ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

Nitya-Bhavisya-FILEminimizer
Published on

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಲೇವಾದೇವಿ ವ್ಯವಹಾರದಲ್ಲಿ ಹಣ ಹೂಡಿಕೆ. ಮಾತಿನಿಂದ ಸಂಗಾತಿಯೊಂದಿಗೆ ಕಲಹ. ಶುಭಸಂಖ್ಯೆ: 5

ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಲಾವಿದರಿಗೆ ಗೌರವ ದೊರೆತು ಸಂತಸ. ಅನಿರೀಕ್ಷಿತ ಧನಾಗಮನ ಆಗುವುದು. ಶುಭಸಂಖ್ಯೆ:9

ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಶುಭ ಕಾರ್ಯದ ಸಂತೋಷ. ಆಸ್ತಿ ವಿವಾದದಲ್ಲಿ ಜಯ. ಶುಭಸಂಖ್ಯೆ: 4

ಕಟಕ: ಗೃಹನಿರ್ವಣದಲ್ಲಿ ಒತ್ತಡ ಎದುರಿಸುವಿರಿ. ಮಿತ್ರರಿಂದ ಸಹಕಾರ ಸಿಗಲಿದೆ. ಮಕ್ಕಳಿಂದ ವಿವಿಧ ಬಗೆಯ ಸಂತೋಷ. ಶುಭಸಂಖ್ಯೆ: 8

ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರವಾಗುವುದು. ಭೂ ವ್ಯವಹಾರದಲ್ಲಿ ಆದಾಯ. ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:2

ಕನ್ಯಾ: ಮಹಿಳಾ ಪ್ರತಿಭೆಗಳಿಗೆ ಯಶಸ್ಸು. ಕೈಗಾರಿಕೋದ್ಯಮಿ ಗಳಿಗೆ ಧನಸಹಾಯ. ಸೌಂದರ್ಯವರ್ಧಕಗಳ ವ್ಯಾಪಾರದಲ್ಲಿ ಧನ ಲಾಭ. ಶುಭಸಂಖ್ಯೆ:7

ತುಲಾ: ಉದ್ಯೋಗಾಕಾಂಕ್ಷಿಗಳಿಗೆ ಶುಭದಾಯಕ ದಿನ. ಕೌಟುಂಬಿಕ ನಿರ್ಧಾರಗಳಲ್ಲಿ ಎಚ್ಚರ. ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ. ಶುಭಸಂಖ್ಯೆ:4

ವೃಶ್ಚಿಕ: ಕೃಷಿಕರಿಗೆ ಲಾಭ. ಕಿರುಚಿತ್ರ ಮತ್ತು ಚಲನಚಿತ್ರ ಕ್ಷೇತ್ರದವರಿಗೆ ಶುಭವಾಗುವುದು. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ. ಶುಭಸಂಖ್ಯೆ:7

ಧನಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಉದ್ಯಮಿ ಮಹಿಳೆಯರಿಗೆ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ:3

ಮಕರ: ಮಂಗಳ ಕಾರ್ಯಗಳಿಂದ ಶುಭಸೂಚನೆ. ವಕೀಲರಿಗೆ ಯಶಸ್ಸು. ಸರ್ಕಾರಿ ಉದ್ಯೋಗಿಗಳಿಗೆ ಆರ್ಥಿಕ ಅನುಕೂಲ ಒದಗಿ ಸಂತಸ. ಶುಭಸಂಖ್ಯೆ: 6

ಕುಂಭ: ವಿದೇಶಿ ಏಜೆಂಟ್​ಗಳಿಗೆ ನಿರೀಕ್ಷಿತ ಆದಾಯ. ಮನರಂಜನಾ ಕಲೆಯಲ್ಲಿ ತೊಡಗಿಸಿಕೊಂಡವರಿಗೆ ಬೇಡಿಕೆ. ಉದ್ಯೋಗ ನಷ್ಟ. ಶುಭಸಂಖ್ಯೆ: 5

ಮೀನ: ವೈಜ್ಞಾನಿಕ ಸಂಶೋಧಕರಿಗೆ ಯಶಸ್ಸು. ಚಿತ್ರ ಕಲಾವಿದರಿಗೆ ಶ್ರಮಕ್ಕೆ ತಕ್ಕ ಫಲ. ಉದ್ಯೋಗಸ್ಥ ಮಹಿಳೆಯರ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net