ರಜನಿಕಾಂತ್​ಗೆ ಒಲಿದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Rajanikant
Published on

ಮುಂಬೈ: ಸೂಪರ್​ಸ್ಟಾರ್​ ರಜನಿಕಾಂತ್​ಗೆ ದೇಶದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿದೆ.

2020ನೇ ಸಾಲಿನ 51ನೇ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಬಹುಭಾಷಾನಟ ರಜನಿಕಾಂತ್​ ಅವರು ಆಯ್ಕೆಯಾಗಿದ್ದು, ಕೇಂದ್ರ ವಾರ್ತಾ ಮತ್ತು‌ ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಘೋಷಣೆ ಮಾಡಿದ್ದಾರೆ. ತಲೈವಾರ ಲಕ್ಷಾಂತರ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.

ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರ ಪ್ರತಿವರ್ಷ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ನೀಡುತ್ತಿದೆ. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಜನ್ಮ ಶತಾಬ್ದಿಯ ವರ್ಷ 1969ರಿಂದ ಈ ಪ್ರಶಸ್ತಿಯನ್ನು ಚಿತ್ರರಗಂದ ಮಹಾನ್​ ಸಾಧಕರಿಗೆ ಕೊಟ್ಟು ಗೌರವಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net