ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರದಿಂದ ಧನಾದಾಯ ಬರಲಿದೆ

Nitya Bhavisya Vijayavani
Published on

ಮೇಷ: ಹೊಸ ಉದ್ಯಮದ ಪ್ರಾರಂಭದ ಕುರಿತು ಯೋಚನೆ. ತಲೆ ನೋವಿನ ಸಮಸ್ಯೆ. ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಲಾಭ. ಸರ್ಕಾರಿ ಕೆಲಸ ಮಾಡುವವರಿಗೆ ಅನಿರೀಕ್ಷಿತ ತಿರುವು. ಹಿರಿಯ ಅಧಿಕಾರಿಗಳೊಂದಿಗೆ ವಾದ. ಶುಭಸಂಖ್ಯೆ: 9

ಮಿಥುನ: ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಿ. ಸರ್ಕಾರದಿಂದ ಧನಾದಾಯ ಬರಲಿದೆ. ಅಲಂಕಾರಿಕ ವಸ್ತುಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 5

ಕಟಕ: ಇಂದು ಸಾಲ ಮಂಜೂರಾಗಲಿದೆ. ಕೆಲಸಗಳಿಗೆ ಆತ್ಮಸ್ಥೈರ್ಯ ಬೇಕು. ಹಳೆಯ ವಸ್ತುಗಳ ಸಂಗ್ರಹಣೆಯಲ್ಲಿ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 7

ಸಿಂಹ: ಗಣ್ಯರ ಭೇಟಿಯಿಂದ ಕಾರ್ಯಸಾಧನೆಯಾಗುವುದು. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಆಸ್ತಿ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 4

ಕನ್ಯಾ: ಕಲಾವಿದರಿಗೆ ಯಶಸ್ಸು ದೊರೆಯಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭವಾಗುವುದು. ಮೂಳೆ ಮುರಿತ ಸಾಧ್ಯತೆ, ಎಚ್ಚರ. ಶುಭಸಂಖ್ಯೆ: 3

ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭದಿನ. ಲೆಕ್ಕ ಪರೀಕ್ಷಕರಿಗೆ ಲಾಭ. ಉನ್ನತ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವಿರಲಿ. ಶುಭಸಂಖ್ಯೆ: 2

ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಸ್ಥರಿಗೆ ವಿಶೇಷ ಲಾಭವಿದೆ. ಪಿತ್ರಾರ್ಜಿತ ಆಸ್ತಿ ಲಭ್ಯ, ಆಭರಣಗಳ ಕುಸುರಿ ಕಲೆಗಾರರಿಗೆ ಧನಲಾಭ. ಶುಭಸಂಖ್ಯೆ: 3

ಧನಸ್ಸು: ಆಹಾರ ಪದಾರ್ಥ ವ್ಯಾಪಾರಸ್ಥರಿಗೆ ಅಭಿವೃದ್ಧಿ. ವಿದ್ಯುತ್ ಸಂಬಂಧಿ ಕೆಲಸಗಾರರು ಎಚ್ಚರದಿಂದಿರಿ. ಗೃಹ ನಿರ್ವಣಕ್ಕೆ ತೊಂದರೆ. ಶುಭಸಂಖ್ಯೆ: 1

ಮಕರ: ಮಗಳ ವಿವಾಹದ ಚಿಂತೆ ಕಾಡಲಿದೆ. ಸಾಲ ಮಾಡಬೇಕಾಗುವ ಪರಿಸ್ಥಿತಿ. ಮಹಾತ್ಮರ ಭೇಟಿ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 6

ಕುಂಭ: ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿ. ಅನಗತ್ಯ ತಿರುಗಾಟ. ಕುಟುಂಬದಲ್ಲಿ ಮಂಗಳ ಕಾರ್ಯದ ಸಂಭ್ರಮ. ಶುಭಸಂಖ್ಯೆ: 8

ಮೀನ: ಹೂಡಿಕೆ ವ್ಯವಹಾರಗಳಲ್ಲಿ ನಷ್ಟವಾಗಬಹುದು. ವಿದ್ಯಾರ್ಥಿಗಳಲ್ಲಿ ಆತಂಕ. ಜೇನು ಕೃಷಿಕರಿಗೆ ವಿಶೇಷ ಅವಕಾಶ ಲಭಿಸಲಿದೆ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net