ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಕಾಲಕ್ಕೆ ಸ್ನೇಹಿತನಿಂದ ಸಹಾಯ ಒದಗಲಿದೆ

Nithya Bhavishya
Published on

ಮೇಷ: ದೃಷ್ಟಿ ದೋಷದ ಸಮಸ್ಯೆ ಕಾಡಬಹುದು. ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಆರ್ಥಿಕ ಸಂಕಷ್ಟ ಎದುರಾಗುವುದು, ಧೃತಿಗೆಡಬೇಡಿ. ಶುಭಸಂಖ್ಯೆ: 9

ವೃಷಭ: ಪರರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ . ಹೊಸ ಕೆಲಸ ಕಾರ್ಯಗಳಲ್ಲಿ ತೊಂದರೆ. ಆರೋಗ್ಯ ಸಮಸ್ಯೆ. ಮಿತ್ರ ದ್ರೋಹ, ವಂಚನೆ. ಶುಭಸಂಖ್ಯೆ:3

ಮಿಥುನ: ಅವ್ಯಕ್ತ ಭಯ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ರೇಷ್ಮೆ ಬೆಳೆಗಾರರಿಗೆ ಲಾಭವಿದೆ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ:8

ಕಟಕ: ಹಣಕಾಸಿನ ವಿಷಯದಲ್ಲಿ ಪತಿ ಪತ್ನಿಯರಲ್ಲಿ ಕಲಹ ಸಾಧ್ಯತೆ. ಋಣ ಬಾಧೆಯಿಂದ ಮುಕ್ತಿ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ:2

ಸಿಂಹ: ಅತಿಯಾದ ಹೊಟ್ಟೆ ನೋವು. ಹೊಸ ಉದ್ಯೋಗದಲ್ಲಿ ವಿಶೇಷ ಜವಾಬ್ದಾರಿ. ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ ಬಂದೀತು. ಶುಭಸಂಖ್ಯೆ: 9

ಕನ್ಯಾ: ಮಾತೃವಿನಿಂದ ಶುಭ ಹಾರೈಕೆ. ಆರೋಗ್ಯದಲ್ಲಿ ಏರುಪೇರು. ಸಕಾಲಕ್ಕೆ ಸ್ನೇಹಿತನಿಂದ ಸಹಾಯ ಒದಗಲಿದೆ. ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 7

ತುಲಾ: ವಾಣಿಜ್ಯ ರಂಗದವರಿಗೆ ಲಾಭ. ಕುಟುಂಬದಲ್ಲಿ ಆಸ್ತಿ ವಿವಾದ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ವಿಪರೀತ ಖರ್ಚು. ಶುಭಸಂಖ್ಯೆ:2

ವೃಶ್ಚಿಕ: ಕಲಾವಿದರಿಗೆ ಆಲಸ್ಯ ಭಾವ. ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಸ್ತ್ರೀಯರಿಗೆ ಹೊಸ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:4

ಧನುಸ್ಸು: ಯತ್ನ ಕಾರ್ಯದಲ್ಲಿ ಅನುಕೂಲ. ಮಿತ್ರರೊಡನೆ ಕಲಹ ಆಗಬಹುದು. ಅಧಿಕ ತಿರುಗಾಟ. ಷೇರು ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ: 9

ಮಕರ: ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುವುದು. ವಕೀಲರಿಗೆ ಕಾರ್ಯಸಿದ್ಧಿಯಾಗಲಿದೆ. ವಕೀಲ ವೃತ್ತಿಯಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ: 6

ಕುಂಭ:  ಹಣದ ವಿಷಯಕ್ಕೆ ಕಲಹ. ಸಲ್ಲದ ಅಪವಾದ. ನಿರ್ಧಾರ ಕೈಗೊಳ್ಳಲು ಹಿರಿಯರ ಮಾರ್ಗದರ್ಶನ, ಸಿನಿಮಾ ನಿರ್ದೇಶಕರಿಗೆ ನಷ್ಟ. ಶುಭಸಂಖ್ಯೆ:3

ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ತಾಳ್ಮೆ ಅಗತ್ಯ. ಗೃಹ ನಿರ್ಮಾಣ ಕಾರ್ಯಗಳಿಗೆ ವೇಗ. ನ್ಯಾಯಾಲಯದ ಕೆಲಸ ವಿಳಂಬ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net