ಮಗಳನ್ನು ಕೊಟ್ಟಿದ್ದಲ್ಲದೇ, ನಿತ್ಯ ಹಸಿವು ನೀಗಿಸುತ್ತಿದ್ದ ಅತ್ತೆಯನ್ನೇ ಕೊಂದ ಅಳಿಯ! ಕಾರಣ ಏನು?

murder case
Published on

ರಾಮನಗರ: ಹೆಣ್ಣು ಕೊಟ್ಟ ಅತ್ತೆ, ಕಣ್ಣು ಕೊಟ್ಟ ದೇವರಿಗೆ ಸಮ ಅಂತಾರೆ. ಆದರೆ ಇಲ್ಲೊಬ್ಬ ಭೂಪ ಕ್ಷುಲ್ಲಕ ಕಾರಣಕ್ಕೆ ಅತ್ತೆಯನ್ನೇ ಕೊಂದಿದ್ದಾನೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತುಳಸಿದೊಡ್ಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಅಳಿಯನಿಂದಲೇ ಅತ್ತೆ ವಿಜಯಲಕ್ಷ್ಮೀ (65) ಕೊಲೆಯಾಗಿದ್ದಾರೆ. ಆರೋಪಿ ಭೀಮಾನಾಯ್ಕ(40)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಆತ ಅತ್ತೆಯನ್ನ ಕೊಂದದ್ದು ಏಕೆ ಗೊತ್ತಾ? ಇದನ್ನೂ ಓದಿರಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ವಿಜಯಲಕ್ಷ್ಮೀ ತನ್ನಗಿದ್ದ ಒಬ್ಬಳೇ ಮಗಳನ್ನು ಭೀಮಾನಾಯ್ಕನಿಗೆ ಕೊಟ್ಟು ಮದುವೆ ಮಾಡಿದ್ದಳು. ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮಾನಾಯ್ಕ ಮದ್ಯವ್ಯಸನಿಯಾಗಿದ್ದ. ನಿತ್ಯ ಕುಡಿದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹಾಗಾಗಿ ವಿಜಯಲಕ್ಷ್ಮೀಯೇ ಗಂಡ, ಮಗಳು, ಅಳಿಯನ ಜವಾಬ್ದಾರಿ ಹೊತ್ತುಕೊಂಡು ಕೂಲಿ ಕೆಲಸ ಮಾಡುತ್ತಾ ಸಂಸಾರ ದೂಗಿಸಿಕೊಂಡು ಹೋಗುತ್ತಿದ್ದಳು. ನಿನ್ನೆ(ಶುಕ್ರವಾರ) ರಾತ್ರಿ ಮನೆಗೆ ಬಂದ ಅಳಿಯ, ನನ್ನ ಬಳಿ ಮದ್ಯ ಖರೀದಲು ಹಣ ಇಲ್ಲ ಕೊಡು ಎಂದು ಅತ್ತೆಯನ್ನ ಕೇಳಿದ್ದಾನೆ.

ಸದ್ಯಕ್ಕೆ ಹಣ ಇಲ್ಲ ಎಂದ ಅತ್ತೆ ಮೇಲೆ ಸಿಟ್ಟಿಗೆದ್ದ ಅಳಿಯ, ಮನ ಬಂದಂತೆ ಥಳಿಸಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅತ್ತೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net