ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೂಡಿಕೆಯಲ್ಲಿ ಲಾಭ

Nitya Bhavisya Vijayavani
Published on

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ. ಪೋಷಕರ ಆರೋಗ್ಯದತ್ತ ಕಾಳಜಿವಹಿಸಿ. ಹೊಸದನ್ನು ಕಲಿಯುವ ಅವಕಾಶವಿರುತ್ತದೆ. ಶುಭಸಂಖ್ಯೆ: 9

ವೃಷಭ: ಮಕ್ಕಳಿಂದ ಶುಭವಾರ್ತೆ. ಶಿಕ್ಷಣ ಕ್ಷೇತ್ರದವರಿಗೆ ಉತ್ತಮ ಸಮಯ. ಆರೋಗ್ಯದ ವಿಚಾರದಲ್ಲಿ ಸೂಕ್ತ ಮುನ್ನೆಚ್ಚರ ಅಗತ್ಯ. ಶುಭಸಂಖ್ಯೆ:1

ಮಿಥುನ: ಕೋರ್ಟ್ ಕೆಲಸದಲ್ಲಿ ಜಯ. ಕೃಷಿಕರಿಗೆ ಶ್ರಮಕ್ಕೆ ತಕ್ಕ ಫಲ. ರಾಜಕೀಯ ರಂಗದವರಿಗೆ ಮಾತಿನಿಂದ ಸಮಾಜದಲ್ಲಿ ತೊಂದರೆ. ಶುಭಸಂಖ್ಯೆ:8

ಕಟಕ: ವಾದ ವಿವಾದಗಳಾಗುವ ಸಂಭವ. ವಿವಾಹದ ವಿಷಯದಲ್ಲಿ ವಿಫಲತೆ ಕಾಡಲಿದೆ. ಬಂಧು ಬಳಗದವರೊಡನೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 3

ಸಿಂಹ: ಕ್ರೀಡಾಪಟುಗಳಿಗೆ ವಿಶೇಷ ದಿನ. ದಾಂಪತ್ಯದಲ್ಲಿ ವಿರಸ. ನವದಂಪತಿಗಳಿಗೆ ಸಂತಾನ ಯೋಗ. ವ್ಯಾಪಾರಿಗಳಿಗೆ ಧನ ನಷ್ಟ. ಶುಭಸಂಖ್ಯೆ: 3

ಕನ್ಯಾ: ಮಗನ ಮದುವೆಗೆ ಬಂಧು ಮಿತ್ರರ ಸಹಕಾರ ದೊರೆಯಲಿದೆ. ಹೂಡಿಕೆಯಲ್ಲಿ ಲಾಭ ಬರುವುದು. ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 2

ತುಲಾ: ಮಹಿಳೆಯರಿಗೆ ಕೆಲಸದಲ್ಲಿ ಬಡ್ತಿ. ಕಟ್ಟಡ ನಿರ್ವಣದಲ್ಲಿ ಆಕಸ್ಮಿಕ ಘಟನೆ, ಮಾತೃ ವರ್ಗದವರಿಂದ ಸಹಾಯ, ನೆಮ್ಮದಿ. ಶುಭಸಂಖ್ಯೆ:6

ವೃಶ್ಚಿಕ: ಉತ್ತಮ ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ಬಿದ್ದು ಪೆಟ್ಟಾಗುವ ಸಾಧ್ಯತೆಯಿದೆ. ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ:5

ಧನಸ್ಸು: ಭೂ ವ್ಯವಹಾರದಲ್ಲಿ ತೊಂದರೆ. ಕಟ್ಟಡ ವೃತ್ತಿಯವರಿಗೆ ಅಡೆತಡೆ. ಚಾಲಕರಿಗೆ ಗಾಯಗಳಾಗುವ ಸಂಭವವಿದೆ, ಹುಷಾರು. ಶುಭಸಂಖ್ಯೆ:2

ಮಕರ: ವಕೀಲಿವೃತ್ತಿಯಲ್ಲಿ ತೊಂದರೆಯಿದೆ. ಮಹಿಳೆಯರು ಖರೀದಿಯಲ್ಲಿ ಮೋಸ ಹೋಗುವ ಸಂಭವ. ಹಣಕಾಸಿನ ತೊಂದರೆ. ಶುಭಸಂಖ್ಯೆ: 9

ಕುಂಭ: ಧಿಕ ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ. ಮನೆಯ ಹಿರಿಯರೊಂದಿಗೆ ಜಗಳವಾದೀತು. ಸ್ನೇಹಿತರೇ ಶತ್ರುಗಳಾಗುತ್ತಾರೆ. ಶುಭಸಂಖ್ಯೆ:2

ಮೀನ: ವ್ಯಾಪಾರದ ಹೂಡಿಕೆಯಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ವಕೀಲರಿಗೆ ಶುಭದಾಯಕ ದಿನ. ರೇಷ್ಮೆ ಕೃಷಿಕರಿಗೆ ಆಕಸ್ಮಿಕ ಧನಪ್ರಾಪ್ತಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net