ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ...ಆತನೀಗ ಅಸಂತೃಪ್ತ...!

Plant 14 May 20
Published on

ಶಾಪಿಂಗ್​ಗೆ ಹೋದಾಗ ಅಗತ್ಯ ವಸ್ತುಗಳ ಖರೀದಿಯೊಂದಿಗೆ...ಅಗತ್ಯ ವಿಲ್ಲದಿದ್ದರೂ ಇಷ್ಟ ಎಂಬ ಕಾರಣಕ್ಕೆ ಒಂದಷ್ಟು ವಸ್ತುಗಳನ್ನು ಕೊಳ್ಳುವುದು ಕೆಲವರ ಹವ್ಯಾಸ.

ಅದರಲ್ಲೂ ಮನೆಯ ಅಲಂಕಾರಿಕ ವಸ್ತುಗಳ ಖರೀದಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಚಾಕಲೇಟ್​ಗಳು..ಮದ್ಯದ ಬಾಟಲಿಗಳು, ಕರ್ಟನ್​..ಹೀಗೆ ಅವರವರ ಇಷ್ಟ, ಆಸಕ್ತಿಯ ವಸ್ತುಗಳನ್ನು ಕೊಳ್ಳುತ್ತಾರೆ.

ಆದರೆ ಇಲ್ಲೋರ್ವ ಮಹಿಳೆ ಶಾಪಿಂಗ್​ನಿಂದ ತಂದ ವಸ್ತುವನ್ನು ನೋಡಿ ಆಕೆಯ ಪತಿ ತಬ್ಬಿಬ್ಬಾಗಿದ್ದಲ್ಲದೆ, ಆಗಿನಿಂದಲೂ ಆತ ಅಸಂತುಷ್ಟನಾಗಿದ್ದಾನೆ..ಅಸಂತೃಪ್ತನಾಗಿದ್ದಾನೆ.

ಅಷ್ಟೇ ಅಲ್ಲ ಆ ಪತಿ ತನ್ನ ದುಃಖ, ಅಸಮಾಧಾನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡು ಸಾವಿರಾರು ಜನರ ಸಿಂಪತಿ ಗಿಟ್ಟಿಸಿಕೊಂಡಿದ್ದಾನೆ...!

ಆಸ್ಟ್ರೇಲಿಯಾದ ಮಹಿಳೆ ಸಾರಾ ಕಿರ್ನ್ಸ್ ಎಂಬುವರು ಅಂದು ಶಾಪಿಂಗ್​ಗೆಂದು ಹೋಗಿದ್ದರು. ಆದರೆ ವಾಪಸ್​ ಬರುವಾಗ ಎರಡು ದೊಡ್ಡ ಮರಗಳನ್ನೇ ಹೊತ್ತು ತಂದಿದ್ದಾರೆ.

ಎರಡು ದೊಡ್ಡ ಸಿಮೆಂಟ್ ಪಾಟ್​ನಲ್ಲಿರುವ ಮರಗಳನ್ನು ಹೊತ್ತು ತಂದು, ಮಲಗುವ ಕೋಣೆಯಲ್ಲಿರುವ ಬೆಡ್​ನ ಎರಡೂ ಕಡೆಗಳಲ್ಲಿ ಒಂದೊಂದನ್ನು ಇಟ್ಟಿದ್ದಾರೆ. ಆ ಸಸಿಗಳು ಎತ್ತರ ಇರುವುದರಿಂದ ಸಹಜವಾಗಿಯೇ ಪತಿಗೆ ಕಿರಿಕಿರಿ ಆಗಿದೆ.

ಮಹಿಳೆಯ ಪತಿ ತನ್ನ ಪತ್ನಿಯ ಶಾಪಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿಗೆ ಸರಿಯಾದ ಅಳತೆಯ, ಚಿಕ್ಕ ಸಸ್ಯಗಳನ್ನು ತರಲು ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಸ್ವಲ್ಪ ದಿನ ಹೋದರೆ ಪಕ್ಷಿಗಳೂ ಬಂದು ನೆಲೆಸಬಹುದು ಎಂದು ಅಲವತ್ತುಕೊಂಡಿದ್ದಾರೆ.

ಅವರ ಪೋಸ್ಟ್ ಓದಿದ ಹಲವರು ಪ್ರತಿಕ್ರಿಯೆ ನೀಡಿದ್ದು, ಸಮಾಧಾನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net