ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪ್ರೇಮದ ವಿಷಯಗಳಿಂದ ಅಶಾಂತಿ

Nitya Bhavisya Vijayavani
Published on

ಮೇಷ: ಸಾಮಾಜಿಕ ಕೆಲಸದಿಂದ ಅನುಕೂಲ. ಕುಟುಂಬದಲ್ಲಿ ಅಪಮಾನ. ಸ್ವಾಭಿಮಾನಕ್ಕೆ ಸ್ನೆಹಿತರಿಂದ ದೂರ. ಮಕ್ಕಳ ನಡತೆಗೆ ಬೇಸರ. ಶುಭಸಂಖ್ಯೆ: 9

ವೃಷಭ: ಬಂಧುಗಳೊಂದಿಗೆ ಮನಸ್ತಾಪ ಆಗಬಹುದು. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 2

ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ಅನಾರೋಗ್ಯ. ಪ್ರೀತಿಯ ವಿಷಯಗಳ ಪ್ರಸ್ತಾಪ. ಗುರುನಿಂದನೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ಕಟಕ: ನಂಬಿದವರಿಂದಲೇ ಮೋಸ. ಭೂಮಿ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಸ್ನೇಹಿತರಲ್ಲಿ ವೈಮನಸ್ಯ. ಶುಭಸಂಖ್ಯೆ: 9

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಮಾನಸಿಕ ಸಮಸ್ಯೆ. ಮಕ್ಕಳ ನಡವಳಿಕೆಯಿಂದ ಬೇಸರ. ಪ್ರೇಮದ ವಿಷಯಗಳಿಂದ ಅಶಾಂತಿ. ಶುಭಸಂಖ್ಯೆ: 6

ಕನ್ಯಾ: ರಾಜಕಾರಣಿಗಳಿಂದ ನೆರವು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಸಾರಿಗೆ ವ್ಯವಹಾರದಲ್ಲಿ ನಷ್ಟ. ಸ್ತ್ರೀಯರಿಗೆ ಆಭರಣ ಲಾಭ. ಶುಭಸಂಖ್ಯೆ: 5

ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾಗಬಹುದು. ಆತ್ಮಗೌರವಕ್ಕೆ ಚ್ಯುತಿಯಾದೀತು. ಉತ್ತಮ ಅವಕಾಶಗಳು ದೊರೆಯುವವು. ಶುಭಸಂಖ್ಯೆ: 9

ವೃಶ್ಚಿಕ: ದುರಾಲೋಚನೆಗಳು ದಾರಿತಪ್ಪಿಸಬಹುದು. ವ್ಯವಹಾರದಲ್ಲಿ ಮೋಸ, ನಷ್ಟ ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಶುಭಸಂಖ್ಯೆ: 1

ಧನಸ್ಸು: ಆತ್ಮೀಯರಿಂದ ಸಕಾಲಕ್ಕೆ ಸಾಲದ ಸಹಾಯ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ. ದಿನಸಿ ವ್ಯಾಪಾರಸ್ಥರಿಗೆ ನಿರಾಸೆ. ಶುಭಸಂಖ್ಯೆ: 5

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ. ಪ್ರೀತಿಪಾತ್ರರು ದೂರ. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 6

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆ ಮತ್ತು ಆತಂಕ. ಶಕ್ತಿ ದೇವತೆಗಳ ದರ್ಶನಕ್ಕೆ ಪ್ರಯಾಣ. ಶುಭಸಂಖ್ಯೆ: 5

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಲೇಖಕರು, ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಲಾಭ. ಗಂಡನ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net