

ಮೇಷ: ಆಕಸ್ಮಿಕ ದುರ್ಘಟನೆಯಿಂದ ನೋವು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವಿಚಾರವಾಗಿ ಕೋರ್ಟ್ಗೆ ಅಲೆದಾಟ. ಶುಭಸಂಖ್ಯೆ: 5
ವೃಷಭ: ದಾಂಪತ್ಯದಲ್ಲಿ ಆಲಸ್ಯ ಕಾಡಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ಸಿಗುವುದು. ಸಂಗಾತಿಯಿಂದ ಅದೃಷ್ಟ. ಶುಭಸಂಖ್ಯೆ: 8
ಮಿಥುನ: ಚಿಕ್ಕ ಅಂಗಡಿ ಮಾಲೀಕರಿಗೆ ಧನನಷ್ಟ. ಸಾಲ ಮಾಡುವ ಸಂಭವ. ಕುಟುಂಬ ಸಮೇತ ಪ್ರಯಾಣ. ಮಾತಿನಿಂದ ಶತ್ರುಗಳು ಜಾಸ್ತಿ. ಶುಭಸಂಖ್ಯೆ: 3
ಕಟಕ: ಪ್ರೀತಿ ಪ್ರೇಮದಲ್ಲಿ ಅಡೆತಡೆ ಎದುರಾಗುವುದು. ಆರೋಗ್ಯ ಸಮಸ್ಯೆಗಳು ಹೆಚ್ಚುವವು. ಆಸೆ- ಆಕಾಂಕ್ಷೆ ಗಳಿಗೆ ಧಕ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ: 3
ಸಿಂಹ: ಮನೆಯ ವಾತಾವರಣ ಕಲುಷಿತ. ದಾಂಪತ್ಯದಲ್ಲಿ ಅಸಮಾಧಾನ. ವಿಕೃತ ಆಸೆಗಳಿಗೆ ಬಲಿ. ಜೇನು ಸಾಕಣೆಯಯಲ್ಲಿ ಲಾಭ. ಶುಭಸಂಖ್ಯೆ: 9
ಕನ್ಯಾ: ನಟನಾ ಕ್ಷೇತ್ರದವರಿಗೆ ಅಧಿಕ ಲಾಭ. ನೆರೆಯವರೊಡನೆ ಕಿರಿಕಿರಿ. ಸಹೋದರಿಯೊಡನೆ ವೈರತ್ವ. ಮಕ್ಕಳಿಗೆ ಉನ್ನತ ಹುದ್ದೆ. ಶುಭಸಂಖ್ಯೆ: 6
ತುಲಾ: ಅವಿವಾಹಿತರಿಗೆ ವಿವಾಹ. ಕುಟುಂಬ ಸಮಸ್ಯೆಯಿಂದ ಮುಕ್ತಿ. ಧನಾಗಮನ. ಸ್ವಂತ ಉದ್ಯಮದವರಿಗೆ ವಿಶೇಷ ಅನುಕೂಲ. ಶುಭಸಂಖ್ಯೆ: 2
ವೃಶ್ಚಿಕ: ವಾಹನದಿಂದ ಪೆಟ್ಟು. ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವಿರಿ. ಉದ್ಯೋಗಸ್ಥ ಮಹಿಳೆಯರು ಒತ್ತಡಕ್ಕೆ ಒಳಗಾಗುವಿರಿ. ಶುಭಸಂಖ್ಯೆ: 5
ಧನುಸ್ಸು: ಸಾರ್ವಜನಿಕವಾಗಿ ಮನ್ನಣೆ. ಆತ್ಮೀಯರ ವಿಯೋಗ ಸಾಧ್ಯತೆ. ಕುಟುಂಬ ನಷ್ಟಕ್ಕೆ ಈಡಾಗುವುದು. ದುರ್ಘಟನೆಯಿಂದ ಭಯ. ಶುಭಸಂಖ್ಯೆ: 3
ಮಕರ: ಪಾಲುದಾರಿಕೆಯಲ್ಲಿ ಲಾಭ. ಪೀಠೋಪಕರಣ ವ್ಯಾಪಾರದಲ್ಲಿ ಅಧಿಕ ಲಾಭ. ಆಸೆಗಳು ಈಡೇರುತ್ತವೆ. ಮಕ್ಕಳಿಂದ ಅನುಕೂಲ. ಶುಭಸಂಖ್ಯೆ: 9
ಕುಂಭ: ಸ್ನೇಹಿತನ ಭೇಟಿ. ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ. ಉದ್ಯೋಗದಲ್ಲಿ ತೊಂದರೆ. ಬಾಡಿಗೆದಾರರು, ಸಾಲಗಾರರಿಂದ ನಷ್ಟ. ಶುಭಸಂಖ್ಯೆ: 6
ಮೀನ: ಆಸ್ತಿ ವಿಷಯದಲ್ಲಿ ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಪ್ರತಿಭಾನ್ವಿತರು ಅವಕಾಶ ವಂಚಿತರಾಗುವಿರಿ. ಮಾನ ಅಪಮಾನಗಳು, ಚಿಂತೆ. ಶುಭಸಂಖ್ಯೆ: 3