ಮಗಳಂತೆ ಕಾಣುವ ಮಹಿಳೆಯನ್ನು ಮದುವೆಯಾದ ವ್ಯಕ್ತಿ; ಸೋಶಿಯಲ್​​ ಮೀಡಿಯಾದಲ್ಲಿ ಟೀಕೆ

Dad Slammed For Marrying Woman Who Looks Exactly Like His Daughter
Published on

ಅಮೆರಿಕ: 44 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗಳಂತೆ ಕಾಣುವ 28 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಈ ಜೋಡಿಯ ಸಂಬಂಧ ಕುರಿತಾಗಿ ಟೀಕೆಗೊಳಗಾಗಿದ್ದಾರೆ.

ಕ್ರಿಸ್ ಅವರು ವಿಚ್ಛೇದನ ಪಡೆದುಕೊಂಡು ಒಂಟಿಯಾಗಿದ್ದರು. ಇವರಿಗೆ ಒಬ್ಬಳು ಮಗಳಿದ್ದಾಳೆ. ಈಕೆ ಸಲೂನ್​ವೊಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಒಂದು ದಿನ ಕ್ರಿಸ್ ಅವರು ಸವಾನಾ ಅವರನ್ನು ಇದೇ ಸಲೂನ್​ನಲ್ಲಿ ಭೇಟಿಯಾಗುತ್ತಾರೆ. ಈಕೆ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಇಬ್ಬರ ಪರಿಚಯ ಸ್ನೇಹವಾಗಿ ಬದಲಾಗುತ್ತದೆ. ನಂತರ ಇಬ್ಬರ ನಡುವೆ ಇರುವ ಸ್ನೇಹ ಮದುವೆ ಮಾತುಕಥೆ ನಡೆಯುತ್ತದೆ.

ಸವನಾ ನಂತರ ತಮ್ಮ ಸಂಬಂಧದ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಈ ಮೂಲಕ ಇಬ್ಬನರು ನಡುವೆ ಇರುವ ವಯಸ್ಸಿನ ಅಂತರವನ್ನು ಹೇಳಿಕೊಳ್ಳುತ್ತಾರೆ. ನಂತರ ಈ ಇಬ್ಬರ ಸಂಬಂಧ ಮತ್ತು ಮಯಸ್ಸಿನ ಅಂತರ ಮತ್ತು ಇವರ ಜೋಡಿ ಕುರಿತಾಗಿ ಕೆಲವು ನೆಗಿಟಿವ್​ ಕಾಮೆಂಟ್​​ಗಳು ಬರತೊಡಗಿವೆ.

ಸವನಾ ಕ್ರಿಸ್ ಮಗಳಂತೆ ಕಾಣುತ್ತಿದ್ದಾರೆ. ನೀವು ನಿಮ್ಮ ಮಗಳೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೀರಾ?, ನನ್ನ ತಂದೆ ನನ್ನಂತೆಯೇ ಕಾಣುವ ವ್ಯಕ್ತಿಯನ್ನು ಮದುವೆಯಾದರೆ ನಾನು ಆಘಾತಕ್ಕೊಳಗಾಗುತ್ತೇನೆ" ಎಂದು ಜನರು ಕಾಮೆಂಟ್ ಮಾಡಿದ್ದಾರೆ.

ನಕಾರಾತ್ಮಕ ಕಾಮೆಂಟ್‌ಗಳ ಹೊರತಾಗಿಯೂ, ಕ್ರಿಸ್ ಮತ್ತು ಸವಾನಾ ವಿವಾಹವಾದರು ಮತ್ತು ಮೂರು ಮಕ್ಕಳನ್ನು ಪಡೆದಿದ್ದಾರೆ. " ನಮ್ಮದು ಒಂದು ದೊಡ್ಡ ಕುಟುಂಬ. ಯಾರು ಏನು ಹೇಳಿದರೂ ಪರವಾಗಿಲ್ಲ ಏಕೆಂದರೆ ನಾವು ಸಂತೋಷವಾಗಿದ್ದೇವೆ ಮತ್ತು ಅಷ್ಟೆ ಮುಖ್ಯ ಎಂದು ಸವನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net