

ಮೇಷ: ಹಣಕಾಸಿನ ಸಂಸ್ಥೆಯಿಂದ ಧನ ಸಹಾಯ. ಉದ್ಯೋಗಸ್ಥ ಮಹಿಳೆಯರಿಗೆ ಶುಭ ಫಲ. ಧಾನ್ಯ ದಾಸ್ತಾನು ಮಾಡುವವರಿಗೆ ಶುಭ. ಶುಭಸಂಖ್ಯೆ: 5
ವೃಷಭ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ದೊರೆತು ನಿರಾಳ. ಗೃಹ ನಿರ್ಮಾಣ ಯೋಗ. ಬಾಕಿ ಹಣ ಕೈ ಸೇರುವುದು. ಇಷ್ಟ ದೇವರನ್ನು ಸ್ಮರಿಸಿ. ಶುಭಸಂಖ್ಯೆ: 2
ಮಿಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು. ಭೂ ಸಂಬಂಧಿತ ಕೆಲಸದಲ್ಲಿ ಸಾಲ ಮಾಡಬೇಕಾದ ಅಗತ್ಯವಿದೆ, ದೇಹಾಲಸ್ಯ. ಶುಭಸಂಖ್ಯೆ: 6
ಕಟಕ: ಮಾನಸಿಕವಾಗಿ ಉತ್ಸಾಹಿತರಾಗಿರುತ್ತೀರಿ. ಬಟ್ಟೆ ವ್ಯಾಪಾರಿಗಳಿಗೆ ಅಭಿವೃದ್ಧಿ, ಮನೆ ನಿರ್ಮಾಣದ ಸಮಸ್ಯೆ ಬಗೆಹರಿಯುವುದು. ಶುಭಸಂಖ್ಯೆ: 3
ಸಿಂಹ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭ. ದಿನಬಳಕೆ ವಸ್ತು ವ್ಯಾಪಾರದಲ್ಲಿ ಉತ್ತಮ ಆದಾಯ. ಬಂಧುಗಳಿಂದ ಅಶುಭ ವಾರ್ತೆ. ಶುಭಸಂಖ್ಯೆ:9
ಕನ್ಯಾ: ಮಕ್ಕಳಿಂದ ಸಂತೋಷದ ಸುದ್ದಿ. ದೃಢ ನಿರ್ಧಾರ ಕೈಗೊಳ್ಳಲು ಗೊಂದಲ. ಐಟಿಬಿಟಿ ಉದ್ಯೋಗಿಗಳ ವರ್ಗಾವಣೆಗೆ ಸುಸಮಯ. ಶುಭಸಂಖ್ಯೆ:1
ತುಲಾ: ಹಿರಿಯರ ಕೆಲಸ ಕಾರ್ಯಗಳಲ್ಲಿ ಒತ್ತಡ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಆಕಸ್ಮಿಕ ಧನ ಲಾಭ. ಉದ್ಯೋಗಾಕಾಂಕ್ಷಿಗಳಿಗೆ ಶುಭ. ಶುಭಸಂಖ್ಯೆ:4
ವೃಶ್ಚಿಕ: ಹಿರಿಯರೊಂದಿಗೆ ಮನಸ್ತಾಪ. ಭೂವ್ಯವಹಾರದಲ್ಲಿ ನಷ್ಟ. ರಕ್ತದೊತ್ತಡ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಸಂಜೆ ಶುಭ ಸುದ್ದಿ. ಶುಭಸಂಖ್ಯೆ: 2
ಧನಸ್ಸು: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಬರಲಿದೆ. ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ಪತ್ನಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:4
ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ವಿವಾಹ ಕಾರ್ಯಗಳಲ್ಲಿ ಅಶುಭ. ಸಗಟು ವ್ಯಾಪಾರದಲ್ಲಿ ಲಾಭ. ಕುಲದೇವರನ್ನು ಪೂಜಿಸಿ. ಶುಭಸಂಖ್ಯೆ: 6
ಕುಂಭ: ವಿದ್ಯುತ್ ನಿಗಮದ ಕೆಲಸಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ಬರಲಿದೆ. ಸರ್ಕಾರಿ ಗುತ್ತಿಗೆದಾರರಿಗೆ ಶುಭದಿನ. ಮಿತ್ರರಿಂದ ವಂಚನೆ. ಶುಭಸಂಖ್ಯೆ: 6
ಮೀನ: ಉದ್ಯೋಗದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಅವಕಾಶ. ಸ್ಟೇಷನರಿ ವ್ಯಾಪಾರದಲ್ಲಿ ಲಾಭ. ಪ್ರವಾಸ ಧಾನ್ಯ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 8