ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ ಸಾಧ್ಯತೆಯಿದೆ

Nitya Bhavisya Vijayavani
Published on

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ ಬರಲಿದೆ. ಲೇವಾದೇವಿಗಾರರು ಎಚ್ಚರದಿಂದಿರಿ. ಸಾರ್ವಜನಿಕ ವಾಗಿ ಮಾತಿನಿಂದ ಕಲಹ. ಶುಭಸಂಖ್ಯೆ: 2

ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಲಾವಿದರಿಗೆ ಗೌರವ ದೊರೆಯಲಿದೆ. ಅನಿರೀಕ್ಷಿತ ಧನಾಗಮನ ಸಾಧ್ಯತೆಯಿದೆ. ಶುಭಸಂಖ್ಯೆ:5

ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆಸ್ತಿ ವಿವಾದದಲ್ಲಿ ಜಯವಾಗಲಿದೆ. ಶುಭಸಂಖ್ಯೆ:9

ಕಟಕ: ಗೃಹನಿರ್ವಣ ಕಾರ್ಯದಲ್ಲಿ ಮಂದಗತಿಯಿಂದ ಬೇಸರ. ಮಿತ್ರರಿಂದ ಅಗತ್ಯ ಸಹಕಾರ ಸಿಗಲಿದೆ. ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ:1

ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಭೂ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:8

ಕನ್ಯಾ: ಸ್ಪರ್ಧಾತ್ಮಕ ಪರೀಕ್ಷೆ ಬರೆದವರು ತೇರ್ಗಡೆ ಯಾಗುವರು. ಮಹಿಳಾ ಪ್ರತಿಭೆಗಳಿಗೆ ಯಶ. ಕೈಗಾರಿಕೋದ್ಯಮಿಗಳಿಗೆ ಸಹಾಯ. ಶುಭಸಂಖ್ಯೆ:5

ತುಲಾ: ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ. ಪ್ರಮುಖ ನಿರ್ಧಾರಗಳಲ್ಲಿ ಎಡವಲಿದ್ದೀರಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಉತ್ತಮ ದಿನವಲ್ಲ. ಶುಭಸಂಖ್ಯೆ:2

ವೃಶ್ಚಿಕ: ಕೃಷಿಕರಿಗೆ ಲಾಭದಾಯಕ ದಿನ. ಉದ್ಯೋಗ ಕ್ಷೇತ್ರದವರಿಗೆ ಶುಭವಾಗುವುದು. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ ಸಾಧ್ಯತೆ. ಶುಭಸಂಖ್ಯೆ:2

ಧನುಸ್ಸು: ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಯಶ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ:9

ಮಕರ: ಸೇವಾ ಕಾರ್ಯದಿಂದ ಕೀರ್ತಿ ಗಳಿಸುವಿರಿ. ವಕೀಲರಿಗೆ ವೈಫಲ್ಯ ಅತಿಯಾಗಿ ಕಾಡಲಿದೆ. ಐಟಿ ಉದ್ಯೋಗದಲ್ಲಿ ನಷ್ಟವಾಗಬಹುದು. ಶುಭಸಂಖ್ಯೆ: 2

ಕುಂಭ: ಕಮಿಷನ್ ಏಜೆಂಟ್​ಗಳಿಗೆ ಆದಾಯ. ಮನರಂಜನಾ ಕಲೆಗಾರರಿಗೆ ಬೇಡಿಕೆ. ಕೃಷಿ ಉತ್ಪನ್ನದಲ್ಲಿ ವಿಶೇಷ ಲಾಭ. ಉದ್ಯೋಗ ನಷ್ಟ. ಶುಭಸಂಖ್ಯೆ:4

ಮೀನ: ವೈಜ್ಞಾನಿಕ ಸಂಶೋಧನೆಯಲ್ಲಿ ಯಶಸ್ಸು ಸಾಧಿಸುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವರ್ಗಾವಣೆ ನಿರೀಕ್ಷಿಸಬಹುದು.ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net