ಐಪಿಎಲ್​ನ ಅತೀ ಬುದ್ಧಿವಂತ ಫ್ರಾಂಚೈಸಿ ಸಿಎಸ್​ಕೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕ್ಷಿ! | IPL 2025 Auction

ವಿಜಯವಾಣಿ - 2024-11-24T213937.473
Published on

ನವದೆಹಲಿ: ಇಂದು ದುಬೈನಲ್ಲಿ ನಡೆದ ಮೊದಲ ದಿನದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಊಹಿಸಲಾಗಿದ್ದ ಆಟಗಾರರ ಭವಿಷ್ಯ ಅಂದುಕೊಂಡತೆಯೇ ನಡೆದಿದೆ. ಆದರೆ, ಬಹುತೇಕ ಪ್ಲೇಯರ್​​ಗಳಲ್ಲ. ಬದಲಿಗೆ ಕೆಲವೇ ಕೆಲವು ಆಟಗಾರರು ಮಾತ್ರ ಈ ಪಟ್ಟಿಗೆ ಸೇರಿದ್ದಾರೆ. ಅರ್ಷ್​ದೀಪ್​ ಸಿಂಗ್​, ರಿಷಭ್ ಪಂತ್​, ಶ್ರೇಯಸ್​ ಅಯ್ಯರ್, ಯಜುವೇಂದ್ರ ಚಹಲ್​ ಸೇರಿದಂತೆ ಒಂದಷ್ಟು ಸ್ಟಾರ್ ಕ್ರಿಕೆಟಿಗರು ಮಾತ್ರ ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಇದೆಲ್ಲದರ ಮಧ್ಯೆ ಆಟಗಾರರ ಖರೀದಿಯಲ್ಲಿ ಆರ್​ಸಿಬಿ ತೋರಿದ ದಡ್ಡತನಕ್ಕೆ ಇದೀಗ ಫ್ಯಾನ್ಸ್​ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಐದು ಬಾರಿ ಚಾಂಪಿಯನ್ಸ್​ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​ ಅಭಿಮಾನಿಗಳು ಸದ್ಯ ಸಖತ್ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣವೂ ಇದೆ.

ತಮ್ಮ ಪಟ್ಟಿಯಲ್ಲಿದ್ದ ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಮತ್ತು ಕೆ.ಎಲ್​. ರಾಹುಲ್​ರನ್ನು ಬಿಡ್ಡಿಂಗ್​ನಲ್ಲಿ ಪೈಪೋಟಿ ಕೊಡದೆ ಕಳೆದುಕೊಂಡ ಮ್ಯಾನೇಜ್​ಮೆಂಟ್​ ನಿರ್ಧಾರಕ್ಕೆ ಆರ್​ಸಿಬಿ ಫ್ಯಾನ್ಸ್​ ಸಿಡಿಮಿಡಿಗೊಂಡಿದ್ದಾರೆ. ಆದರೆ, ಸಿಎಸ್​ಕೆ ತಮ್ಮದು ಆಟದಲ್ಲಿ ಮಾತ್ರವಲ್ಲ, ಹರಾಜಿನ ಖರೀದಿಯಲ್ಲೂ ಅತೀ ಬುದ್ಧಿವಂತ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದಕ್ಕೆ ಸಾಕ್ಷಿ ಮೊದಲ ದಿನದ ಖರೀದಿ. ಹೌದು, ಇತರೆ ಫ್ರಾಂಚೈಸಿಗಳಂತೆ ಹೆಚ್ಚು ತಲೆಕೆಡಿಸಿಕೊಳ್ಳದೆ, ದೊಡ್ಡದಾಗಿ ಬಿಡ್​ ಮಾಡದೆ, ಸೂಕ್ಷ್ಮವಾಗಿ ತಮಗೆ ಬೇಕಾದ ಆಟಗಾರರನ್ನು ಸುಲಭವಾಗಿ ತಮ್ಮ ಕಡೆಗೆ ಕರೆದುಕೊಂಡಿದೆ.

10 ಕೋಟಿ ರೂ. ಬಜೆಟ್​ನೊಳಗೆ

ರಿಷಭ್ ಪಂತ್​, ಶ್ರೇಯಸ್​ ಅಯ್ಯರ್​ನಂತಹ ಆಟಗಾರರಿಗಾಗಿ 26ರಿಂದ 27 ಕೋಟಿ ರೂ. ಹಣ ಬಿಡ್ಡಿಂಗ್​ ಮಾಡಿದ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್​ 6 ಸ್ಟಾರ್​ ಆಟಗಾರರನ್ನು 10 ಕೋಟಿ ರೂ. ಬಜೆಟ್​ನಲ್ಲಿ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಅದು ಮೊದಲ ದಿನದ ಅಂತ್ಯಕ್ಕೆ. ಇದು ನೋಡುಗರ ಹುಬ್ಬೇರಿಸಿದ್ದು, ಸಿಎಸ್​ಕೆ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅಸಲಿಗೆ ಯಾರು ಆ ಆರು ಆಟಗಾರರು? ಎಷ್ಟು ಕೋಟಿ ರೂ.ಗೆ ಖರೀದಿಯಾದರು? ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಹರಾಜಿನಲ್ಲಿ CSK ಖರೀದಿಸಿದ ಪ್ಲೇಯರ್ಸ್​

1. ಡೆವೊನ್ ಕಾನ್ವೇ - 6.25 ಕೋಟಿ ರೂ.

2. ರಾಹುಲ್ ತ್ರಿಪಾಠಿ - 3.4 ಕೋಟಿ ರೂ.

3. ರಚಿನ್ ರವೀಂದ್ರ - 4 ಕೋಟಿ ರೂ.

4. ರವಿಚಂದ್ರನ್ ಅಶ್ವಿನ್ - 9.75 ಕೋಟಿ ರೂ.

5. ಖಲೀಲ್ ಅಹಮದ್ - 4.80 ಕೋಟಿ ರೂ.

6. ನೂರ್ ಅಹಮದ್ - 10 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net