More

  ಉಳ್ಳಾಲದಲ್ಲಿ ಡ್ರಗ್ಸ್ ಸಹಿತ ಇಬ್ಬರ ಬಂಧನ

  ಉಳ್ಳಾಲ: ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ಅಡ್ಡರಸ್ತೆಯ ಬಳಿಯ ಮೈದಾನದಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  ಮೂಲತಃ ನಂದರಪಡ್ಪು ನಿವಾಸಿ, ಪ್ರಸ್ತುತ ಕೆದುಂಬಾಡಿಯಲ್ಲಿ ವಾಸವಿರುವ ನಿಯಾಝ್ ಯಾನೆ ನಿಯಾ(27) ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಿವಾಸಿ, ಪ್ರಸ್ತುತ ಬಾಳೆಪುಣಿಯಲ್ಲಿ ವಾಸವಿರುವ ಜೋರ್ಡನ್(19) ಬಂಧಿತರು. ಆರೋಪಿಗಳು ನವಗ್ರಾಮ ಸೈಟ್ ಬಳಿಯ ಮೈದಾನದಲ್ಲಿ ದ್ವಿಚಕ್ರ ವಾಹನ ಬಳಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

  ಬಂಧಿತರಿಂದ ಸುಮಾರು 20 ಸಾವಿರ ರೂ. ಮೌಲ್ಯದ 10.86 ಗ್ರಾಂ ಎಂಡಿಎಂಎ, ಎರಡು ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 37,500 ರೂ. ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts