶತ್ರುಗಳು ಅಧಿಕ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net