ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ

Nitya Bhavisya Vijayavani
Published on

ಮೇಷ: ಶೈಕ್ಷಣಿಕ ರಂಗದವರಿಗೆ ಸನ್ಮಾನ ಗೌರವ ಪ್ರಾಪ್ತಿ. ಸಮಾರಂಭಕ್ಕೆ ಅಧಿಕ ಖರ್ಚು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಸಿಗಲಿದೆ. ಶುಭಸಂಖ್ಯೆ: 9

ವೃಷಭ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ರೆಸ್ಟೋರೆಂಟ್ ವ್ಯವಹಾರದಲ್ಲಿ ನಷ್ಟ. ವಿದ್ಯಾಭ್ಯಾಸದ ಚಿಂತೆ ಅಧಿಕವಾಗುವುದು. ಶುಭಸಂಖ್ಯೆ: 5

ಮಿಥುನ: ಅಪರಿಚಿತರಿಂದ ಧನಾಗಮನ. ಅಮೂಲ್ಯ ವಸ್ತು ದೊರೆಯುವುದು. ಹಲ್ಲು ಬೇನೆ ಉಲ್ಬಣವಾದೀತು. ವಿದೇಶ ಪ್ರವಾಸ ಸಾಧ್ಯತೆ. ಶುಭಸಂಖ್ಯೆ: 4

ಕಟಕ: ಉದ್ಯೋಗದಲ್ಲಿ ಅವಮಾನ ಅನುಭವಿಸಬೇಕಾದೀತು. ಕಲಾವಿದರಿಗೆ ಅಪಕೀರ್ತಿ. ಸಹೋದರಿಯೊಂದಿಗೆ ಕೌಟುಂಬಿಕ ಕಲಹ. ಶುಭಸಂಖ್ಯೆ: 4

ಸಿಂಹ: ಮಾತಿನಲ್ಲಿ ನಿಯಂತ್ರಣವಿರಲಿ. ಹಣ್ಣು ಮತ್ತು ತರಕಾರಿ ವ್ಯಾಪಾರದಲ್ಲಿ ನಷ್ಟ. ಮರ ಮಟ್ಟಗಳ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 8

ಕನ್ಯಾ: ಜಲಮಂಡಳಿಯ ಕೆಲಸಗಾರರಿಗೆ ಶುಭದಿನ. ನಿಮ್ಮಕಾರ್ಯನಿರ್ವಹಣೆಗೆ ಹಿರಿಯರಿಂದ ಪ್ರಶಂಸೆ. ಮಕ್ಕಳಿಂದ ಅವಮಾನ. ಶುಭಸಂಖ್ಯೆ: 1

ತುಲಾ: ಸಜ್ಜನರ ಸಹವಾಸದ ಹೆಜ್ಜೇನು ಸವಿಯುವಿರಿ. ಗ್ರಂಥಿಗೆ ಅಂಗಡಿಯವರಿಗೆ ವರಮಾನ ಕಡಿಮೆ. ಧಾರ್ವಿುಕ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ: 4

ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಅನಾರೋಗ್ಯ. ಆದಾಯ ಅಧಿಕಾರಿಗಳ ಭಯ. ಅರಣ್ಯ ಉತ್ಪನ್ನಗಳ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2

ಧನಸ್ಸು: ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆಯಿದೆ. ಆಸ್ತಿ ನೊಂದಣಿ ಕೆಲಸದಲ್ಲಿ ವೈಫಲ್ಯ. ಪ್ರಯತ್ನಕ್ಕೆ ಪ್ರತಿಫಲ ಶೂನ್ಯ.ಶುಭಸಂಖ್ಯೆ:7

ಮಕರ: ತೀರ್ಥಯಾತ್ರೆಗೆ ಅಧಿಕ ಹಣವ್ಯಯ. ಸಾಲಗಾರರಿಂದ ಕಿರಿಕಿರಿ. ಆಟಗಾರರಿಗೆ ವಿಶೇಷದಿನ. ಅಡಕೆ, ಲಕ್ಕಿ ಬೇಸಾಯದಲ್ಲಿ ಲಾಭ. ಶುಭಸಂಖ್ಯೆ:5

ಕುಂಭ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು. ಸಂಗೀತ ಅಭ್ಯಾಸದಲ್ಲಿ ಆಸಕ್ತಿ. ಭೂಮಿ ಅಥವಾ ಮನೆ ಖರೀದಿಗೆ ನಿರ್ಧರಿಸುವಿರಿ. ಶುಭಸಂಖ್ಯೆ:4

ಮೀನ: ಸಂಗಾತಿಗೆ ಆರೋಗ್ಯದಲ್ಲಿ ತೊಂದರೆ. ವಕೀಲ ವೃತ್ತಿಯವರಿಗೆ ವಾದ ವಿವಾದಗಳಲ್ಲಿ ಜಯ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಲಭ್ಯ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net