ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಲೇವಾದೇವಿ ವ್ಯವಹಾರದಲ್ಲಿ ಆದಾಯ

Nitya Bhavisya Vijayavani
Published on

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ ಬರಲಿದೆ. ರಾಜಕೀಯ ಸಮೂಹದವರು ಎಚ್ಚರ ವಹಿಸಿ. ಅವಿವಾಹಿತರಿಗೆ ಮದುವೆಗೆ ಸಕಾಲ. ಶುಭಸಂಖ್ಯೆ:3

ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ. ಅಪರೂಪದ ವ್ಯಕ್ತಿಯ ಭೇಟಿ. ತಾಯಿಯ ಆರೋಗ್ಯದಲ್ಲಿ ಅಚ್ಚರಿಯ ಸುಧಾರಣೆ.ಶುಭಸಂಖ್ಯೆ: 6

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತವಾಗುವುದು. ವಿವಾಹ ಕಾರ್ಯ ಸಂಭ್ರಮದಿಂದ ಜರುಗಲಿದೆ. ಪಾಲುದಾರಿಕೆಯಲ್ಲಿ ಗಳಿಕೆ. ಶುಭಸಂಖ್ಯೆ:5

ಕಟಕ: ಮಗನ ವಿವಾಹಕ್ಕೆ ಅಡ್ಡಿ ಎದುರಾಗಬಹುದು. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 1

ಸಿಂಹ: ಉದ್ಯೋಗ ಬದಲಿಸಲು ಇದು ಸೂಕ್ತವಾದ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ:7

ಕನ್ಯಾ: ಕುಟುಂಬದ ತೀರ್ಮಾನಗಳಲ್ಲಿ ಎಚ್ಚರವಹಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ ಬರಲಿದೆ. ಗೃಹ ನಿರ್ಮಾಣಕ್ಕೆ ಅನುಕೂಲ. ಶುಭಸಂಖ್ಯೆ: 4

ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ ದೊರೆಯಲಿದೆ. ವಿಜ್ಞಾನಿಗಳಿಗೆ ಸನ್ಮಾನ ಸಿಗಲಿದೆ. ಆರೋಗ್ಯದ ಕಡೆ ವಿಶೇಷ ಗಮನವಿರಲಿ. ಶುಭಸಂಖ್ಯೆ:7

ವೃಶ್ಚಿಕ: ಔಷಧಿ ಮಾರಾಟ ಮಾಡುವವರಿಗೆ ಬೇಡಿಕೆ. ಅಧಿಕಾರಿಗಳೊಂದಿಗೆ ವಾದ -ವಿವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ:6

ಧನಸ್ಸು: ಕಟ್ಟಡ ನಿರ್ವಪಕರ ಶ್ರಮಕ್ಕೆ ತಕ್ಕ ಯಶಸ್ಸು ಸಿಗುವುದು. ಹಿರಿಯ ಅಧಿಕಾರಿಗಳಿಂದ ಕಿರುಕುಳ. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ:1

ಮಕರ: ಪೊಲೀಸರಿಗೆ ಕಾರ್ಯದೊತ್ತಡ. ವೈದ್ಯರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸಗಾರರಿಗೆ ನಿರೀಕ್ಷೆಗೂ ಮೀರಿ ಉತ್ತಮ ಆದಾಯ. ಶುಭಸಂಖ್ಯೆ:5

ಕುಂಭ: ಯಂತ್ರೋಪಕರಣದೊಂದಿಗಿನ ಕೆಲಸದಲ್ಲಿ ಎಚ್ಚರ ಅಗತ್ಯ. ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ:2

ಮೀನ: ಮಹಿಳೆಯರಿಗೆ ಉನ್ನತ ಸ್ಥಾನ ಪ್ರಾಪ್ತಿ. ವಾಣಿಜ್ಯ ವ್ಯವಹಾರದಲ್ಲಿ ನಿರೀಕ್ಷಿತ ಯಶ ಸಾಧಿಸುವಿರಿ. ದಿನಸಿ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net