ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಲೇವಾದೇವಿ ವ್ಯಾಪಾರದಲ್ಲಿ ಲಾಭ

Nitya Bhavisya Vijayavani
Published on

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಆದಾಯ. ಕುಟುಂಬದಲ್ಲಿ ಶಾಂತಿ. ಮಾಧ್ಯಮ ಕ್ಷೇತ್ರದವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ:6

ವೃಷಭ: ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ಸಾರ್ವಜನಿಕ ರಂಗದಲ್ಲಿ ಹೆಚ್ಚು ಧೈರ್ಯದಿಂದಿರಿ. ಅನವಶ್ಯಕ ಖರ್ಚು ಬೇಡ. ಶುಭಸಂಖ್ಯೆ: 9

ಮಿಥುನ: ಆರಕ್ಷಕ ವೃತ್ತಿಯವರಿಗೆ ಉನ್ನತಾಧಿಕಾರ ದೊರೆಯುತ್ತದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಮಕ್ಕಳಿಗೆ ಕೀರ್ತಿ ಲಭ್ಯ. ಶುಭಸಂಖ್ಯೆ: 2

ಕಟಕ: ಕಮಿಷನ್ ವ್ಯವಹಾರದಲ್ಲಿ ಗೊಂದಲ. ತಾಂತ್ರಿಕ ಪರಿಣಿತರಿಗೆ ಶುಭ. ರಾಜಕಾರಣಿಗಳಿಗೆ ಬಂಧನ ಭೀತಿ ಕಾಡಬಹುದು. ಶುಭಸಂಖ್ಯೆ: 7

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ. ಮರಳು, ಸಿಮೆಂಟ್ ಕಬ್ಬಿಣ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ:1

ಕನ್ಯಾ: ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ. ಲೇವಾದೇವಿ ವ್ಯಾಪಾರದಲ್ಲಿ ಲಾಭವಾಗುವುದು. ಮನೋವೈದ್ಯರಿಗೆ ಶುಭದಾಯಕ ದಿನ. ಶುಭಸಂಖ್ಯೆ:3

ತುಲಾ: ಮಕ್ಕಳಿಗೆ ಚರ್ಮದ ಸಮಸ್ಯೆ ಕಾಡೀತು. ಮಹಿಳೆಯರಿಗೆ ಮಾನಸಿಕ ಒತ್ತಡ ಅಧಿಕ. ಆಹಾರದ ಬಗ್ಗೆ ಎಚ್ಚರವಹಿಸಲೇ ಬೇಕು. ಶುಭಸಂಖ್ಯೆ:4

ವೃಶ್ಚಿಕ: ಮಹಿಳೆಯರಿಗೆ ಉನ್ನತ ಸ್ಥಾನ ದೊರೆಯಲಿದೆ. ಟೆಕ್ನಾಲಜಿ ಪರಿಣಿತರಿಗೆ ಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಸಂಖ್ಯೆ: 5

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ. ಕ್ರೀಡಾಪಟುಗಳಿಗೆ ಸಮಾಜದಲ್ಲಿ ಗೌರವ. ಮಕ್ಕಳಿಗೆ ಉನ್ನತಾಧಿಕಾರ ದೊರೆಯುತ್ತದೆ. ಶುಭಸಂಖ್ಯೆ:9

ಮಕರ: ಪಾಲುದಾರಿಕೆಯಲ್ಲಿ ತೊಂದರೆ. ಧಾನ್ಯ ಮಾರಾಟಸ್ಥರಿಗೆ ಆದಾಯ. ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ:7

ಕುಂಭ: ಸ್ನೇಹಿತರೊಂದಿಗೆ ದೂರ ಪ್ರಯಾಣ. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ. ಆಸ್ತಿ ವಿಷಯಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ:2

ಮೀನ: ಉಪನ್ಯಾಸಕರಿಗೆ ಶುಭದಾಯಕ ದಿನ. ಜೇನು ಕೃಷಿಗೆ ಸರ್ಕಾರದಿಂದ ಹಣ ಸಿಗಲಿದೆ. ಯಕ್ಷಗಾನ ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net