

ಮೇಷ: ಅಡಕೆ ಕೃಷಿಕರಿಗೆ ಅನುಕೂಲ. ಕನಸಿನ ನಿವೇಶನ ಸಿಗಲಿದೆ. ಮನೆಯಲ್ಲಿ ಮಾತಿನಿಂದ ಕಲಹ. ತಾಯಿ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 9
ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ. ದಿನಸಿ ವ್ಯಾಪಾರಸ್ಥರಿಗೆ ಹೊಸ ರೀತಿಯ ಬದಲಾವಣೆ. ಕಾರು ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 1
ಮಿಥುನ: ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಪ್ರಶಂಸೆ. ಜಂಟಿ ವ್ಯವಹಾರದಲ್ಲಿ ಜಾಗರೂಕರಾಗಿರಿ. ಸ್ನೇಹಿತರಿಂದ ಅರ್ಥಿಕ ಸಹಾಯ. ಶುಭಸಂಖ್ಯೆ: 7
ಕಟಕ: ದೂರ ಪ್ರಯಾಣದಿಂದ ಲಾಭ. ಹೋಟೆಲ್ ವ್ಯವಹಾರದಲ್ಲಿ ಅಧಿಕ ಹಣ ಬರಲಿದೆ. ವಿದೇಶಿ ವ್ಯವಹಾರದಲ್ಲಿ ವಿಶೇಷ ಆದಾಯ. ಶುಭಸಂಖ್ಯೆ: 3
ಸಿಂಹ: ಆಹಾರ ಧಾನ್ಯಗಳ ವ್ಯವಹಾರದಲ್ಲಿ ಲಾಭ. ತೈಲ ವ್ಯಾಪಾರಿಗಳಿಗೆ ಆದಾಯ. ತೆರಿಗೆ ಇಲಾಖೆಯ ಉದ್ಯೋಗ ದೊರೆಯುವುದು. ಶುಭಸಂಖ್ಯೆ: 7
ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಆದಾಯ. ತಂದೆಯಿಂದ ಗೃಹ ನಿರ್ವಣಕ್ಕೆ ಸಹಾಯ. ಮಿತ್ರರೊಂದಿಗೆ ಸಂತೋಷ ಕೂಟ. ಶುಭಸಂಖ್ಯೆ: 5
ತುಲಾ: ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಿದೆ. ಚಿನ್ನ ಬೆಳ್ಳಿ ಆಭರಣಗಳ ವ್ಯವಹಾರದಲ್ಲಿ ಪ್ರಗತಿ. ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ: 6
ವೃಶ್ಚಿಕ: ಸಾಂಪ್ರದಾಯಿಕ ಕೃಷಿಗೆ ಬೇಡಿಕೆ. ಮಹಿಳಾ ರಾಜಕಾರಣಿ ಗಳಿಗೆ ಶುಭದಿನ. ಕುಟುಂಬದಲ್ಲಿ ಅನಿವಾರ್ಯವಾಗಿ ಖರ್ಚು ಹೆಚ್ಚುವುದು. ಶುಭಸಂಖ್ಯೆ: 1
ಧನುಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ವಿಶ್ರಾಂತಿ ವೇತನ ಲಭಿಸುವುದು. ಉದ್ಯೋಗನಿಮಿತ್ತ ವಿದೇಶ ಪ್ರಯಾಣ. ಶುಭಸಂಖ್ಯೆ: 3
ಮಕರ: ಬ್ಯಾಂಕಿನಿಂದ ಸಾಲ ಪಡೆಯಲು ಅನುಕೂಲ. ಪಾಲುದಾರಿಕೆಯಲ್ಲಿ ಉತ್ತಮ ಲಾಭ. ಹೃದಯ ಸಂಬಂಧಿ ಬಾಧೆಗೆ ಪರಿಹಾರ. ಶುಭಸಂಖ್ಯೆ: 5
ಕುಂಭ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಹಣ ಗಳಿಸುವಿರಿ. ಸ್ಥಿರಾಸ್ತಿಯಿಂದ ಸಾಲ ಸಿಗಲಿದೆ. ಅಡಮಾನ ಇಟ್ಟ ಚಿನ್ನ ಬಿಡಿಸಿಕೊಳ್ಳುವಿರಿ. ಶುಭಸಂಖ್ಯೆ: 8
ಮೀನ: ಆಪ್ತರೊಂದಿಗೆ ಕಷ್ಟ ಹಂಚಿಕೊಳ್ಳಿ. ರೆಸ್ಟೋರೆಂಟ್ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಬರಲಿದೆ.ಪ್ರಿಯ ಜನರ ಭೇಟಿಯಾಗುವುದು. ಶುಭಸಂಖ್ಯೆ: 6