More

    ಬೆತ್ತಲೆ ಹಬ್ಬ; ಪುರುಷರ ಜತೆ ಮಹಿಳೆಯರಿಗೂ ಅವಕಾಶ..ಷರತ್ತುಗಳು ಅನ್ವಯ

    ಟೋಕಿಯೋ: ಜಪಾನ್‌ನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ 1650 ವರ್ಷಗಳಿಂದ ನಡೆದು ‘ಬೆತ್ತಲೆ ಪುರುಷ’ ಉತ್ಸವದಲ್ಲಿ ಭಾಗವಹಿಸಲು ಇದೆ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ನೀಡಿದೆ, ಆದರೆ ಷರತ್ತುಗಳು ಅನ್ವಯಿಸುತ್ತವೆ.

    ಜಪಾನ್‌ನ ಐಚಿ ಪ್ರಿಫೆಕ್ಚರ್‌ನ ಇನಾಜಾವಾ ಪಟ್ಟಣದಲ್ಲಿರುವ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ  ಉತ್ಸವವನ್ನು ಆಯೋಜಿಸಲಾಗಿದೆ. ಈ ವರ್ಷ ಫೆಬ್ರವರಿ 22 ರಂದು ನಡೆಯುವ ಉತ್ಸವದಲ್ಲಿ ಸುಮಾರು 10,000 ಸ್ಥಳೀಯ ಪುರುಷರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಜಪಾನ್‌ನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ 1650ರಿಂದ ಪುರುಷರ ಬೆತ್ತಲೆ ಹಬ್ಬ ನಡೆದುಕೊಂಡು ಬರುತ್ತಿದೆ. ಈ ಧಾರ್ಮಿಕ ಹಬ್ಬ ಕೇವಲ ಪುರುಷರಿಗೆ ಮಾತ್ರ ಆಯೋಜಿಸಲಾಗುತ್ತಿತ್ತು ಈ ಹಬ್ಬವನ್ನು ಜಾಪನ್ ಸಾಂಪ್ರಾದಾಯಿಕ ಭಾಷೆಯಲ್ಲಿ ಹಡಕ ಮಟ್ಸುರಿ ಎಂದು ಕರೆಯುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಪುರುಷರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಪಾನ್‌ನ ಆ್ಯಚಿ ಫ್ರೆಕ್ಷರ್ ಸಮೀಪದ ಇನಝವಾ ಪಟ್ಟಣದಲ್ಲಿ ಈ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ.

    ಪ್ರತಿ ಭಾರಿ ಪರುಷರ ಬೆತ್ತಲೆ ಹಬ್ಬದಲ್ಲಿ ಸುಮಾರು 10,000ಕ್ಕೂ ಹೆಚ್ಚು ಪುರುಷರು ಬೆತ್ತಲೆಯಾಗಿ ಪಾಲ್ಗೊಳ್ಳುತ್ತಾರೆ. ಹಲವು ವರ್ಷಗಳಿಂದ ಮಹಿಳೆಯರಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಅನ್ನೋ ಮನವಿಗಳಿತ್ತು. ಈ ಮನವಿ ಪುರಸ್ಕರಿಸಿರುವ ಕೊನೊಮಿಯಾ ಧಾರ್ಮಿಕ ಕೇಂದ್ರ, ಇದೇ ಮೊದಲ ಬಾರಿಗೆ ಷರತ್ತುಗಳನ್ನು ವಿಧಿಸಿ 40 ಮಹಿಳೆಯರಿಗೂ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕೊನೊಮಿಯಾ ಧಾರ್ಮಿಕ ಕೇಂದ್ರ ನೀಡಿದೆ. ಹಂತ ಹಂತವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ಹೇಳಿದೆ.

    ಸಂಪೂರ್ಣ ಬಟ್ಟೆ ಧರಿಸಿ ಮಹಿಳೆಯರು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ. ಇದು ಧಾರ್ಮಿಕ ಹಬ್ಬ, ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ ಎಂದು ಧಾರ್ಮಿಕ ಕೇಂದ್ರ ಸ್ಪಷ್ಟಪಡಿಸಿದೆ. ಸ್ಥಳೀಯ ಮಹಿಳೆಯೊಬ್ಬಳು ಮಾತನಾಡಿ, ತಾನು ಚಿಕ್ಕವಯಸ್ಸಿನಿಂದಲೂ ಆಚರಣೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದೆ ಎಂದು ಹೇಳಿದ್ದಾಳೆ.

    ಏನಿದು ‘ಬೆತ್ತಲೆ ಮನುಷ್ಯ ಹಬ್ಬ’?:   ‘ನೇಕೆಡ್ ಮ್ಯಾನ್ ಫೆಸ್ಟಿವಲ್’ ಅಥವಾ ಹಡಕ ಮಟ್ಸುರಿ ಉತ್ಸವವು ಸಂಗೀತ ಬ್ಯಾಂಡ್‌ಗಳನ್ನು ಹೊಂದಿರುವುದಿಲ್ಲ ಆದರೆ ಅದು ಹೊಸ ವರ್ಷದಲ್ಲಿ ಅದೃಷ್ಟವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಹಬ್ಬವು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ‘ಪುರುಷರಿಗೆ ಮಾತ್ರ’ ಸಂಬಂಧವಾಗಿದೆ, ಮತ್ತು ಸಾವಿರಾರು ಜನರು ‘ಶಿನ್-ಓಟೋಕೊ’ವನ್ನು ಸ್ಪರ್ಶಿಸಲು ನೂಕುನುಗ್ಗಲಿನಂತಹ ಪರಿಸ್ಥಿತಿ ಇರುತ್ತದೆ.  “ದೇವರ ಮನುಷ್ಯ” ಮನುಷ್ಯನನ್ನು ಸ್ಪರ್ಶಿಸುವುದು, ನಿಜವಾದ ವ್ಯಕ್ತಿ, ಅವನ ಪಾಪಗಳನ್ನು ಶುದ್ಧೀಕರಿಸುತ್ತದೆ ಮತ್ತು ಒಂದು ವರ್ಷದವರೆಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

    ಖುಷಿ..ದರ್ಶನ್ ಮಗಳೆಂದು ನಾನು ಹೇಳಿಲ್ಲ; ನನಗೂ ಕಾನೂನು ಹೋರಾಟ ಮಾಡುವ ಹಕ್ಕಿದೆ..ಎಚ್ಚರಿಕೆ ನೀಡಿದ ಪವಿತ್ರಾ ಗೌಡ

    ದರ್ಶನ್ ಜತೆ ನಾನು ಇರೋದಕ್ಕೆ ತೊಂದ್ರೆ ಇಲ್ಲ ಅಂತ ವಿಜಯಲಕ್ಷ್ಮೀ ಹೇಳಿದ್ರು; ಖಡಕ್‌ ಉತ್ತರ ಕೊಟ್ಟ ಪವಿತ್ರ ಗೌಡ!

    ವಿಜಯಲಕ್ಷ್ಮೀ ದರ್ಶನ್ V/s ಪವಿತ್ರಾ ಗೌಡ; ಬೀದಿಗೆ ಬಂತು ಸಂಸಾರ ಗಲಾಟೆ

    ಪಾಕ್​ ಪತಿ ಮುಂದೆ ಕೈ ಚಾಚುವಷ್ಟು ದುರ್ಗತಿ ಬಂದಿಲ್ಲ ಭಾರತದ ಸಾನಿಯಾಗೆ! ಮೂಗುತಿ ಸುಂದ್ರಿ ಒಟ್ಟು ಆಸ್ತಿ ಕೇಳಿದ್ರೆ ತಲೆ ತಿರುಗೋದು ಪಕ್ಕಾ…

    ತಗಡು, ಗುಲಾಮಾ ಅಂತ ಹೇಳಿದವರಿದ್ದಾರೆ..ಗೂಬೆ ಅಂದಿದ್ದಕ್ಕೆ ನನ್ನ ತಂದೆನ ರೋಡಿಗೆ ನಿಲ್ಲಿಸಿಬಿಟ್ಟರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts