ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕಾಗಿ ಕೆಲವರು ಯಾವುದೇ ಮಟ್ಟಕ್ಕಾದರೂ ಇಳಿಯುತ್ತಾರೆ. ಆದರೆ, ಇಂತಹ ಹುಚ್ಚು ಸಾಹಸಗಳು ಜೀವಕ್ಕೆ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಮಾತ್ರ ಎಂದಿಗೂ ಮರೆಯಬಾರದು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಸಹಾಯದಿಂದ ಕಾರಿನ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ಭಯಾನಕ ವಿಡಿಯೋ ನೆಟ್ಟಿಗರಲ್ಲಿ ಆಘಾತ ಉಂಟು ಮಾಡಿದೆ.
ಅಪಾಯಕಾರಿ ವಿಡಿಯೋವನ್ನು @sumit_cool_dubey ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಚಲಿಸುತ್ತಿರುವ ಕಾರಿನ ಬಾಗಿಲಿಗೆ ವ್ಯಕ್ತಿಯನ್ನು ಪ್ಲಾಸ್ಟಿಕ್ ಸಹಾಯದಿಂದ ಸುತ್ತಿರುವುದನ್ನು ಕಾಣಬಹುದು. ಕಾರು ಚಲಿಸುವಾಗ ಆ ವ್ಯಕ್ತಿಯು ನೇತಾಡುತ್ತಾ ಅದನ್ನು ಆನಂದಿಸುತ್ತಿರುವ ದೃಶ್ಯವು ಇದೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಬಳಿಕ ಈ ವಿಡಿಯೋ 91 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೆ, 2.1 ಮಿಲಿಯನ್ ಮಂದಿ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
ಇದೇ ವಿಡಿಯೋವನ್ನು @sumit_cool_dubey ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಯಾವುದೇ ಸಂವೇದನಾಶೀಲ ವ್ಯಕ್ತಿಯು ಇದನ್ನು ಮಾಡುವುದಿಲ್ಲ, ನಿಮ್ಮ ಜೀವನವನ್ನು ತಮಾಷೆ ಮಾಡುವುದು ಅತ್ಯಂತ ಮೂರ್ಖತನವಾಗಿದೆ ಎಂದು ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ. ಕಾರ್ ಬ್ರೇಕ್ ವಿಫಲವಾಗಬಹುದು ಮತ್ತು ಅಪಘಾತ ಸಂಭವಿಸಬಹುದು. ಸ್ವಲ್ಪ ನಿಮ್ಮ ಮೆದುಳನ್ನು ಬಳಸಿಕೊಳ್ಳಿ. ಇದು ಸರಿಯೋ? ತಪ್ಪೋ? ಎಂದು ತಿಳಿದುಕೊಳ್ಳಿ ಎಂದು ಮತ್ತೊಬ್ಬ ನೆಟ್ಟಿಗ ಟೀಕಾ ಪ್ರಹಾರ ನಡೆಸಿದ್ದಾರೆ.
ಮತ್ತೊಮ್ಮೆ ಇಂತಹ ಸಾಹಸಗಳನ್ನು ಮಾಡಬೇಡಿ. ಹಣ, ಸಮಯ, ಶಕ್ತಿ ಮತ್ತು ಪರಿಸರಕ್ಕೆ ಇಷ್ಟು ಪ್ಲಾಸ್ಟಿಕ್ ಕೂಡ ವ್ಯರ್ಥ ಎಂದಿರುವ ನೆಟ್ಟಿಗರು ಪೊಲೀಸರು ಈ ಎಲ್ಲ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)
ತಡರಾತ್ರಿಯ ಈ ಕೆಟ್ಟ ಅಭ್ಯಾಸವೇ ಹೀನಾಯ ಸೋಲಿಗೆ ಕಾರಣ: ಆರ್ಸಿಬಿ ವಿರುದ್ಧ ಸುರೇಶ್ ರೈನಾ ಕಿಡಿ!
ನೇಹಾ ಹತ್ಯೆ ಪ್ರಕರಣ: 9 ಅಲ್ಲ 14, ಹೃದಯಕ್ಕೂ ಇರಿತ, ಮರಣೋತ್ತರ ವರದಿಯಲ್ಲಿ ಸ್ಫೋಟಕ ಸಂಗತಿ ಬಯಲು